Slide
Slide
Slide
previous arrow
next arrow

ರಾಷ್ಟ್ರೀಯ ವೈದ್ಯರ ದಿನ: ಜಿಲ್ಲಾ ಸರ್ಜನ್‌ಗೆ ಸನ್ಮಾನ

300x250 AD

ಕಾರವಾರ: ಅಸ್ನೋಟಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶಿವಾಜಿ ವಿದ್ಯಾ ಮಂದಿರ ಅಸ್ನೋಟಿಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.

ದಿನಾಚರಣೆ ಉದ್ಘಾಟಿಸಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಸಮಾಜದಲ್ಲಿ ವೈದ್ಯರ ಸವಾಲುಗಳು ಬಹಳಿಷ್ಟಿವೆ ಅವುಗಳನ್ನು ಸಮಯೋಚಿತವಾಗಿ ನಿರ್ವಹಿಸಬೇಕಾಗಿದೆ. ಮುಂದಿನ ಭವಿಷ್ಯ ಸುಂದರವಾಗಿರಬೇಕಾದರೆ ಇಂದಿನಿAದಲೆ ಸಮಯದ ಸದುಪಯೋಗ ಪಡೆದುಕೊಂಡು ಅಭ್ಯಾಸದಲ್ಲಿ ನಿರತರಾಗಿ ಯಶಸ್ಸು ಗಳಿಸಿರಿ. ಶೈಕ್ಷಣಿಕ ಅನುಕೂಲತೆಗೆ ನಮ್ಮಿಂದಾದ ಸಹಾಯ ಯಾವಾಗಲೂ ಇರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಇದೇ ಸಂದರ್ಭದಲ್ಲಿ ವೈದ್ಯರ ದಿನದ ಅಂಗವಾಗಿ ಅವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಸ.ಬಾ.ಪ.ಪೂ. ಕಾಲೇಜು ಸವಣೂರಿನ ಉಪನ್ಯಾಸಕರಾದ ಸೋಮನಗೌಡ ಪಾಣಿಗಟ್ಟಿಯವರು ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಯ ತಯಾರಿ ವ್ಯವಸ್ಥಿತವಾಗಿ ನಡೆಯಬೇಕೆಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕರಾದ ದಿನೇಶ ಗಾಂವಕರವರು ವಹಿಸಿ, ವೈದ್ಯೋ ನಾರಾಯಣ ಭವ ಅವರ ಸೇವೆ ಎಂದಿಗೂ ಅವಿಸ್ಮರಣೀಯ. ಡಾ.ಶಿವಾನಂದ ಕುಡ್ತರಕರವರು ಹಳ್ಳಿಯಿಂದಲೇ ಅವರ ಸೇವೆಯನ್ನು ಆರಂಭಿಸಿದವರು. ಅಂತಹ ಖ್ಯಾತ ವೈದ್ಯರನ್ನು ಇಂದು ಸನ್ಮಾನಿಸಿರುವದು ನಮಗೆ ಅತ್ಯಂತ ಖುಷಿಯನ್ನು ತಂದಿದೆ ಎಂದರು.

300x250 AD

ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊOಡ ಕಾರ್ಯಕ್ರಮದಲ್ಲಿ ಶಿಕ್ಷಕ ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top