ಸಿದ್ದಾಪುರ: ಕಾವಂಚೂರು ಮಲೆನಾಡ ಪ್ರೌಢಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಟಿ.ನಾಯ್ಕ ಗೋಳಗೋಡ ಅವರ ನಿವೃತ್ತಿ ನಿಮಿತ್ತ ಸನ್ಮಾನ ಸಮಾರಂಭ ನೆರವೇರಿತು.
ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಕಾರ್ಯಕ್ರಮದಲ್ಲಿ ಮಾತನಾಡಿ, ಪಿ.ಟಿ.ನಾಯ್ಕ ಗೋಳಗೋಡರವರು ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ 41 ವರ್ಷ ಉತ್ತಮ ಸೇವೆ ನೀಡಿದ್ದಾರೆ. ಶಾಲೆಯ ಪ್ರಗತಿ ಹಂತದಲ್ಲಿ ತಮ್ಮ ಕ್ರಿಯಾಶೀಲ ಸೇವೆ ನೀಡಿದ್ದಾರೆ. ಶಾಲೆಯ ಪ್ರಗತಿ ಹಂತದಲ್ಲಿ ತಮ್ಮ ಕ್ರಿಯಾಶೀಲ ಸೇವೆ ನೀಡಿ ವಿದ್ಯಾರ್ಥಿ ಹಾಗೂ ಪಾಲಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿ ಪ್ರೌಢಶಾಲೆ ಪರವಾಗಿ ಹಾಗೂ ವೈಯಕ್ತಿಕವಾಗಿ ಸನ್ಮಾನಿಸಿದರು.
ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ವಿ.ಕೆ.ಮಾಡಿವಾಳ, ಶಾಲಾ ಬೆಳವಣಿಗೆಯಲ್ಲಿ ಕಛೇರಿಯ ಶಿಸ್ತು ಹಾಗೂ ಕರ್ತವ್ಯ ಪ್ರಜ್ಞೆ ಮುಖ್ಯವಾದುದು ಎಂದು ಹೇಳಿದರು. ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಲವಳ್ಳಿ ಮಾತನಾಡಿ, ವಿದ್ಯಾಸಂಸ್ಥೆ ಊರಿಗೊಂದು ಆಸ್ತಿ. ಅದನ್ನು ಬೆಳೆಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ತಾ.ಪಂ ಮಾಜಿ ಸದಸ್ಯ ನಾಸೀರಖಾನ್ ವಲ್ಲೀಖಾನ್ ಸಾಬ್ ನೆಜ್ಜೂರು ಮಾತನಾಡಿ, ಪಿ.ಟಿ.ನಾಯ್ಕ ರವರು ದೀರ್ಘಕಾಲದ ಸೇವೆ ನೀಡಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದರು. ನಿವೃತ್ತ ಶಿಕ್ಷಕಿ ಕೆ.ಎಲ್. ಗಾಯತ್ರಿ, ನಿವೃತ್ತ ಶಿಕ್ಷಕ, ಬಿ. ಜಿ. ನಾಯ್ಕ ಕಾವಂಚೂರ, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿ ಶಿವರಾಂ ಅಕ್ಕುಂಜಿ ಮಾತನಾಡಿದರು. ಸನ್ಮಾನಿತ ಪಿ.ಟಿ.ನಾಯ್ಕ ಗೋಳಗೋಡ ಮಾತನಾಡಿ, ತನಗೆ ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸಲ್ಲಿಸಿ, ಕಛೇರಿಯ ಸುವ್ಯವಸ್ಥೆಯಲ್ಲಿ ತಾನು ಪ್ರೀತಿಯಿಂದ ಸೇವೆ ನೀಡಿದ್ದೇನೆ. ವೃತ್ತಿಯನ್ನು ಪ್ರೀತಿಸಿದ್ದೇನೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಹೇಳಿದರು.
ನೂತನ ಶಿಕ್ಷಕ ರಾಜು ನಾಯ್ಕ ಅವರನ್ನು ಸ್ವಾಗತಿಸಲಾಯಿತು. ಅಧ್ಯಕ್ಷತೆಯನ್ನು ಕಾವಂಚೂರ ಗ್ರಾ.ಪಂ. ಅಧ್ಯಕ್ಷ ಜಿ.ಟಿ. ನಾಯ್ಕ ಗೋಳಗೋಡ ರವರು ಮಾತನಾಡಿ ಸ್ಥಳೀಯ ಪ್ರೌಢಶಾಲೆಯ ಪ್ರಾರಂಭದಲ್ಲಿ ಪಿ.ಟಿ. ನಾಯ್ಕ ಮನೆತನದ ಕೊಡುಗೆ ಅಪಾರ ಎಂದು ಹೇಳಿ ಉತ್ತಮ ಸೇವೆ ನೀಡಿದ ಪಿ.ಟಿ. ನಾಯ್ಕರನ್ನು ಅಭಿನಂದಿಸಿದರು. ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ, ಮುಖ್ಯಶಿಕ್ಷಕ ಸುರೇಶ ಈ. ರಿಂದ ಸ್ವಾಗತ. ಕಿರಣರಿಂದ ಸನ್ಮಾನ, ಪತ್ರವಾಚನ, ಗಂಗಮ್ಮ ಪಿ.ಜಿ. ಅವರಿಂದ ನಿರೂಪಣೆ. ಕಿರಣ ಡಿ. ರವರಿಂದ ವಂದನಾರ್ಪಣೆ ನಡೆಯಿತು.