Slide
Slide
Slide
previous arrow
next arrow

ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಿ: ಸರ್ಕಾರಕ್ಕೆ ಜೈನ ಸಮಾಜದಿಂದ ಮನವಿ

300x250 AD

ದಾಂಡೇಲಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ಜೈನ ಮುನಿ ಮಹಾರಾಜರುಗಳಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಂದೇಶ್ ಎಸ್.ಜೈನ್ ಮಾತನಾಡಿ, ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿಬೇಕು ಹಾಗೂ ಜೈನಮುನಿಗಳಿಗೆ ಸೂಕ್ತ ರೀತಿ ರಕ್ಷಣೆ ಕೊಡುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು. ಹತ್ಯೆ ಮಾಡಿದ ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸಿದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಮಹಾವೀರ ನೇರ್ಲೆಕರ್, ಸಮಾಜ ಪ್ರಮುಖರುಗಳಾದ ಶ್ರೀಕಾಂತ್ ದೇವಕಿ, ಎಸ್.ಕೆ.ಬನ್ಸಾಲಿ, ಮಹಾವೀರ ಬಂಡಿ, ಅಭಯ್.ಎಸ್. ಸದಲಗಿ, ಶಾಂತಿನಾಥ್ ಟೋಪಣ್ಣನವರ್, ಅನಂತ್.ಪಿ. ಕುಡಚಿ, ಉಜ್ವಲ ಉದಯ್ ಶಾ,  ರುದ್ರಪ್ಪ,  ಸುರೇಶ್.ಆರ್.ಜಿ, ಸಂತೋಷ್ ಜೈನ್, ಭೂಪೇಂದ್ರ ಜೈನ್, ಸೋನಲ್.ಎಸ್.ಜೈನ್, ಪ್ರಶಾಂತ್, ವಿಜಯ್, ಭಾರತಿ ಕುಡಚಿ, ಉದಯ ಮಂಗಲದಾಸ್ ಶಾ, ಜಯಶ್ರೀ, ವಿಜಯಲಕ್ಷ್ಮಿ ನಾಗರತ್ನಾ, ನಿಶಾ ಜೈನ್, ರವಿ ಜೈನ್, ಆದಿತ್ಯ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top