• Slide
  Slide
  Slide
  previous arrow
  next arrow
 • ಭಾರತ ಸ್ಕೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಗೆ ಭಾಗವಹಿಸಿದ ಲಯನ್ಸ್ ವಿದ್ಯಾರ್ಥಿಗಳು

  300x250 AD

  ಶಿರಸಿ: ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ಜು.15 ರಿಂದ ಜು.17 ರವರೆಗೆ ಮೂರು ದಿನಗಳ ಕಾಲ ನಡೆದ ಭಾರತ ಸ್ಕೌಟ್ಸ್ & ಗೈಡ್ಸ್, ಕರ್ನಾಟಕ ಸಂಸ್ಥೆಯು ನಡೆಸಿರುವ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಇಲ್ಲಿನ ಲಯನ್ಸ್ ಶಾಲೆಯ 4 ಸ್ಕೌಟ್ಸ್ ವಿದ್ಯಾರ್ಥಿಗಳಾದ ಕು. ಧೀರಜ್ ನಾಯ್ಕ, ನವೀನ್ ಆಚಾರಿ, ಚಿನ್ಮಯ ನಾಯಕ, ಕೌಶಿಕ ನಾಯ್ಕ ಹಾಗೂ 5 ಗೈಡ್ಸ್ ವಿದ್ಯಾರ್ಥಿಗಳಾದ ಸುಪರ್ಣ ಹಿರೇಮಠ, ಗಗನಾ ಭಟ್, ಪ್ರಣತಿ ಹೆಗಡೆ, ಬಿ. ಎಮ್. ಅನುಪ್ರೀತಾ, ಕೀರ್ತಿ ಭೋವಿ ಭಾಗವಹಿಸಿದ್ದರು.

  ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಹಾಗೂ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ ಮಾರ್ಗದರ್ಶನ ನೀಡಿದ್ದು, ಪರೀಕ್ಷೆ ಬರೆದ ಶಾಲೆಯ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ರಾಷ್ಟ್ರಪತಿ ಪುರಸ್ಕಾರಕ್ಕೆ ಭಾಜನರಾಗಲೆಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಮುಖ್ಯ ಶಿಕ್ಷಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ಪಾಲಕರು ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top