Slide
Slide
Slide
previous arrow
next arrow

ಆಹಾರ ಭದ್ರತೆಗಾಗಿ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ : ಡಾ. ಜಗದೀಶ ನಾಯ್ಕ

300x250 AD

ಗೋಕರ್ಣ : ಇಲ್ಲಿಯ ಭದ್ರಕಾಳಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಲಯನ್ಸ್ ಕ್ಲಬ್, ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ ನಾಯಕ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದಾಗಿ ಸಮಸ್ಯೆಗಳು ಹೆಚ್ಚುತ್ತಿದೆ. ಇದರಿಂದಾಗಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗದೇ ಅನಕ್ಷರಸ್ಥರ ಸಂಖ್ಯೆಯೂ ಕೂಡ ಅಧಿಕವಾಗುತ್ತದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣಕ್ಕೆ ಸರಕಾರ ತನ್ನದೇ ಆದ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಕೂಡ ಇವುಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಶಿಕ್ಷಣ ಪ್ರಸಾರ ಮಂಡಳದ ಕಾರ್ಯದರ್ಶಿ ಜಿ.ಎನ್.ನಾಯಕ ಜನಸಂಖ್ಯೆ ನಿಯಂತ್ರ ಅಗತ್ಯವಾಗಿದೆ. ಜನಸಂಖ್ಯೆ ಹೆಚ್ಚುತ್ತಿದ್ದರೆ ಆಹಾರ ಸಮಸ್ಯೆ ಕೂಡ ಹೆಚ್ಚಾಗಲಿದೆ. ಈ ಎಲ್ಲ ದೃಷ್ಟಿಯನ್ನು ಇಟ್ಟುಕೊಂಡು ಪ್ರತಿಯೊಬ್ಬರು ಆಯಾ ಮಿತಿಯೊಳಗೆ ಇರುವಂತಾಗಬೇಕು ಎಂದರು.

300x250 AD

ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಹೇಶ ನಾಯಕ, ಅಮಿತ ಗೋಕರ್ಣ, ಆರೋಗ್ಯ ನಿರೀಕ್ಷಕ ಮಹಾಂತೇಶ ಹೂಗಾರ, ಉಪನ್ಯಾಸಕ ರಾಮಮೂರ್ತಿ ನಾಯಕ, ಉಪನ್ಯಾಸಕರಾದ ಸಂದೀಪ ನಾಯಕ, ರೋಹಿತ್ ನಾಯಕ, ಸಾವಿತ್ರಿ ಗೌಡ ಇತರರಿದ್ದರು. ಪ್ರಾಚಾರ್ಯ ಎಸ್.ಸಿ. ನಾಯ್ಕ ಸ್ವಾಗತಿಸಿದರು. ಉಪನ್ಯಾಸಕಿ ಪಲ್ಲವಿ ಹೆಗಡೆ ನಿರ್ವಹಿಸಿದರು. ನಿವೃತ್ತ ಉಪನ್ಯಾಸಕ ಮಹೇಶ ನಾಯಕ ವಂದಿಸಿದರು.

Share This
300x250 AD
300x250 AD
300x250 AD
Back to top