Slide
Slide
Slide
previous arrow
next arrow

ಬಾವಿಗೆ ಬಿದ್ದು ಸಿವಿಲ್ ಇಂಜಿನಿಯರ್ ಸಾವು: ಆತ್ಮಹತ್ಯೆಯ ಶಂಕೆ

300x250 AD

ಅಂಕೋಲಾ : ಪಟ್ಟಣದ ಪಿ.ಎಲ್. ಡಿ ಬ್ಯಾಂಕ್ ಆವರಣದಲ್ಲಿರುವ ಕೂಲಿಕಾರರ ಸೊಸೈಟಿಗೆ ಸಂಬಂಧಿಸಿದ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ. ಶಾಂತಾದುರ್ಗಾ ದೇವಸ್ಥಾನದ ಹತ್ತಿರದ ನಿವಾಸಿ, ರಾಮಚಂದ್ರ ಪೆಡ್ನೇಕರ ಮೃತ ದುರ್ದೈವಿಯಾಗಿದ್ದು, ಸಿವಿಲ್ ಇಂಜಿನಿಯರ್ ಆಗಿದ್ದ ಈತ, ತಾಲ್ಲೂಕಿನ ನೂರಾರು ಮನೆಗಳ ವಿನ್ಯಾಸ ರಕ್ಷೆ ರಚನೆಯನ್ನು ( ಬ್ಲೂ ಪ್ರಿಂಟ್ ) ಅತೀ ಕಡಿಮೆ ಅವಧಿ ಹಾಗೂ ಕನಿಷ್ಟ ದರದಲ್ಲಿ ಮಾಡಿಕೊಡುವ ಮೂಲಕ ಹಲವರಿಗೆ ನೆರವಾಗಿದ್ದರು ಎಂದು ತಿಳಿದುಬಂದಿದೆ. ಇತ್ತೀಚಿಗೆ ತನ್ನಲ್ಲಿ ಕಾಣಿಸಿಕೊಂಡ ದೇಹಾರೋಗ್ಯ ಸಮಸ್ಯೆಯಿಂದ ನೊಂದು ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಅಥವಾ ಬಾವಿಗೆ ನೀರು ಸೇದಲು ಬಂದಾಗ ಜಾರುವಿಕೆಯಿಂದ ಆಯತಪ್ಪಿ ನೀರಲ್ಲಿ ಬಿದ್ದು ಮುಳುಗಿದ್ದಾರೆಯೇ ಎಂಬುದು ತಿಳಿದುಬರಬೇಕಿದೆ.

ಪಿಎಸ್ಐ ಗೀತಾ ಶಿರ್ಸಿಕರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದು,ಪೆಡ್ನೇಕರ ಸಾವಿನ ಕುರಿತಂತೆ ಪೋಲೀಸ ತನಿಖೆಯಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ . ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಬಾವಿಯಿಂದ ಮೃತ ದೇಹ ಮೇಲೆತ್ತಿದ್ದು, ಸ್ಥಳೀಯರು ಮತ್ತು ಪೊಲೀಸರು ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತರಾದ ವಿಜಯ ಕುಮಾರ ನಾಯ್ಕ ರಕ್ಷಕ ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದ್ದು, ಹಿರಿಯ ಸಾಮಾಜಿಕ ಕಾರ್ಯಕರ್ತ ಅಲಗೇರಿಯ ಸುರೇಶ್ ವೆರ್ಣೇಕರ, ಕನಸಿಗದ್ದೆಯ ಅನಿಲ ಮಹಾಲೆ, ಬೊಮ್ಮಯ್ಯ ನಾಯ್ಕ, ಹಾಗೂ ಸಾರ್ವಜನಿಕರು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top