ಶಿರಸಿ: ಇಲ್ಲಿನ ಬಾಪೂಜಿ ನಗರದಲ್ಲಿ ಬಾಲಕನ ಮೇಲೆ ಬೀಡಾಡಿ ನಾಯಿಯೊಂದು ಹಟಾತ್ ದಾಳಿ ನಡೆಸಿ, ಬಾಲಕನನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಪೂಜಿ ನಗರದಲ್ಲಿ ಇತ್ತೀಚೆಗೆ ಬೀಡಾಡಿ ನಾಯಿಗಳು ಹೆಚ್ಚಾಗಿದ್ದು, ನಗರಸಭೆಯ ದಿವ್ಯ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. ಇಂತಹ ಘಟನೆಗಳಿಂದ ಜನರಲ್ಲಿ ಭಯ ಮೂಡಿದ್ದು, ಈಗಲಾದರೂ ನಗರಸಭೆ ಬಿಡಾಡಿ ನಾಯಿ ಬಗ್ಗೆ ಎಚ್ಚೆತ್ತುಕೊಳ್ಳಲು ಬಾಪೂಜಿ ನಗರದ ಜನರು ಆಗ್ರಹಿಸಿದ್ದಾರೆ.