• Slide
    Slide
    Slide
    previous arrow
    next arrow
  • ಛಲ ಹಾಗೂ ಪ್ರಯತ್ನ ಯಶಸ್ಸಿನ ಮೂಲಮಂತ್ರವಾಗಲಿ: ಶಾಸಕ ಭೀಮಣ್ಣ

    300x250 AD

    ಶಿರಸಿ: ಮನುಷ್ಯ ತನ್ನ ಜೀವನಕ್ಕಾಗಿ ಕೃಷಿ, ಉದ್ಯೋಗ, ನೌಕರಿ ಹೀಗೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಅದು ಮನುಷ್ಯನ ಸಹಜ ಕರ್ತವ್ಯ ಹಾಗೆ ಧರ್ಮ ಅದನ್ನು ನಾವು ಮಾಡಲೇಬೇಕಾಗುತ್ತದೆ. ಅದರ ನಂತರದಲ್ಲಿ ನಾವು ಸ್ವಾರ್ಥಿಗಳಾಗಬಾರದು. ನಮ್ಮಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುವ ಮನೋಬಲವನ್ನು ಹೊಂದಿರಬೇಕು. ಯಾವ ಮನುಷ್ಯನಿಗೆ ಆ ಛಲ ಜೊತಗೆ ಪ್ರಯತ್ನದ ಮನಸ್ಸು ಇಲ್ಲವೋ ಆ ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ನಾವೆಲ್ಲ ಜಾತಿ – ಧರ್ಮ ಎನ್ನುವ ಭಾವನೆಯಲ್ಲಿ ಸಿಲುಕಿರದೆ ಸರ್ವ ಜನಾಂಗದ ಅಭಿವೃದ್ಧಿ ಶಾಂತಿ ಹಾಗೂ ನೆಮ್ಮದಿಗಾಗಿ ಕಂಕಣಬದ್ಧರಾಗಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ಟಿ. ನಾಯ್ಕ ಜನತೆಗೆ ಕರೆ ನೀಡಿದರು.

    ಅವರು ಇತ್ತಿಚಿಗೆ ತಾಲೂಕಿನ ಸೊಂದಾ ಕ್ರಾಸ್, ಮಲೇನಳ್ಳಿ, ಗುಂಡಿಗದ್ದೆ, ಸೋದೆಪೇಟೆ, ಅರಸಾಪುರ, ಜಾನ್ಮನೆ ಗ್ರಾಮಸ್ಥರು ಸಂಘಟಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ತಮ್ಮ ಗೆಲುವಿಗಾಗಿ ಶ್ರಮಿಸಿದ ಎಲ್ಲ ನಾಗರಿಕರನ್ನು ಅಭಿನಂದಿಸುತ್ತಾ ಸರಕಾರ ತಾನು ನೀಡಿದ ಭರವಸೆ ಈಡೇರಿಸುವಲ್ಲಿ ಶಕ್ತಿಮಿರಿ ಪ್ರಯತ್ನ ಮಾಡುತ್ತಿದೆ. ನಮ್ಮ ಕರ್ತವ್ಯಗಳಲ್ಲಿ ಯಾವುದೇ ಲೋಪ ದೋಷಗಳು ಕಂಡುಬ0ದರೆ ತಮ್ಮ ಗಮನಕ್ಕೆ ತರುವ ಮೂಲಕ ಎಲ್ಲರೂ ಕೂಡ ಶುಭ ಚಿಂತಕರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವ ಕಿವಿಮಾತನ್ನು ಹೇಳಿದರು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜಿ.ಪಂ. ಸದಸ್ಯರು ಹಾಗೂ ವಕೀಲರೂ ಆದ ಜಿ.ಎನ್. ಹೆಗಡೆ ಮುರೇಗಾರ ಮಾತನ್ನಾಡುತ್ತಾ ಸರ್ವ ಜನಾಂಗವನ್ನೂ ಆತ್ಮೀಯತೆಯಿಂದ ಕಾಣುವ ವ್ಯಕ್ತಿತ್ವಉಳ್ಳ ಶಾಸಕರು ಖಂಡಿತವಾಗಿ ಈ ಭಾಗದ ಜನತೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ ಎನ್ನುವ ವಿಚಾರವನ್ನು ವ್ಯಕ್ತಪಡಿಸಿದರು.

    300x250 AD

    ಕಾರ್ಯಕ್ರಮದ ಅತಿಥಿಗಳಾಗಿದ್ದ ಮನುವಿಕಾಸ ಸಂಸ್ಥೆಯ ಅಧ್ಯಕ್ಷ ಗಣಪತಿ ಭಟ್ಟ ಕರ್ಜಗಿ ಮಾತನ್ನಾಡುತ್ತ ತುಂಬಾ ಹೆಮ್ಮೆಪಡುವ ವಿಷಯ ನಮ್ಮ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದೆ ಈ ಕ್ಷೇತ್ರದಲ್ಲಿ ನಮ್ಮ ಶಾಸಕರಾಗಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅಣ್ಣನಾಗಿ ಕರೆಯಲ್ಪಡುವ ಭೀಮಣ್ಣ ನಾಯ್ಕ ಕೆಲಸ ಮಾಡುತ್ತಿದ್ದಾರೆ. ಒಬ್ಬ ಕೃಷಿಕರಾಗಿ ಹಾಗೂ ಒಬ್ಬ ಉದ್ಯಮಿಯಾಗಿ ಸಾಕಷ್ಟು ಅನುಭವಉಳ್ಳ ಶಾಸಕರು ಉತ್ತಮವಾದ ನಿರ್ಣಯಗಳೊಂದಿಗೆ ಅಭಿವೃದ್ಧಿ ಸಾಧಿಸುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
    ಕಾರ್ಯಕ್ರಮದಲ್ಲಿ ನೂರಾರು ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಶಾಸಕರ ಅಭಿನಂದನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ವೇದಿಕೆಯ ಮೇಲೆ ಶ್ರೀ ಗಣಪತಿ ಭಟ್ಟ ಕರ್ಜಗಿ ಮನುವಿಕಾಸ ಸಂಸ್ಥೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಶಿರಸಿಯ ವಕೀಲರೂ ಆದ ಜಿ.ಎನ್. ಹೆಗಡೆ ಮುರೇಗಾರ, ಪ್ರೊ. ಬಿ.ಕೆ. ಕೆಂಪರಾಜು, ಗಣೇಶ ದಾವಣಗೇರಿ, ಖಾದರ ಆನವಟ್ಟಿ, ಬಾಬು ಜಬ್ಬರಸಾಬ ಸೊಂದಾ, ಹರಿ ಕೆರಿಯಾ ಮರಾಠಿ ಅರಸಾಪುರ, ಗಣಪತಿ ಪಟಗಾರ ಗುಂಡಿಗದ್ದೆ, ಹಸನ ಸಾಬ ಸೊಂದಾ, ಆರ್.ಜಿ. ಹೆಗಡೆ ಸೊಂದಾಕ್ರಾಸ್, ಚಿದಾನಂದ ನಾಯ್ಕ ಬೆಳಲೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
    ಡಾ. ಆರ್. ವೈ ಖಾನರವರು ಗ್ರಾಮಸ್ಥರ ಪರವಾಗಿ ಮಲೇನಳ್ಳಿ, ಗುಂಡಿಗದ್ದೆ, ಅರಸಾಪುರ ರಸ್ತೆಗಳ ಅಭಿವೃದ್ಧಿ, ಮಲೇನಳ್ಳಿ ಹೊಳೆಸೇತುವೆ ನಿರ್ಮಾಣ ಮತ್ತು ಸಾರಿಗೆ ಸಂಪರ್ಕವೇ ಇಲ್ಲದ ಮಲೇನಳ್ಳಿ – ಸೊಂದಾಕ್ರಾಸ ಮಾರ್ಗಕ್ಕೆ ಸಾರಿಗೆ ಬಸ್‌ಗಾಗಿ ಶಾಸಕರಿಗೆ ಮನವಿಯನ್ನು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆ ಮೂಲಕ ಜಾನ್ಮಕ್ಕಿ ಅರಸಾಪುರ ರಸ್ತೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ಗಣಪತಿ ಭಟ್ಟ ನೀಡಿದರು. ಉಳಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದರು. ಡಾ. ಆಮೀರ ಖಾನ ಸ್ವಾಗತಿಸಿದರು. ಡಾ. ಆಮ್ರೀನ್ ಖಾನ್ ವಂದಿಸಿದರು. ಡಾ. ಆರ್. ವೈ. ಖಾನ ಕಾರ್ಯಕ್ರಮ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top