ಅಂಕೋಲಾ: ರೋಟರಿ ಕ್ಲಬ್‌ನ 2023- 24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಕೀಲ ವಿನೋದ್ ಶ್ಯಾನಬಾಗ್ ಹಾಗೂ ಕಾರ್ಯದರ್ಶಿಯಾಗಿ ವಸಂತ ನಾಯ್ಕ ಅಧಿಕಾರ ಸ್ವೀಕರಿಸಿದರು.
ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್‌ನ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ತನ್ನಾ ಮಾತನಾಡಿ ರೋಟರಿ ಕ್ಲಬ್‌ನ ಕಾರ್ಯಗಳ ಇತಿಹಾಸವನ್ನು ತಿಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಸಮಾಜಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಅಮಿತ ಕಾಮತ್, ಅಸಿಸ್ಟೆಂಟ್ ಗವರ್ನರ್ ವಸಂತ ರಾವ್, ಡಾ.ಸಂಜೀವ ನಾಯಕ, ಚೇತನ್ ಶೇಟ್, ದಿನಕರ ವೇದಿಕೆ ಸದಸ್ಯ ಪಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಕಾರವಾರ ರೋಟರಿಯನ್ ಡಿಸೋಜಾ, ಸುಭಾಷ್ ನಾರ್ವೇಕರ್, ನೂತನ ಅಧ್ಯಕ್ಷ ವಿನೋದ ಶ್ಯಾನಬಾಗ್, ವಕೀಲ ಉಮೇಶ್ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜ್ಯ ಸರಕಾರದ ಪ್ರಶಸ್ತಿ ಸ್ವೀಕರಿಸಿದ ನಾರಾಯಣ್ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಗೀತಾ ನಾಯಕ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸತೀಶ್‌ಕುಮಾರ್ ಮಹಾಲೆ ಪ್ರಸಕ್ತ ವರ್ಷದ ಸಾಧನೆಯ ಕುರಿತು ವರದಿವಾಚನ ಮಾಡಿದರು. ಸಂಜಯ್ ಲೋಕಪಾಲ್ ನಿರೂಪಿಸಿದರು. ವಸಂತ್ ನಾಯಕ ವಂದಿಸಿದರು. ವಿಜಯದೀಪ್ ಪಂಡಿತ್, ಮಂಗಲ ದಾಸ ಕಾಮತ್, ಲಕ್ಷ್ಮಿದಾಸ್, ದಾಮೋದರ ಪ್ರಭು ಮುಂತಾದವರು ಉಪಸ್ಥಿತರಿದ್ದರು.