Slide
Slide
Slide
previous arrow
next arrow

ಶಿರಸಿ ಪೊಲೀಸರ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ದಂಡ, ಪ್ರಕರಣ ದಾಖಲು

300x250 AD

ಶಿರಸಿ: ಇಲ್ಲಿನ ಸಾಮ್ರಾಟ್ ಹೋಟೆಲ್ ಮುಂದೆ ,ಶಿವಾಜಿ ಚೌಕ್,ಜ್ಯೂಸರ್ಕಲ್, ಐದು ರಸ್ತೆ ಸರ್ಕಲ್ , ಅಶ್ವಿನಿ ಸರ್ಕಲ್ ರಾಘವೇಂದ್ರ ಸರ್ಕಲ್, ನಿಲೇಕಣಿ, ಯಲ್ಲಾಪುರ ನಾಕಾ ಇತ್ಯಾದಿ ಸ್ಥಳಗಳಲ್ಲಿ ಖಾಸಗಿ ಬಸ್ ಗಳ ಅತಿ ವೇಗದ ಚಾಲನೆ ,ಕುಡಿದು ವಾಹನ ಚಲಾಯಿಸುವವರ ವಿರುದ್ಧ, ಹಾಗೂ ಹೈ ಬೀಂ ಲೈಟ್ ( ಡಿಮ ಅಂಡ್ ಡಿಪ್ ಬಳಸದೆ, ಕಣ್ಣು ಕುಕ್ಕುವ ಫೋಕಸ್ ಲೈಟ್ ಬಳಸುವ) ವಾಹನ ಚಲಾಯಿಸುವವರ ವಿರುದ್ಧ ಕೇಸುಗಳನ್ನು ದಾಖಲಿಸಿ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಸುಗಮ, ಶ್ರೀಕುಮಾರ್, ದುರ್ಗಾಂಬ ಬಸ್ ವಾಹನಗಳ ಚಾಲಕರುಗಳ ವಿರುದ್ಧ ಓವರ್ ಸ್ಪೀಡ್ ಪ್ರಕರಣ ದಾಖಲಿಸಿ ತಲಾ ಒಂದು ಸಾವಿರ ರೂಗಳಂತೆ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಕಾರುಗಳು ಹಾಗೂ ಖಾಸಗಿ ಬಸ್ಸುಗಳ ವಿರುದ್ಧ ಹೈ ಬೀಮ್ ಲೈಟ್ ಬಳಸದೆ ಇದ್ದ ಕಾರಣ ತಲಾ ₹ 500 ರಂತೆ 3 ಪ್ರಕರಣ ದಾಖಲಿಸಿದ್ದಾರೆ.

300x250 AD

ಗೋಕರ್ಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಸುಗಮ ಬಸ್ಸಿನ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದವನನ್ನು ಸಾಮ್ರಾಟ್ ಹೋಟೆಲ್ ಹತ್ತಿರ ವಶಕ್ಕೆ ಪಡೆದು ಆಲ್ಕೋಮೀಟರ್ ಮೂಲಕ ಚೆಕ್ ಮಾಡಿ ಮದ್ಯಪಾನ ಮಾಡಿದ್ದು ದೃಢವಾಗಿದ್ದರಿಂದ ಪ್ರಕರಣ ದಾಖಲಿಸಿ, ಆ ಚಾಲಕನನ್ನು ಬದಲಿಗೆ ಬೇರೆ ಚಾಲಕನನ್ನು ನೇಮಿಸಿ ಬೆಂಗಳೂರಿಗೆ ದುರ್ಗಾಂಬ ಬಸ್ ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದು ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.

DSYP ಗಣೇಶ್ ಕೆ.ಎಲ್. ಮಾರ್ಗದರ್ಶನದಲ್ಲಿ CPI ರಾಮಚಂದ್ರ ನಾಯಕ,PSI ರವರುಗಳಾದ ಭೀಮಶಂಕರ್, ರಾಜ್ ಕುಮಾರ್,ASI ರವರುಗಳಾದ ಕಟ್ಟಿ,ಹೊಸಕಟ್ಟ ,ಸಿಬ್ಬಂದಿಗಳಾದ ಮಹಾಂತೇಶ, ಲಕ್ಷ್ಮಣ ಸಂದೀಪ ಮೋಹನ , ಪ್ರವೀಣ, ರಾಮಯ್ಯ, ಪಾಂಡು ,ರಾಮದೇವ ,ನಾಗಪ್ಪ, ಹನುಮಂತ, ಸುರೇಶ್, ಅನಿಲ್ , ನಾಗಪ್ಪ, ಶಿವಲಿಂಗ, ಸದ್ದಾಂ, ಜಗದೀಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top