ಅಂಕೋಲಾ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ವಯೋನಿವೃತ್ತ ಶಿಕ್ಷಕರನ್ನು ಗೌರವಿಸಿ, ಬೀಳ್ಕೊಡುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದ ಸಾಧ್ಯವಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನಮಾನವಿದೆ. ವಯೋ ನಿವೃತ್ತ ಶಿಕ್ಷಕರ ವೃತ್ತಿ ಜೀವನ ಸುಖಮಯವಾಗಿರಲಿ. ಇತರರಿಗೆ ಆದರ್ಶಮಯವಾಗಿರಲಿ ಎಂದು ಧಾರವಾಡದ ಅಪರ ಆಯುಕ್ತ ಕಾರ್ಯಾಲಯದ ವಿಶ್ರಾಂತ ನಿರ್ದೇಶಕ ಜಿ.ಎಸ್.ನಾಯ್ಕ ಹೇಳಿದರು.
ನಗರದ ನಂ.1 ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಹಾರವಾಡ ಶಾಲಾ ಮುಖ್ಯಾಧ್ಯಾಪಕ ರೋಹಿದಾಸ್ ಕೆ.ಬಂಟ್, ತೆಂಕಣಕೇರಿ ಶಾಲಾ ಶಿಕ್ಷಕಿ ಪಾರ್ವತಿ ಟಿ.ನಾಯಕ, ಚಂದುಮಠ ಶಾಲಾ ಶಿಕ್ಷಕಿ ಶೈಲಜಾ ಆರ್.ಗಾಂವಕರ, ಮೇಲಿನ ಮಂಜಗುಣಿ ಶಾಲಾ ಶಿಕ್ಷಕಿ ಗೀತಾ ಟಿ.ನಾಯ್ಕ, ಅಂಕೋಲಾ ನಂ.1 ಶಾಲಾ ಶಿಕ್ಷಕಿ ಶಾರದಾ ಎಸ್.ನಾಯ್ಕ, ಬೊಬ್ರುವಾಡ ಶಾಲಾ ಶಿಕ್ಷಕಿ ಶಾಂತಿ ಆರ್.ನಾಯ್ಕ ಇವರನ್ನು ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷಿö್ಮÃ ಪಾಟೀಲ ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಪವಿತ್ರವಾದದು. ಶಿಕ್ಷಕರ ಸೇವಾ ಮನೋಭಾವನೆ ಹಾಗೂ ಅನುಕರಣೀಯ ವ್ಯಕ್ತಿತ್ವ ಅವರನ್ನು ವಿದ್ಯಾರ್ಥಿಗಳು ಸದಾಕಾಲ ನೆನಪಿನಲ್ಲಿರಿಸುವಂತೆ ಮಾಡುತ್ತದೆ. ನಿವೃತ್ತಿಯ ನಂತರವೂ ಇಂದು ಶಿಕ್ಷಕರ ಸೇವೆ ಇಲಾಖೆಗೆ ಅಗತ್ಯವಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಮಾತನಾಡಿದರು. ಸನ್ಮಾನಿತರು ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಸೇವಾ ಅನುಭವಗಳನ್ನು ಮುಕ್ತವಾಗಿ ಹಂಚಿಕೊoಡರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಭಾರತಿ ಬಿ.ನಾಯಕ, ಜಿಲ್ಲಾ ಸಹಕಾರ್ಯದರ್ಶಿ ಮಂಜುನಾಥ ಬಿ. ನಾಯಕ, ಖಜಾಂಚಿ ಶೇಖರ ಗಾಂವಕರ, ಸಂಘದ ಸದಸ್ಯರಾದ ಲಕ್ಷ್ಮಿ ಎನ್.ನಾಯಕ, ಸವಿತಾ ಬಿ. ಗಾಂವಕರ, ಆನಂದು ವಿ. ನಾಯ್ಕ, ಶೋಭಾ ಎಸ್. ನಾಯಕ, ಸಂಜೀವ ಆರ್.ನಾಯಕ ಮುಂತಾದವರಿದ್ದರು.