• Slide
    Slide
    Slide
    previous arrow
    next arrow
  • ಜು.20 ಕ್ಕೆ ‘ಸಹಕಾರಿ ಸಾಕ್ಷರತೆ’ ಪುಸ್ತಕ ಬಿಡುಗಡೆ ಸಮಾರಂಭ

    300x250 AD

    ಶಿರಸಿ: ಹಿರಿಯ ಸಹಕಾರಿ, ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ‌ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬರೆದಿರುವ ‘ಸಹಕಾರಿ ಸಾಕ್ಷರತೆ’ ಪುಸ್ತಕ ಬಿಡುಗಡೆ ಸಮಾರಂಭ ಜು.20, ಗುರುವಾರ ಬೆಳಿಗ್ಗೆ 10.30ಕ್ಕೆ ಶಿರಸಿಯ ಮಧುವನ ಹೋಟೆಲ್’ನ ಆರಾಧನಾ ಸಭಾಂಗಣದಲ್ಲಿಆಯೋಜಿಸಲಾಗಿದೆ.

    ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ, ಎಂಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಶೆಟ್ಟಿ ಪುಸ್ತಕ ಬಿಡುಗಡೆ ನೆರವೇರಿಸಲಿದ್ದು, ಕೃತಿಕಾರರ ಸಹಕಾರಿ ಗುರು, ಸಹಕಾರಿ ರತ್ನ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಇವರಿಗೆ ಕೃತಿ ಸಮರ್ಪಣೆ ನಡೆಯಲಿದೆ.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಎಂಎಸ್ ಅಧ್ಯಕ್ಷ ಸಹಕಾರಿ ರತ್ನ ಜಿ.ಎಂ.ಹೆಗಡೆ ಹುಳಗೋಳ ವಹಿಸಲಿದ್ದು, ಕೃತಿಯನ್ನು ಖ್ಯಾತ ಅಂಕಣಕಾರ, ಪರಿಸರ ಬರಹಗಾರ ಶಿವಾನಂದ ಕಳವೆ ಪರಿಚಯಿಸಲಿದ್ದಾರೆ. ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ‌ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಕೃತಿಕಾರರ ಮಾತುಗಳನ್ನಾಡಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top