Slide
Slide
Slide
previous arrow
next arrow

ದಿ ಅನ್ಟೋಲ್ಡ್ ಸ್ಟೋರಿ: ಟಿಪ್ಪು ಸುಲ್ತಾನ್ ಮತ್ತು ಕೊಡಗಿನ ನರಮೇಧ

300x250 AD

ಮೈಸೂರು ಹುಲಿ ಎಂದೇ ಹೇಳಲಾಗುವ ಟಿಪು ಸುಲ್ತಾನ್ ಭಾರತೀಯ / ಕರ್ಣಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾನೆ. ಆದರೆ ಈ ಬೊಗಳೆ ಸುಲ್ತಾನನ್ನು ಕರ್ನಾಟಕದ ಕೊಡವ ಯೋಧ ಸಮುದಾಯ ಮಣ್ಣುಮುಕ್ಕಿಸಿದ್ದು ಯಾರಿಗೆ ಗೊತ್ತು ? ಅದೂ ಮೂವತ್ತೊಂದು ಸಲ ಯುದ್ಧದಲ್ಲಿ ಸೋಲಿಸಿದ್ದರು!!
ಭಾರತದ ಇತಿಹಾಸ ಬರೆದವರು ಯಾರೋ ? ನಮ್ಮ ನೆಲದ ವೀರರನ್ನು, ವಿಜಯವನ್ನು ಕಡೆಗಣಿಸಿ ಟಿಪು ಸುಲ್ತಾನಂತರಹ ಆಕ್ರಮಿಗಳನ್ನು ವೈಭವೀಕರಿಸಿಬಿಟ್ಟರು. ಆದರೆ ಕೊಡವರಂತಹ ನಿಷ್ಠ ವೀರ ಸಮುದಾಯ ಇತಿಹಾಸದ ಪುಟದಲ್ಲಿ ಚೂರೂ ಸ್ಥಾನ ಪಡೆಯಲಿಲ್ಲ ಎಂಬುದು ಖೇದಕರ.

ಕೊಡವರು ಯಾರು?
ಕೊಡಗು ಅಥವಾ ಕೂರ್ಗ್ ನ ಮೂಲ ನಿವಾಸಿಗಳು ಕೊಡವರು ಕೊಡವ ಭಾಷೆ ಆಡುವ ಯೋಧ ಜನಾಂಗ. ಇವರು ಪ್ರಕೃತಿಯ ಉಪಸಾಸಕರೂ ಹೌದು.ಸಾವಿರಾರು ವರ್ಷಗಳಿಂದ ಶಸ್ತ್ರ ಧಾರಣೆ ಮಾಡುವ ಇವರು ಇಂದಿಗೂ ಗುಪ್ತವಾಗಿ ಶಸ್ತ್ರಗಳನ್ನು ಆರಾಧಿಸುತ್ತಾರೆ ಪೂಜಿಸುತ್ತಾರೆ. ಈ ಕಾರಣದಿಂದ ಪರವಾನಿಗೆ ಇಲ್ಲದೇ ಬಂದೂಕು ಹೊಂದಿರಲು ವಿಶೇಷ ಹಕ್ಕು ಹೊಂದಿರುವ ಸಮುದಾಯದಲ್ಲಿ ಕೊಡವರೂ ಬರುತ್ತಾರೆ.

ತಮ್ಮ ಸೈನ್ಯದ ಮೂರು ಪಟ್ಟು ದೊಡ್ಡದಿರುವ ಟಿಪ್ಪು ಸೈನ್ಯವನ್ನು ಕೊಡವರು ಬರೋಬ್ಬರಿ ಮೂವತ್ತೊಂದು ಬಾರಿವ ಸೋಲಿಸಿದರು. ಆದರೆ ಶೌರ್ಯಗಾಥೆ ಕೇಳುವುದು ಟಿಪ್ಪುವಿನದು, ಕೊಡವರದ್ದಲ್ಲ..!!

ಫೀಲ್ಡ್ ಮಾರ್ಷಲ್ ಕೆ ಎಂ ಕರಿಯಪ್ಪ ಮತ್ತು ಜನರಲ್ ಕೆ ಎಸ್ ತಿಮ್ಮಯ್ಯ ಸ್ವತಂತ್ರ ಭಾರತದ ವೀರತೆ ಶೌರ್ಯಕ್ಕೆ ಹೆಸರಾದವರು. 1947 ಭಾರತ ಪಾಕಿಸ್ತಾನ ಯುದ್ಧ ಇರಲಿ, 1862 ರ ಇಂಡೋ ಚೀನಾ ಯುದ್ಧ ಯಾವುದೇ ಇರಲಿ. ಟಿಪ್ಪು ಸುಲ್ತಾನ್ ತಂದೆ , ಹೈದರ್ ಅಲಿ, 1765ರಲ್ಲಿ ಮಂಗಳೂರನ್ನು ಆಕ್ರಮಿಸಲು ಯೋಜನೆಯನ್ನು ರೂಪಿಸುತ್ತಾನೆ. ಅದರಂತೆ ಒಂದು ಬೃಹತ್ ಸೈನ್ಯವನ್ನು ಕೊಡಗಿಗೆ ಕಳಿಸುತ್ಥಾನೆ. ಕೊಡವರು ಆ ಸೇನೆಯನ್ನು ಕೊಡಗಿನ ಕಾಡು ದಾಟಲು ಬಿಡುವುದಿಲ್ಲ, ತಡೆಯುತ್ತಾರೆ. ಹೈದರ್ ಸೈನ್ಯ ಹಿಂದೆಗೆಯುತ್ತದೆ. ಇದಾಗಿ ಐದು ವರ್ಷ ಬಳಿಕ 1770ರಲ್ಲಿ ಲಿಂಗರಾಜನು ಹೈದರ್ ಅಲಿ ಸಹಾಯದಿಂದ ಕೊಡಗಿನ ಸಿಂಹಾಸನ ಏರುತ್ತಾನೆ. 1780ರಲ್ಲಿ ಲಿಂಗರಾಜನ ಮರಣದ ಅನಂತರ ಕೊಡಗಿನ ಸಿಂಹಾಸನ ತೆರವಾಗುತ್ತದೆ. ಅವನ ಮಕ್ಕಳು ಅಪ್ರಾಪ್ತರಾಗಿರುತ್ತಾರೆ ಹೀಗಾಗಿ ಕೊಡಗನ್ನು ಹೈದರ್ ಅಲಿ ಸುಲಭವಾಗಿ ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ಜನರು ದಂಗೆ ಏಳುತ್ತಾರೆ. ಮೈಸೂರ ಸೈನ್ಯವನ್ನು ತಮ್ಮ ನೆಲದಿಂದ ಹೊರಹಾಕುತ್ತಾರೆ. 1782ರಲ್ಲಿ ಕೊಡಗು ಸ್ವತಂತ್ರ ಎಂದು ಘೋಷಿಸಿಕೊಳ್ಳುತ್ತಾರೆ. ಇದೇ ವರ್ಷ ಡಿಸೆಂಬರ್ ನಲ್ಲಿ ಹೈದರ ಅಲಿಯ ನಿಧನದ ಬಳಿಕ ಟಿಪು ಸುಲ್ತಾನ್ ಮೈಸೂರಿನ ಅಧಿಕಾರ ಹಿಡಿದಿರುತ್ತಾನೆ. 1785ರಲ್ಲಿ ತನ್ನ ಸೇನೆಯೊಂದಿಗೆ ಟಿಪ್ಪು ಮೈಸೂರಿನಿಂದ ಕೊಡಗಿನತ್ತ ದಂಡೆತ್ತಿ ಹೋಗುತ್ತಾನೆ. ಕೊಡವ ಯೋಧರಿಂದ ಸೋಲುಣ್ಣುತ್ತಾನೆ. ಇದಾದ ನಂತರ ಟಿಪ್ಪು 15000 ಸೈನಿಕರನ್ನು ಕೊಡಗಿಗೆ ಕಳಿಸುತ್ತಾನೆ. ಉಳಗುಳಿಯಲ್ಲಿ 4000 ಕೊಡವರು ಇವರೆಲ್ಲರ ಮಣ್ಣು ಮುಕ್ಕಿಸುತ್ತಾರೆ. ಇದಾದ ಬಳಿಕವೂ ಅನೇಕ ಸಲ ಟಿಪ್ಪು ಸೋತಿರುತ್ತಾನೆ. ಹಾಗಾಗಿ ಅಹಂಕಾರದಿಂದ ಪ್ರತೀಕಾರಕ್ಕೆ ಕಾಯುತ್ತಿರುತ್ತಾನೆ. ಇಷ್ಟಾಗಿಯೂ ಶಾಂತಿ ಸಂಧಾನಕ್ಕೆ ಕೊಡವರನ್ನು ಆಹ್ವಾನಿಸುತ್ತಾನೆ. ಆದರೆ ವಂಚನೆಗೆ ಒಳಗಾದ ಕೊಡವರು ಆಮಂತ್ರಣವನ್ನು ಒಪ್ಪಿದ್ದಕ್ಕೆ, ಟಿಪ್ಪು ಮಾತನ್ನು ನಂಬಿದ್ದಕ್ಕೆ ಕೊಡವರು ಭಾರಿ ಬೆಲೆ ತೆರಬೇಕಾಯಿತು. ಕೊಡವರ ಮೇಲೆ ಟಿಪ್ಪು ಕ್ರೌರ್ಯ ಮೆರೆಯುತ್ತಾನೆ. ದೌರ್ಜನ್ಯ ಹತ್ಯೆ ನಡೆಯುತ್ತದೆ. ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಖೈದಿಗಳನ್ನು ಮಕ್ಕಳನ್ನು ಸೆರೆಹಿಡಿದು ಒಯ್ಯುತ್ತಾರೆ.

ಅಷ್ಟೇ ಅಲ್ಲದೇ ಅಲ್ಲಿನ ಮಂದಿರಗಳನ್ನು ಧ್ವಂಸ ಮಾಡುತ್ತಾರೆ. ಗೋಹತ್ಯೆ ಎಸಗಿ ಹಿಂದುಗಳ ನಂಬಿಕೆಗೆ ಕೊಡಲಿ ಏಟು ಹಾಕುತ್ತಾರೆ.ಅರಣ್ಯ, ಗದ್ದೆಗಳು, ತೋಟಗಳನ್ನು ಸುಟ್ಟುಹಾಕಿ ಬಲವಂತವಾಗಿ ಕೊಡವರನ್ನು ಮತಾಂತರ ಮಾಡಲು ಯತ್ನಿಸುತ್ತಾರೆ. ಟಿಪ್ಪುವಿನಿಂದ ಸಾಕಷ್ಟು ಕ್ರೌರ್ಯ ಹಿಂಸೆಗೆ ಒಳಗಾದರೂ ಸಹ ಕೊಡವರು ತಮ್ಮತನ ಬಿಡಲಿಲ್ಲ, ಇಸ್ಲಾಂ ಸ್ವೀಕರಿಸಲಿಲ್ಲ. ಇಸ್ಲಾಮೀಕರಣಕ್ಕೆ ಸೆಡ್ಡು ಹೊಡೆದು ಗುಡ್ಡ ಬೆಟ್ಟಗಳಲ್ಲಿ ಕಾಡಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಮತ್ತೆ ಮತ್ತೆ ಟಿಪ್ಪು ದಾಳಿ ನಡೆಸಿದ. ಆದರೆ ಕೊಡವರು ತಮ್ಮ ಮಾತೃ ಭೂಮಿಯ ರಕ್ಷಣೆಗೆ ಕಟಿಬದ್ಧರಾಗಿದ್ದರು. ಎದುರಿಸಿ ದಿಟ್ಟ ಉತ್ತರ ನೀಡಿದರು. ಕೊನೆಗೊಮ್ಮೆ ಕೊಡವರು ಮೈಸೂರಿನಿಂದ ಸ್ವತಂತ್ರತೆ ಪಡೆದರು.ಬಕೊಡವ ಸಮುದಾಯದವರು ಟಿಪ್ಪುವಿನ ಕ್ರೌರ್ಯವನ್ನು ಇಂದಿಗೂ ಮರೆತಿಲ್ಲ. ಅದು ಅವರಲ್ಲಿ ಇನ್ನೂ ಜೀವಂತವಾಗಿ ಜ್ವಲಿಸುತ್ತಿದೆ. ಕೊಡಗಿನ ದೇವಾಲಯದಲ್ಲಿ ಸೊಂಡಿಲು ತುಂಡರಿಸಿದ ಎರಡು ಆನೆಯ ವಿಗ್ರಹಗಳು ಟಿಪ್ಪುವಿನ ಕ್ರೌರ್ಯತೆಗೆ ಹಿಡಿದ ಕನ್ನಡಿ ಯಾಗಿ ಸಾರಿ ಹೇಳುತ್ತವೆ. ಅಂದಹಾಗೆ ಕರ್ನಾಟಕದಲ್ಲಿ ವಿವಾದಿತ ಟಿಪ್ಪು ಜಯಂತಿಯನ್ನು ಕೊಡವ ಸಮುದಾಯ ವಿರೋಧಿಸಿತ್ತು.

300x250 AD

ಭಾರತದಲ್ಲಿ ಕೊಡವ ಸಮುದಾಯದಂತೆಯೇ ಧೈರ್ಯದಿಂದ ತಾಯ್ನಾಡನ್ನು ರಕ್ಷಿಸಿದ್ದರೆ, ಯಾವ ಶತ್ರುಗಳು ಭಾರತದ ನೆಲದಲ್ಲಿ ಕಾಲಿಡುತ್ತಿರಲಿಲ್ಲ. ಅಂದ ಹಾಗೆ ಭಾರತದಲ್ಲಿ ಸ್ವಾತಂತ್ರ್ಯದ ನಂತರ ಧರ್ಮ ನಿರಪೇಕ್ಷತೆ ಹೆಸರಲ್ಲಿ ಆಗುತ್ತಿರುವ ಅತ್ಯಾಚಾರ, ತುಷ್ಟೀಕರಣ ಕುರಿತು ವಿರೋಧವಾಗಬೇಕಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಬಳಿಕವೂ ಆಕ್ರಮಣಕಾರಿಗಳ , ದಾಳಿಕೋರರ ವೈಭವೀಕರಣ ಅವರದೇ ವಿಜಯಗಾಥೆಗಳು. ನಮ್ಮ ಹೋರಾಟಗಾರರ ವೀರರಿಗೆ ಮನ್ನಣೆಯೇ ಇಲ್ಲವಾಗಿದ್ದು ದುರದೃಷ್ಟಕರ.
ಭಾರತದ ಇಂದಿಗೂ ತನ್ನ ಮಣ್ಣಿನ ವೀರರ ಯಶೋಗಾಥೆ ಕೇಳಲು ಕಾತರದಿಂದ ಕಾಯುತ್ತಿದೆ.

ಜೈ ಹಿಂದ್.

LINK: https://youtu.be/Jcsegmxsj3Q

ಕೃಪೆ: https://www.youtube.com/@unfilteredrawfacts

Share This
300x250 AD
300x250 AD
300x250 AD
Back to top