• Slide
  Slide
  Slide
  previous arrow
  next arrow
 • ಕಾಗೇರಿಯವರ ಜನ್ಮದಿನ: ಅಭಿಮಾನಿಗಳಿಂದ ರಕ್ತದಾನ ಶಿಬಿರ

  300x250 AD

  ಸಿದ್ದಾಪುರ: ಪಟ್ಟಣದ ಶ್ರೇಯಸ್ ಆಸ್ಪತ್ರೆಯಲ್ಲಿ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರಕ್ತ ಕೇಂದ್ರ ಹಾಗೂ ಸಿದ್ದಾಪುರದ ಶ್ರೇಯಸ್ ಆಸ್ಪತ್ರೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಮಾಜಿ ಸ್ಪೀಕರ್ ವೀಶ್ವೇಶ್ವರ ಹೆಗಡೆ ಕಾಗೇರಿಯವರ ಜನುಮ ದಿನದ ಅಂಗವಾಗಿ ರಕ್ತದಾನ ಶಿಬಿರ ನಡೆಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

  ಕಾರ್ಯಕ್ರಮವನ್ನು ವೈದ್ಯ ದಂಪತಿಗಳಾದ ಡಾ.ಕೆ.ಶ್ರೀಧರ ವೈದ್ಯ ಹಾಗೂ ಡಾ.ಸುಮಂಗಲಾ ವೈದ್ಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಡಾ.ಕೆ.ಶ್ರೀಧರ ವೈದ್ಯ ಮಾತನಾಡಿ ರಕ್ತ ದಾನ ನ್ನುವಂತಾದ ಅತ್ಯಂತ ಮಹತ್ವದಾಗಿದೆ. ಯಾಕೆಂದರೆ ರಕ್ತದಾನ ಎನ್ನುವಂತಹದು ಅತ್ಯಂತ ಶ್ರೇಷ್ಠವಾಗಿರುವುದಾಗಿದೆ. ರಕ್ತವನ್ನು ಯಾವುದೆ ಕಾರ್ಖಾನೆಗಳಲ್ಲಿ ಉತ್ಪತ್ತಿ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ಯಾವುದೊ ಪ್ರಯೋಗಲಾಯದಲ್ಲಿಯೂ ರಕ್ತ ಸಿದ್ದಪಡಿಸಲು ಆಗುವುದಿಲ್ಲ. ನಮಗೆ ಅಪಘಾತ ಹಾಗೂ ಹೆರಿಗೆ ಮತ್ತು ಸರ್ಜರಿ ಮೊದಲಾದ ಸಮಯದಲ್ಲಿ ರಕ್ತ ತೀರ ಅವಶ್ಯವಾಗಿರುತ್ತದೆ. ಈ ಕಾರಣದಿಂದ ರಕ್ತದ ಅವಶ್ಯಕತೆ ಇರುತ್ತದೆ. ಇಂದು ಅಗತ್ಯ ಇರುವಷ್ಟು ರಕ್ತ ಸಿಗುತ್ತಿಲ್ಲ. ಹೆಚ್ಚಿನ ಜನರು ರಕ್ತದಾನವನ್ನು ಮಾಡುವಂತಾಗಬೇಕು.ರಕ್ತದಾನವನ್ನು ಮಾಡುವುದು ಆರೋಗ್ಯವಂತರ ಕರ್ತವ್ಯ ಎಂದರು.
  ಬಿಜೆಪಿ ಮಂಡಲ ಅಧ್ಯಕ್ಷರಾದ ಮಾರುತಿ ಟಿ.ನಾಯ್ಕ ಹೊಸೂರು ಮಾತನಾಡಿ, ಇಂದು ರಕ್ತ ದಾನವನ್ನು ಮಾಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ. ನಾವು ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿಮಾನಿಗಳ ಬಳಗದಿಂದ ಈ ಶಿಬಿರವನ್ನು ಮಾಡುವುದರ ಮೂಲಕ ಆಚರಿಸುತ್ತಿದ್ದೇವೆ. ಕಾಗೇರಿಯವರು ಆರು ಅವಧಿಗೆ ಶಾಸಕರಾದವರು. ಸಚಿವರಾದರು, ಅವರು ಸಭಾಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆದರೆ ಅವರಿಗೆ ಯಾವುದೆ ಸ್ಥಾನ ಮಾನಕ್ಕೆ ಹೊದರೂ ಅತ್ಯುತ್ತಮವಾಗಿ ನಿರ್ವಹಿಸಿದವರು. ರಾಜಕಾರಣದಲ್ಲಿ ಯಾವುದೆ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿರುವುದು ನಮ್ಮ ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿ ಎಂದರು.
  ಇದೇ ಸಂದರ್ಭದಲ್ಲಿ ಮಕ್ಕಳ ತಜ್ಞರಾದ ಡಾ.ಶ್ರೇಯಸ್ ವೈದ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ವೇದಿಕೆಯಲ್ಲಿ ಸರಕಾರಿ ಆಸ್ಪತ್ರೆಯ ಡಾ.ಜ್ಯೋತಿ ಹೆಗಡೆ, ಡಾ.ಸುಮಂಗಲಾ ವೈದ್ಯ ಉಪಸ್ಥಿತರಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿಮಾನಿಗಳ ಬಳಗದ ಸಂಚಾಲಕ ಅಣ್ಣಪ್ಪ ಜಿ.ನಾಯ್ಕ ಕಡಕೇರಿ ಸ್ವಾಗತಿಸಿದರು. ಪಟ್ಟಣ ಪಂಚಾಯತ ಸದಸ್ಯರಾದ ಗುರುರಾಜ ಶಾನಭಾಗ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ ಕೊಡಿಯ ವಂದಿಸಿದರು. 42 ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.
  ಈ ಸಂದರ್ಭದಲ್ಲಿ ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಹಾಬಲೇಶ್ವ ಹೆಗಡೆ ಮತ್ತಿಹಳ್ಳಿ, ಪಟ್ಟಣ ಪಂಚಾಯತ ಸದಸ್ಯರಾದ ನಂದನ ಬೋರ್ಕರ್, ಟಿ.ಎಂ.ಎಸ್ ನಿರ್ದೇಶಕರಾದ ಎಂ.ಎನ್.ಹೆಗಡೆ ತಲೆಕೇರಿ, ಪಟ್ಟಣ ಪಂಚಾಯತ ನಾಮ ನಿರ್ದೇಶಿತ ಸದಸ್ಯರುಗಳಾದ ಮಂಜುನಾಥ ಭಟ್, ಸುರೇಶ ನಾಯ್ಕ ಬಾಲಿಕೊಪ್ಪ, ರಾಜೇಂದ್ರ ಕೀಂದ್ರ, ಕೊಂಡ್ಲಿ, ಪ್ರಮುಖರಾದ ಶಾಂತಕುಮಾರ ಭಟ್ಟ, ತಿಮ್ಮಪ್ಪ ಎಂ.ಕೆ., ವಿಜೇತ್ ಷಣ್ಮುಖ ಗೌಡರ್, ತೋಟಪ್ಪ ನಾಯ್ಕ ಹೊಸೂರು, ಬಿ.ವೆಂಕಟೇಶ ಹೊಸೂರು, ಶ್ರೀಕಾಂತ ಭಟ್ಟ ಕೊಳಗಿ, ಗಿರೀಶ ಶೇಟ್ ಆಲ್ಮನೆ, ರೋಹಿದಾಸ ಮಡಿವಾಳ, ಆನಂದ ಮಡಿವಾಳ ಕುಣಜಿ, ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಎನ್.ಪೈ ಬಿಳಗಿ, ಗಣೇಶ ಶಾನಭಾಗ, ಜ್ಯೋತಿ ವಿಜಯ ಹೆಗಡೆ, ಶ್ಯಾಮಲ ರವಿ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top