ಕುಮಟಾ: ಮಾಸೂರು ಲುಕ್ಕೇರಿಯ ಬಬ್ರುಲಿಂಗೇಶ್ವರ ವಿದ್ಯಾಲಯ, ಅರಣ್ಯ ಇಲಾಖೆ, ಜಾಗ್ರತಿ ಸೇವಾ ಟ್ರಸ್ಟ್ ಹಾಗೂ ಸೃಷ್ಠಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಶ್ರೀಬಬ್ರುಲಿಂಗೇಶ್ವರ ವಿದ್ಯಾಲಯದಲ್ಲಿ ವನ ಮಹೋತ್ಸವವನ್ನು ಆಚರಿಸಲಾಯಿತು.
ಶಾಲಾ ಸಮಿತಿಯ ಅಧ್ಯಕ್ಷ ಮಂಜುನಾಥ ಪಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ರಕ್ಷಣೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ ಮಾಜಿ ಸದಸ್ಯ ಗೋವಿಂದ ಪಟಗಾರ, ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಜಗತ್ತಿನಲ್ಲಿ ಪರಿಸರ ಸಂರಕ್ಷಣೆ ಮಾಡುವುದು, ಗಿಡಗಳನ್ನು ಬೆಳೆಸುವುದು, ಉಳಿಸುವುದು ಅತಿ ಅಗತ್ಯವಾಗಿದೆ ಎಂದು ವಿವರಿಸಿದರು.
ಜಾಗೃತ ಸೇವಾ ಟ್ರಸ್ಟ್ನ ಅಧ್ಯಕ್ಷ ದಿನೇಶ ಭಂಡಾರಿ, ನಮ್ಮ ಸುತ್ತಮುತ್ತಲು ಗಿಡಮರಗಳನ್ನು ಬೆಳೆಸುವ ಬಗ್ಗೆ ತಿಳಿಸುತ್ತಾ, ಕಾರ್ಯಕ್ರಮಗಳಲ್ಲಿ ಗಿಡವನ್ನೇ ಗಿಫ್ಟ್ ಕೊಡುವ ಹವ್ಯಾಸ ಬೆಳೆಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು. ಶಾಲಾ ಅಧ್ಯಕ್ಷ ಎಚ್.ಎಚ್.ಪಟಗಾರ, ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಕಾರ್ಯ ಕ್ರಮವನ್ನು ಆಯೋಜನೆಗಾಗಿ ಸೃಷ್ಠಿ ಹಾಗೂ ಜಾಗ್ರತಿ ಸಂಸ್ಥೆಯವರನ್ನು ಅಭಿನಂದಿಸಿದರು.
ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ ಸ್ವಾಗತಿಸಿದರು. ಸೃಷ್ಠಿ ಸಂಸ್ಥೆಯ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು. ವಿಂದ್ಯಾ ಪಟಗಾರ ನಿರೂಪಿಸಿದರು. ರಾಜೇಶ್ವರಿ ಶೆಟ್ಟಿ ವಂದಿಸಿದರು. ಸಭಾ ಕಾರ್ಯ ಕ್ರಮದ ನಂತರ ಅರಣ್ಯ ಇಲಾಖೆಯಿಂದ ನೀಡಿದ್ದ ವಿವಿಧ ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು. ಶಾಲೆಯ ಎಲ್ಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.