Slide
Slide
Slide
previous arrow
next arrow

ಯುಸಿಸಿ ಅನುಷ್ಠಾನದಿಂದ ಭಾರತ ಬೆಸೆಯುತ್ತದೆ, ರಾಷ್ಟ್ರೀಯತೆ ಪರಿಣಾಮಕಾರಿಯಾತ್ತದೆ: ಉಪ ರಾಷ್ಟ್ರಪತಿ

300x250 AD

ನವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅನುಷ್ಠಾನದಿಂದ ಭಾರತ  ಬೆಸೆಯುತ್ತದೆ ಮತ್ತು ರಾಷ್ಟ್ರೀಯತೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಂಗಳವಾರ ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿಜಿ) 25 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಸರ್ಕಾರವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ ಮತ್ತು ಭಾರತವು ಇಂದು ಹೂಡಿಕೆ ಮತ್ತು ಅವಕಾಶಗಳ ಜಾಗತಿಕ ತಾಣವಾಗಿದೆ. ಭಾರತ ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವಹಿವಾಟಿನ ಡಿಜಿಟಲೀಕರಣವು ಎಲ್ಲಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಮೀರಿಸಿದೆ ಮತ್ತು ಭಾರತದ ಉದಯವನ್ನು ತಡೆಯಲಾಗದು ಎಂದು ಧನಕರ್‌ ಅಭಿಪ್ರಾಯಿಸಿದ್ದಾರೆ.

ಈಶಾನ್ಯ ರಾಜ್ಯಗಳು ಇತ್ತೀಚೆಗೆ ರಾಷ್ಟ್ರೀಯ ಮತ್ತು ಐತಿಹಾಸಿಕ ನಿರೂಪಣೆಗಳಲ್ಲಿ ಸರಿಯಾದ ಜಾಗವನ್ನು ಪಡೆಯುತ್ತಿವೆ ಎಂದ ಅವರು, ಭ್ರಷ್ಟಾಚಾರ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಭ್ರಷ್ಟಾಚಾರವನ್ನು ಮೂಲದಿಂದ ತಟಸ್ಥಗೊಳಿಸಬೇಕು ಎಂದು ಯುವ ಮನಸ್ಸುಗಳನ್ನು ಒತ್ತಾಯಿಸುತ್ತೇನೆ ಮತ್ತು ಈ ರಾಷ್ಟ್ರವು ಯುವಕರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಎಂದಿದ್ದಾರೆ. ಘಟಿಕೋತ್ಸವದ ನಂತರ, ಅವರು ಐಐಟಿಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

300x250 AD

Share This
300x250 AD
300x250 AD
300x250 AD
Back to top