Slide
Slide
Slide
previous arrow
next arrow

ಚೆನ್ನಮ್ಮ ಪಾರ್ಕ್’ಗೆ ಶಾಸಕ ಶೆಟ್ಟಿ ಭೇಟಿ; ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಸೂಚನೆ

300x250 AD

ಕುಮಟಾ: ಪಟ್ಟಣದ ಪ್ರಸಿದ್ಧ ಉದ್ಯಾನ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಉದ್ಯಾನದ ಅಭಿವೃದ್ಧಿಗೆ ಅಗತ್ರ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಹೆಗಡೆ ಕ್ರಾಸ್ ಬಳಿಯಿರುವ ಕಿತ್ತೂರು ಚೆನ್ನಮ್ಮ ಉದ್ಯಾನದಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಉದ್ಯಾನದ ತುಂಬೆಲ್ಲ ಗಿಡಗಂಟಿಗಳು ಬೆಳೆದುಕೊಂಡು ಕ್ರಿಮಿ ಕೀಟಗಳ ಆಗರವಾಗಿದೆ. ಮಕ್ಕಳ ಆಟಿಕೆ ಸಾಮಗ್ರಿಗಳೆಲ್ಲ ತುಕ್ಕು ಹಿಡಿದು, ಮಕ್ಕಳನ್ನು ಅವುಗಳಲ್ಲಿ ಆಟವಾಡಿಸದ ದುಃಸ್ಥಿತಿ ಎದುರಾಗಿದೆ. ಈ ಉದ್ಯಾವನದ ಅಭಿವೃದ್ಧಿ ಪಡಿಸುವಂತೆ ಅನೇಕರು ಶಾಸಕ ದಿನಕರ ಶೆಟ್ಟಿ ಅವರ ಗಮನಕ್ಕೆ ತಂದಿದ್ದರು. ಅಲ್ಲದೇ ಮಾಧ್ಯಮಗಳು ಸಹ ಸಾಕಷ್ಟು ಬಾರಿ ಜನಪರ ವರದಿ ಪ್ರಕಟಿಸಿದ್ದವು. ಮಾಧ್ಯಮಗಳ ಮತ್ತು ಜನರ ಆಗ್ರಹಕ್ಕೆ ಸ್ಪಂದಿಸಿದ ಶಾಸಕರು ಉದ್ಯಾನಕ್ಕೆ ಭೇಟಿ ನೀಡಿ, ಅಲ್ಲಿನ ದುಃಸ್ಥಿತಿಯನ್ನು ವೀಕ್ಷಿಸಿದ್ದಾರೆ.
ಈ ಉದ್ಯಾನಕ್ಕೆ ನೂರಾರು ಪುಟಾಣಿ ಮಕ್ಕಳು ಆಟವಾಡಲು ಬರುವುದರಿಂದ ಮೊದಲು ತುಕ್ಕು ಹಿಡಿದ ಮಕ್ಕಳ ಆಟಿಕೆಗಳನ್ನು ಬದಲಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಕಳೆ ಗಿಡಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಜೊತೆಗೆ ಕಾಲುದಾರಿಯಲ್ಲಿ ನೀರು ನಿಲ್ಲುವುದನ್ನು ತಡೆಯಲು ಅಗತ್ಯ ತುರ್ತು ಕಾಮಗಾರಿಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಮತ್ತು ಉದ್ಯಾವನವನ್ನು ಆಕರ್ಷಕವಾಗಿ ಸುಂದರವಾಗಿ ಕಂಗೊಳಿಸುವಂತೆ ಅಗತ್ಯ ಯೋಜನೆ ರೂಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಿರಣ ಅಂಬಿಗ, ಅನಿಲ್ ಹರ್ಮಲಕರ, ಮುಖ್ಯಾಧಿಕಾರಿ ವಿದ್ಯಾಧರ ಕಲಾದರ್, ಅಭಿಯಂತರ ಉಮೇಶ ಮಡಿವಾಳ, ಪ್ರಮುಖರಾದ ಚೇತೇಶ ಶಾನಭಾಗ, ಭಾಸ್ಕರ ಚಂದಾವರ್, ಮಂಜುನಾಥ ಮಡಿವಾಳ ಮತ್ತಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top