Slide
Slide
Slide
previous arrow
next arrow

ಸ್ವರ್ಣವಲ್ಲೀ ಶ್ರೀಗಳ ವೃಕ್ಷ ಮಂತ್ರಾಕ್ಷತೆ ನಾಡಿಗೇ ಮಾದರಿ: ಡಾ.ಅಜ್ಜಯ್ಯ

300x250 AD

ಶಿರಸಿ: ಚಾತುರ್ಮಾಸ್ಯ ವೃತಾಚರಣೆಯ ಅವಧಿಯಲ್ಲಿ ಶಿಷ್ಯರಿಗೆ ವೃಕ್ಷ ಮಂತ್ರಾಕ್ಷತೆಯನ್ನು ನೀಡುವ ಮೂಲಕ ಪ್ರತಿಯೊಬ್ಬ ಶಿಷ್ಯರಿಗೂ ವೃಕ್ಷ ಪೂಜೆ ಮಾಡಿ ಪರಿಸರ ಉಳಿಸಿ ಎಂಬ ಸಂದೇಶ ನೀಡುತ್ತಿರುವ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ ಎಂದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಬಣ್ಣಿಸಿದರು.

ಅವರು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಪ್ರತೀ ಚಾತುರ್ಮಾಸ್ಯದಲ್ಲಿ ನಡೆಸಲಾಗುವ ವೃಕ್ಷ ಮಂತ್ರಾಕ್ಷತೆ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹಸಿರು ಶ್ರೀಗಳು, ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಶ್ರೀಗಳು ವಿವಿಧ ಜಾತಿಯ ವೃಕ್ಷಗಳನ್ನ ಶಿಷ್ಯರಿಗೆ ಮಂತ್ರಾಕ್ಷತೆ ಮೂಲಕ ನೀಡುವುದೇ ಒಂದು ವಿಶಿಷ್ಟ ಆಲೋಚನೆ. ಈ ಚಿಂತನೆ ಸಾಮಾನ್ಯ ಶಿಷ್ಯನಿಗೂ ಪರಿಸರದ ಮೇಲೆ ಪುಳಕಿತಗೊಳಿಸುವಂಥದ್ದು ಎಂದ ಅವರು, ಗಿಡ ಪಡೆದವರು ಅತ್ಯಂತ ಪ್ರೀತಿ ಹಾಗೂ ಪೂಜನೀಯ ಭಾವದಿಂದ ನೆಟ್ಟು ಬೆಳಸುತ್ತಾರೆ. ಗಿಡಗಳ ಮೇಲೆ‌ ಪೂಜನೀಯ ಭಾವ ಬೆಳಸಿ ಪರಿಸರದ ಉಳಿವಿಗೆ ಕಾರಣರಾಗುತ್ತಿರುವ ಶ್ರೀಗಳ ದೂರದೃಷ್ಟಿ, ಪರಿಸರ ಕಾಳಜಿ ಶ್ಲಾಘನೀಯ. ಇಡೀ ನಾಡಿಗೆ ಒಂದು ಮೇಲ್ಪಂತಿಯ ಕಾರ್ಯ ಮಾಡುತ್ತಿದ್ದಾರೆ ಎಂದೂ ಶ್ಲಾಘಿಸಿ, ಶ್ರೀಗಳೂ ವೃಕ್ಷ ನೆಟ್ಟು ಇತರರೂ ವೃಕ್ಷ ಪ್ರೀತಿ ಬಳಸುತ್ತಿದ್ದಾರೆ ಎಂದರು.

ಸಮಾರಂಭದ ಸಾನಿಧ್ಯ ನೀಡಿದ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು, ಈ ವೃಕ್ಷ ಮಂತ್ರಾಕ್ಷತಾ ಅಭಿಯಾನವನ್ನು ಕಳೆದ 15 ವರ್ಷಗಳ ನಡೆಸಲಾಗುತ್ತಿದ್ದು, ಈ ಬಾರಿ ಅರಣ್ಯ ಇಲಾಖೆ ಸಹಕಾರ ದೊಡ್ಡದಿದೆ. ಮಠಕ್ಕೆ ಬಂದ ಶಿಷ್ಯರಿಗೆ ಮಂತ್ರಾಕ್ಷತೆ ಜೊತೆ ಗಿಡಗಳನ್ನು ನೀಡುವುದು, ಆ ಮೂಲಕ ಸಮೃದ್ಧ ಹಸಿರನ್ನು ಹೆಚ್ಚಿಸುವುದು ನಮ್ಮ ಆಶಯವಾಗಿದೆ ಎಂದರು. ಎಲ್ಲರೂ ವೃಕ್ಷಾರೋಪಣ ಹಾಗೂ ಆ ಮೂಲಕ ಪರಿಸರ ಬೆಳೆಸಿ ಉಳಿಸಿ. ಈ‌ ಮೂಲಕ ನಾಡು ಸಮೃದ್ಧವಾಗಲಿ ಎಂದ‌ ಶ್ರೀಗಳು, ನಮ್ಮಲ್ಲಿಯ ಬೆಟ್ಟಗಳ ಅಭಿವೃದ್ದಿಗೂ ಆದ್ಯತೆ‌ ನೀಡಿದ್ದೇವೆ ಎಂದರು.
ವೃಕ್ಷಲಕ್ಷ ಆಂದೋಲನದ ಅನಂತ ಅಶೀಸರ, 1994 ರಿಂದ ಸ್ವರ್ಣವಲ್ಲಿ ಶ್ರೀಗಳು ವೃಕ್ಷಾರೋಪಣ ಅಭಿಯಾನ ನಡೆಸುತ್ತಿದ್ದಾರೆ. ರಾಜ್ಯದ ಹಲವಡೆ ವೃಕ್ಷಾರೋಪನ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಂಡು ವೃಕ್ಷ ಪ್ರೀತಿಯನ್ನ ಶಿಷ್ಯರಲ್ಲಿ ಅಭಿಮಾನಿಗಳಲ್ಲಿ ಬಳಸುತ್ತಿದ್ದಾರೆ ಎಂದರು.
ಈ ವೇಳೆ‌ಮಠದ ಆಡಳಿತ‌ ಮಂಡಳಿಯ ಆರ್‌.ಎಸ್.ಹೆಗಡೆ ಭೈರುಂಬೆ, ವ್ಯವಸ್ಥಾಪಕ ಆರ್.ಎನ್. ಭಟ್ಟ ಸುಗಾವಿ, ಸಸ್ಯಲೋಕದ‌ ಪ್ರಮುಖ ಮಹಾಬಲೇಶ್ವರ ಗುಮ್ಮಾನಿ, ಶ್ರೀಪಾದ ರಾಯಸದ, ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ ಇತರರು ಇದ್ದರು.

300x250 AD

Share This
300x250 AD
300x250 AD
300x250 AD
Back to top