Slide
Slide
Slide
previous arrow
next arrow

ರಾಷ್ಟ್ರೋತ್ಥಾನ ಸೇವಾ ಸಮಿತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ

300x250 AD

ಬೆಂಗಳೂರು: ಸ್ವ-ಉದ್ಯೋಗಕ್ಕೆ ಒತ್ತು ಕೊಡುವ ಸಲುವಾಗಿ, ರಾಷ್ಟೋತ್ಥಾನದ ಸೇವಾ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು.

ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ಸಕ್ರಿಯವಾಗಿರುವ 12 ಸೇವಾ ವಸತಿಗಳಲ್ಲಿ 3 ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ನೀಡಿ, ಈ ದಿನ 62 ಹೊಲಿಗೆ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಯಿತು.

300x250 AD

270 ಮಂದಿ ಸ್ವ-ಉದ್ಯೋಗ : 11 ಸೇವಾ ವಸತಿಗಳಲ್ಲಿ ಹೊಲಿಗೆ ತರಬೇತಿಯೊಂದಿಗೆ ಕಂಪ್ಯೂಟರ್ ಹಾಗೂ ಬ್ಯೂಟೀಷಿಯನ್ ತರಬೇತಿಯನ್ನೂ ನೀಡಲಾಗುತ್ತಿದ್ದು, ಒಟ್ಟು 350ಕ್ಕೂ ಹೆಚ್ಚಿನ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈವರೆಗೂ ಒಟ್ಟು 450+ ಮಂದಿ ಉಚಿತ ಹೊಲಿಗೆ ತರಬೇತಿ ಪಡೆದಿದ್ದು, 270 ಮಂದಿ ಸ್ವ- ಉದ್ಯೋಗ ಮಾಡುತ್ತಿದ್ದಾರೆ.

1995ರಲ್ಲಿ ಪ್ರಾರಂಭ: ಸೇವಾ ವಸತಿ ಯೋಜನೆಯನ್ನು ರಾಷ್ಟೋತ್ಥಾನವು ಬೆಂಗಳೂರಿನ ಸ್ಲಂಗಳ ಸಮಗ್ರ ವಿಕಾಸಕ್ಕಾಗಿ 1995ರಲ್ಲಿ ಪ್ರಾರಂಭಿಸಿತು. ಸದ್ಯ, 570 ಸ್ಲಂಗಳ ಪೈಕಿ 230 ಸ್ಲಂಗಳಲ್ಲಿ ಶಾಲಾ ನಂತರದ ಕಲಿಕಾ ಕೇಂದ್ರಗಳು, ವೃತ್ತಿಪರ ತರಬೇತಿ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 75 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದು, 2000+ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ.

Share This
300x250 AD
300x250 AD
300x250 AD
Back to top