Slide
Slide
Slide
previous arrow
next arrow

LGBT, ನಪುಂಸಕತ್ವ ಮತ್ತು ಮಾನವ ಸಮಾಜದ ಭವಿಷ್ಯ

300x250 AD

ವಿಜ್ಞಾನ ದೃಷ್ಟಿಯಿಂದ ಮಾನವನಲ್ಲಿ ಸಂಪೂರ್ಣ ಪುರುಷ ಅಥವಾ ಸ್ತ್ರೀ ಆಗಿರಲು ಸಾಧ್ಯವಿಲ್ಲವೇ? ಅಥವ ಪರಿಪೂರ್ಣ ಪುರುಷ ಅಥವಾ ಸ್ತ್ರೀ ಇರುವುದೇ ಇಲ್ಲವೇ? ತಲೆಯಲ್ಲಿ ಇಂತಹ ಜಿಜ್ಞಾಸೆಯ ಅನೇಕ ಪ್ರಶ್ನೆಗಳು ಮೂಡುತ್ತದೆ. ಇಂತಹ ಚರ್ಚೆಗಳು ಮೂಡಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ LGBT ಲೈಂಗಿಕ ಅಲ್ಪಸಂಖ್ಯಾತರ ಕುರಿತು ಚಳುವಳಿ ಹೋರಾಟಗಳಾಗಿವೆ. ಈಗ ಭಾರತದಲ್ಲಿ ಸಹ ಈ ಕೂಗು ಎದ್ದಿದೆ. ಹಾಗಾಗಿ ಇಂತಹ ವಿಷಯಗಳ ತಿಳಿವಳಿಕೆ ಅಗತ್ಯ ವಾಗುತ್ತದೆ. ವಿಜ್ಞಾನ ಪ್ರಯೋಗ ನೋಡೋಣ. ಇದು ಮಾನವ ಸಮಾಜದ ಭವಿಷ್ಯ ಹೇಳುತ್ತದೆ.

1970ರ ದಶಕದಲ್ಲಿ ಅಮೇರಿಕಾದ ವಿಜ್ಞಾನಿ, ಥಿಯಾಲಜಿಸ್ಟ್ ಜಾನ್ ಬಿ ಕೊಲೋನ್ ಇಲಿಗಳ ಮೇಲೆ ಒಂದು ಪ್ರಯೋಗ ನಡೆಸುತ್ತಾನೆ ಇದರ ಹೆಸರು ಯುನಿವರ್ಸ್ 25. ಇದು ಈ ಕ್ಷೇತ್ರದಲ್ಲಿ ಇಪ್ಪತ್ತೈದನೇ ಪ್ರಯೋಗವಾಗಿತ್ತು. ಈ ಮೊದಲು ನಡೆಸಿದ ಈ ತರದ ಎಲ್ಲಾ ಪ್ರಯೋಗಗಳ ಫಲಿತಾಂಶ ಒಂದೇ ಆಗಿತ್ತು. ಮೊದಲಿಗೆ ಜಾನ್ ಒಂದು ಸುಸಜ್ಜಿತ ಕೋಣೆ ನಿರ್ಮಿಸಿದ. ನಾಲ್ಕು ಬೇರೆ ಬೇರೆ ಕಂಪಾರ್ಟಮೆಂಟಾಗಿ ವಿಂಗಡಿಸಿದ. ಟನೆಲ್ ಅಳವಡಿಸಿ ಸಂಪರ್ಕದ ಕಲ್ಪಿಸಿದ. ಇದರಲ್ಲಿ ಒಟ್ಟು 265 ಅಪಾರ್ಟ್‌ಮೆಂಟ್ ಮಾಡಿದ. ಪ್ರತಿ ಅಪಾರ್ಟ್ಮೆಂಟ್ ನಲ್ಲಿ 15 ಇಲಿಗಳು ಆರಾಮವಾಗಿ ವಾಸಿಸಬಹುದಿತ್ತು. ಈ ಪ್ಲಾಟ್ ಅನ್ನು ಒಂದು ಜಗತ್ತಿನ ರೀತಿ ನಿರ್ಮಿಸಿದ. ತಿಂಡಿ ತಿನಿಸು, ಸ್ವಚ್ಛತೆ, ಆರೋಗ್ಯ , ವೆಂಟಿಲೇಶನ್ , ಟೆಂಪರೇಚರ್ ಎಲ್ಲ ವ್ಯವಸ್ಥೆ ಸರಿಯಾಗಿ ಮಾಡಿದ.

4 ಆರೋಗ್ಯವಂತ ಜೋಡಿ ಇಲಿಗಳನ್ನು ಇದರಲ್ಲಿ ತಂದು ಬಿಟ್ಟ.ಇಲಿಗಳು ಬೇಕಾದಲ್ಲಿ ಓಡಾಡಬಹುದಿತ್ತು, ಬೇಕಾದ ತಿಂಡಿ ತಿನ್ನಬಹುದಿತ್ತು. ಹೊರಗಡೆ ಹೋಗುವುದು ಮಾತ್ರ ಸಾಧ್ಯವಿರಲಿಲ್ಲ. ಕುನ್ಹೋಲ್ ಒಬ್ಸರವೇಶನ್ ಸ್ಟಡಿ ಮಾಡತೊಗಿದ. ಮೊದಲ ನಾಲ್ಕು ದಿನ ಕೋಣೆಯ ಪರಿಚಯ ಮಾಡಿಕೊಳ್ಳಲಿಕ್ಕೆ ಬೇಕಾಯಿತು. ನಂತರ ಸಂತಾನೋತ್ಪತ್ತಿ ಗೆ ಶುರುವಿಟ್ಟುಕೊಂಡವು. ಇಲಿಗಳ ಸಂಖ್ಯೆ ಹೆಚ್ಚತೊಡಗಿತು. ಪ್ರತಿ ಐವತ್ತೈದು ದಿನಕ್ಕೆ ಇಲಿಗಳ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. 315 ದಿನದ ಬಳಿಕ ಇಲಿಗಳ ಸಂಖ್ಯೆ 620 ಆಗಿತ್ತು. ಆದರೆ ಕೋಣೆಗಳಲ್ಲಿ ಇನ್ನೂ ಜಾಗ ಖಾಲಿ ಇತ್ತು ಮೂರು ಸಾವಿರ ಇಲಿ ಉಳಿಯಬಹುದಿತ್ತು. ಆದರೆ ಇಲಿಗಳು ಒಂದಷ್ಟು ಜಾಗದಲ್ಲಿ ಮಾತ್ರ ಸೇರುತ್ತಿದ್ದವು. ಬೇಕಾದ್ದ ಒಂದಷ್ಟು ತಿಂಡಿಯನ್ನು ಮಾತ್ರವೇ ತಿನ್ನುತ್ತಿದ್ದವು. ನಂತರ ನಿಧಾನವಾಗಿ ಸಂತಾನೋತ್ಪತ್ತಿ ದರ ಕಡಿಮೆ ಆಯಿತು. ಜನನ ದರ 1/3 ರಷ್ಟಾಯಿತು. ಮತ್ತು ಇಲಿಗಳಲ್ಲಿ ಸಾಮಾಜಿಕ ಅಸಮತೋಲನ ಉಂಟಾಯಿತು. ಹೊಸ ಇಲಿಗಳಲ್ಲಿ ವಿಚಿತ್ರ ವ್ಯವಹಾರ ಕಂಡು ಬಂತು. ಬಲವಾಗಿದ್ದ ಇಲಿ ತುಂಬಿದ ಜನಸಂಖ್ಯೆ ಕಾರಣ ಇತರ ಇಲಿಗಳಿಂದ ದೂರ ಉಳಿಯಿತು. ಇಲಿಗಳು ತಮ್ಮ ಸಾಮಾಜಿಕ ಮೂಲಗುಣ ರಕ್ಷಣೆ ಬಿಟ್ಟವು. ತನ್ನ ಸುತ್ತ ಮುತ್ತಲಿನ ಇಲಿಗಳಲ್ಲಿ ಆಸಕ್ತಿ ಕೂಡ ಕಳೆದುಕೊಂಡಿತು. ಯಾರೂ ಇರದ ಜಾಗದಲ್ಲಿ ಒಂಟಿ ಒಂಟಿಯಾಗಿ ಇರತೊಡಗಿದವು. ಕೆಲ ಸಮಯದ ನಂತರ ಈ ಇಲಿಗಳು ಒಗ್ಗಟ್ಟಾಗಿ ಹೋರಾಡಿ ತಿಂಡಿ ತಿನ್ನುತ್ತ ಸಮಯ ಕಳೆಯತೊಡಗಿದವು. ಇತರ ಇಲಿಗಳು ಈ ಇಲಿಗಳನ್ನು ಸಮಾಜದ ಭಾಗ ಎಂದು ಮರೆತವು. ದೂರ ಇಟ್ಟವು. ಇಲಿಯ ಕಂಪಾರ್ಟ್ಮೆಂಟಿಗೆ ಇತರ ಇಲಿಗಳು ಬರುವುದನ್ನು ನಿಲ್ಲಿಸಿ ಸಮಾಜದಿಂದ ಬಹಿಷ್ಕೃತಗೊಳಿಸಿದವು. ಬಲಶಾಲಿ ಇಲಿಗಳು ಸ್ವಲ್ಪ ದಿನಗಳ ಬಳಿಕ ಕೃಶ ಸಣ್ಣ ಇಲಿಗಳ ಮೇಲೆ ಸುಮ್ಮ ಸುಮ್ಮನೆ ದಾಳಿ ಮಾಡತೊಡಗಿದವು. ಅತ್ಯಾಚಾರ ಮಾಡತೊಡಗಿದವು. ಇತರ ಇಲಿಗಳನ್ನು ತಿಂದವು ಕೂಡ. ಬಾರಿ ಬಾರಿ ಹೀಗಾದಾಗ ಕಡಿಮೆ ಆಕ್ರಮಣಕಾರಿ ಇಲಿಗಳು ಹೆದರುಪುಕ್ಕಲರಾದವು. ಹೋರಾಟ ಬೇಡವೆಂದು ನಿಷ್ಕ್ರಿಯವಾಗಿ ಜೀವಿಸತೊಡಗಿದವು. ಹೀಗೆ ಹಿಂಸಾಚಾರ ಅಂತಿಮ ಹಂತ ತಲುಪುತ್ತದೆ. ಕೆಲವು ಹೆಣ್ಣು ಇಲಿಗಳು ದಾಳಿ ಮಾಡಲು ಮುಂದಾಗುತ್ತವೆ. ಅವುಗಳಿಗೆ ಜನಿಸಿದ ಮರಿಗಳು ಮತ್ತಷ್ಟು ಕ್ರೂರಿಯಾಗಿ ಆಕ್ರಮಣವಾಗಿಬಿಡುತ್ತವೆ. ಇದರಿಂದ ದಂಗೆ ಏಳುವ ಮನಸು ಮತ್ತು ಸಾಮರ್ಥ್ಯ ಕುಗ್ಗುತ್ತದೆ.
ಇಲ್ಲಿಗೆ ಪ್ರಯೋಗ ಶುರುವಾಗಿ 508 ದಿನ ಕಳೆದಿತ್ತು. ಜನನ ದರ ಶೂನ್ಯವಾಗುತ್ತದೆ. ಮರಣ ದರ 90 ಪ್ರತಿಶತ ಆಗುತ್ತದೆ. ಇದಕ್ಕೆ ಕಾರಣ ಬಹುಸಂಖ್ಯಾತ ಇಲಿಗಳಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಕುರಿತು ಉದಾಸೀನತೆ. ಇದರೊಟ್ಟಿಗೆ ಇಲಿಗಳ ಜಗತ್ತಿನಲ್ಲೇ ಇನ್ನೊಂದು ಹೊಸ ಪೀಳಿಗೆ ತಯಾರಾಗುತ್ತದೆ. ಅವು ಇತರ ಸಾಮಾನ್ಯ ಇಲಿಗಳಿಂದ ದೂರವಾಗಿದ್ದವು. ಅವಕ್ಕೆ ಯುದ್ಧ, ಜಗಳ, ಮಕ್ಕಳು, ಪ್ರಜನನ ಯಾವುದರಲ್ಲೂ ಆಸಕ್ತಿ ಇರಲಿಲ್ಲ. ತಿನ್ನುವುದು ಮಲಗುವುದು ಓಡಾಡುವುದರಲ್ಲಿ ಕಾಲ ಕಳೆಯುತ್ತಿದ್ದವು. ಇವಕ್ಕೆ ಬ್ಯೂಟಿಫುಲ್ ಬನ್ಸ್ ಎಂದು ಕನೋಲ್ ಹೆಸರು ನೀಡುತ್ತಾನೆ. ಆಶ್ಚರ್ಯದ ಮಾತೆಂದರೆ ಈ ಇಲಿಗಳು ನೋಡಲು ಮಾತ್ರ ದಷ್ಟಪುಷ್ಟವಾಗಿ ಸುಂದರವಾಗಿದ್ದು ಬಿಟ್ಟರೆ,, ನಿಜಕ್ಕೂ ಅನಾರೋಗ್ಯಕರವೇ ಆಗಿ ಉಂಡಾಡಿ ಗುಂಡ ಆಗಿದ್ದವು.

ಇವು ಸಮಾಜಕ್ಕೆ ಯಾವುದೇ ಕೊಡುಗೆ ಕೊಡುವ , ಬೆಂಬಲಿಸುವ ಕೆಲಸ ಮಾಡುತ್ತಿರಲಿಲ್ಲ. ಈ ಇಲಿಗಳ ಕುರಿತು ಅಧ್ಯಯನ ಮಾಡಿದ ಕುನ್ಹೋಲ್ ಅಂತಿಮ ನಿರ್ಧಾರವನ್ನು ಮಾಡುತ್ತಾನೆ. ಈ ಬ್ಯೂಟಿಫುಲ್ ಬನ್ಸ್ ಇಲಿಗಳಿಗೂ ಮಾನವನಿಗೂ ಹೋಲಿಸುತ್ತಾರೆ. ಯಾವುದೇ ತಲೆಬಿಸಿ, ಒತ್ತಡ ಇರದ ಕಾರಣ, ಎಲ್ಲವೂ ಆರಾಮವಾಗಿ ಸಿಗುವ ಕಾರಣ ತಮ್ಮ ಜೀವನ ತಮ್ಮ ಇರುವಿಕೆಯನ್ನು ಮರೆತು ಬಿಡುತ್ತದೆ. ಇವರ ಯುದ್ದ ಹೋರಾಟ ಶಕ್ತಿ ಕೂಡ ಇಲ್ಲವಾಗುತ್ತದೆ. ತಿನ್ನುವುದು, ಮಲಗುವುದು ಸುಖವಾಗಿರುವುದು ಅಷ್ಟಕ್ಕೇ ಸೀಮಿತವಾಗಿ ಬಿಡುತ್ತದೆ.
ಈ ಇಲಿಗಳ ಸ್ವಭಾವ ಇತರ ಆರೋಗ್ಯಕರ ಸಕ್ರಿಯ ಇಲಿಗಳ ಮೇಲೂ ಆಗುತ್ತದೆ. ಹೀಗಾಗಿ ಈ ಬ್ಯೂಟಿಫುಲ್ ಬನ್ಸ್ಗಳ ಸಂಖ್ಯೆ ಹೆಚ್ಚುತ್ತದೆ ಆದರೂ ಜನನ ದರ ಕ್ಷೀಣಿಸುತ್ತದೆ. ಉಳಿದ ಸ್ವಸ್ಥ ಇಲಿಗಳು ಕ್ರೂರವಾಗಿದ್ದುದಲ್ಲದೆ, ಇತರ ಇಲಿಗಳನ್ನೂ ತಿನ್ನತೊಡಗಿದ್ದವು. ಪ್ರಜನನ ಸಾಮರ್ಥ್ಯ ಇದ್ದರೂ , ಅದು ಆರೋಗ್ಯಕರ ಅಭ್ಯಾಸ ಆಗಿರಲಿಲ್ಲ. ಪ್ರಯೋಗ ಶುರುವಾಗಿ 920 ದಿನ ನಂತರ ಕೊನೆಯ ಜನನ ಕಂಡುಬಂತು. ಅಲ್ಲಿಗೆ ಇಲಿಗಳ ಸಂಖ್ಯೆ 2200 ಆಗಿತ್ತು. ಇದರ ನಂತರ ಜನನ ದರ ಶೂನ್ಯವಾಗಿ , ಮರಣ ದರ ಹೆಚ್ಚಾದ ಕಾರಣ ಇಲಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಪ್ರಯೋಗಶಾಲೆಯ ಇಲಿಗಳ ಅಂತ್ಯ ಶುರುವಾಗುತ್ತದೆ. ಇದಕ್ಕೆ ಬಿಹೇವಿಯರಲ್ ಸಿಂಕ್ ಎಂದು ಕರೆದರು. ನಿಧಾನವಾಗಿ ಇಲಿಗಳು ಕಡಿಮೆಯಾಗುತ್ತ ಹೋದವು. ಇದೇ ಪ್ರಯೋಗ ಇಪ್ಪತ್ತೈದು ಬಾರಿ ಮಾಡಿದಾಗಲೂ ಇದೇ ಫಲಿತಾಂಶ ಕಂಡುಬಂತು. ಈ ಇಪ್ಪತ್ತೈದನೇ ಪ್ರಯೋಗವನ್ನು ಕೊಂಚ ಬದಲಿಸಲು ಕೊನೆಯಲ್ಲಿ ಒಂದು ಬದಲಾವಣೆ ಮಾಡಿದರು. ಸಾವಿನಂಚಲ್ಲಿ ಇದ್ದ ಕೆಲವು ಇಲಿಗಳನ್ನು ಕೋಣೆಗಳಿಂದ ಹೊರತರಲಾಯಿತು. ಪ್ರಯೋಗದ ಆರಂಭದಲ್ಲಿ ಇದ್ದಂಥ ಹೊಸ ಉತ್ತಮ ಪರಿಸ್ಥಿತಿಯಲ್ಲಿ ಇರಿಸಿದರು. ಪರಿಸ್ಥಿತಿ ಬದಲಾದರೂ ಇಲಿಗಳಲ್ಲಿ ಯಾವುದೇ ಪರಿವರ್ತನೆ ಕಾಣಲಿಲ್ಲ. ವಯಸ್ಸೇರಿದಂತೆ ಸತ್ತುಹೋದವು.
ಇದು ಪ್ರಯೋಗ. ಮನುಷ್ಯರಿಗೂ ಇದು ಅನ್ವಯವಾಗುತ್ತದೆ.

LGBT ಭಾರತೀಯ ಮೂಲದಲ್ಲಿ ಬೆಳೆದದ್ದಲ್ಲ. ಇದು ಪಾಶ್ಚಾತ್ಯ ಜಗತ್ತಿನ ಸೃಷ್ಟಿ. ನಿರ್ದಿಷ್ಟವಾಗಿ ಹೇಳುವುದಾದರೆ ಅಮೇರಿಕನ್ ಸಮಾಜದ ಸೃಷ್ಟಿ. ಗಮನಿಸಬೇಜಾದ ಅಂಶ ಎಂದರೆ ಇದು ನಾಲ್ಕು ಐದು ನಿರ್ದಿಷ್ಟ ಸಮುದಾಯಗಳ ಗುಂಪಲ್ಲ, ಇದೊಂದು ಲೈಂಗಿಕ ಸಮುದಾಯವಾಗಿದ್ದು LGBTQIA+ ಎಂದು ಹೇಳುತ್ತಾರೆ. ಅಂದರೆ ಇನ್ನೆಷ್ಟೋ ವಿಧದ ಜನರು ಈ ಗುಂಪಿನಡಿ ಬರುತ್ತಾರೆ.

ಇದರ ಉಗಮ ಹೇಗೆ?
ನೋಡಿದರೆ ಇದೊಂದು ಶುದ್ಧ ರಾಜಕಾರಣದ ಕೂಸು. ಏಕೆಂದರೆ ಅಮೇರಿಕದಲ್ಲಿ ಒಂದು ಮೈನಾರಿಟಿ ತರಹ ಇದು ಸ್ಥಾಪಿತವಾಗಿದೆ. ಕ್ರಿಶ್ಚಿಯನ್ ಮೂಲಭೂತ ವಾದಗಳನ್ನು ಮಟ್ಟಹಾಕುವುದು ಇದರ ಹಿಂದಿನ ಉದ್ದೇಶ. ಏಕೆಂದರೆ ಅಮೆರಿಕದ ಮೂಲ ನಿವಾಸಿಗಳನ್ನು ವಲಸಿಗ ಅಮೇರಿಕದವರು ಯಾವಾಗಲೋ ಮುಗಿಸಿಬಿಟ್ಟಿದ್ದರು. ಹಾಗಾಗಿ ಈ ಗುಂಪಿನ ಸೃಷ್ಟಿ ಮಾಡಿ ಒಂದು ಬ್ಯಾನರ್ ಅಡಿ ತರಲು ಹಂಚಿಕೆ ಹಾಕುತ್ತಾರೆ. ಇದರ ನಂತರ ಬೋಪಸಂನ ತಾಲಿಬಾನಿ ಅಲೆ ಸಮಾಜದ ದರ್ಶನವನೇ ನಷ್ಟಗೊಳಿಸುತ್ತದೆ.

ಭಾರತದಲ್ಲಿ ಈ ತರಹದ ಚಿತ್ರಣವೇನಿಲ್ಲ. ಸ್ತ್ರೀ ಪುರುಷರ ಹೊರತಾಗಿಯೂ ಇದ್ದವರನ್ನು ಇಲ್ಲಿ ಸ್ವೀಕರಿಸಿದ್ದಾರೆ. ಅವರೂ ಸಹ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಮಹಾಭಾರತದ ಕತೆಯಿರಿಲಿ , ರಾಮಾಯಣ ಇರಲಿ ನಮಗೆ ಅನೇಕ ಉಲ್ಲೇಖಗಳು ದೊರೆಯುತ್ತವೆ. ಪುರುಷ ಸ್ತ್ರೀ ಹೊರತಾಗಿಯೂ ಲಿಂಗ ಇರುತ್ತದೆ ಎಂದು ಪುರಾತನ ಕಾಲದಿಂದಲೇ ನಂಬಲಾಗಿದೆ. ಹಾಗಾಗಿ ಭಾರತದಲ್ಲಿ ತೊಂದರೆ ಇಲ್ಲ.
ಅಮೇರಿಕಾದಲ್ಲಿ ಹೆಣ್ಣು ಯಾವುದು ಗಂಡು ಯಾವುದು ಎಂಬ ಜಟಿಲ ಪ್ರಶ್ನೆ ಇದ್ದರೆ ಅದು ಎಲ್ಜಿಬಿಟಿ ಸಮುದಾಯಕ್ಕೆ ಉತ್ತರಿಸಲಾಗದ ಜಟಿಲ ಪ್ರಶ್ನೆ. ಸರ್ವೇ ಸಾಮಾನ್ಯವಾಗಿ ಜೀವಶಾಸ್ತ್ರದ ಮೂಲಕ ಎಲ್ಲರಿಗೂ ಗೊತ್ತಿದೆ. ಆದರೆ ಎಲ್ಜಿಬಿಟಿ ಪ್ರಕಾರ ಒಂದು ಹುಡುಗಿ ತಾನು ಹುಡುಗ ಎಂದುಕೊಂಡರೆ , ಹುಡುಗಿಯಂತೆ ಕಂಡರೂ ಸಹ ಎಲ್ಲರೂ ಹುಡುಗ ಎಂದೇ ಸ್ವೀಕರಿಸಬೇಕು. ಒಂದು ವೇಳೆ ಹುಡುಗ ತಾನು ಹುಡುಗಿ ಎಂದುಕೊಂಡರೆ ಗಡ್ಡ ಮೀಸೆ ಇದ್ದರೂ ಆತ ಹುಡುಗಿ ಎಂದು ಸಮಾಜ ಒಪ್ಪಬೇಕೆಂಬುದು ಎಲ್‌ಜಿಬಿಟಿಕ್ಯೂ ವಾದ.
ಲಿಂಗ ನಿರ್ಧಾರ ಎನ್ನುವುದು ಸಂಕೀರ್ಣ ವಿಚಾರವೇ ಅಲ್ಲ. ದೇವರ ಸೃಷ್ಟಿಯಲ್ಲಿ ಅದು ಸುಸ್ಪಷ್ಟವಾಗಿದೆ. ವೈಜ್ಞಾನಿಕವಾಗಿ ನೋಡುವುದಾದರೆ ಪ್ರತಿ ಜೀವವೂ ಜೀವಕೋಶಗಳಿಂದ ಉಂಟಾಗುತ್ತದೆ. ಅದೇ ಯಾವ ಲಿಂಗ ಎಂದು ಹೇಳುತ್ತದೆ. ಪ್ರತಿ ಜೀವಕೋಶದ ನ್ಯೂಕ್ಲಿಯಸ್ ನಲ್ಲಿ ಕ್ರೋಮೋಸೋಮ್ಗಳ ಜೋಡಿ ಇರುತ್ತದೆ. ಹೆಣ್ಣು ಶರೀರರದಲ್ಲಿ XX ಕ್ರೋಮಸೋಮು ಇದ್ದರೆ, ಗಂಡು ಶರೀರ ಆಗುವುದು XY ಕ್ರೋಮೋಸೋಮ್ ಜೋಡಿಯ ಕಾರಣದಿಂದ.
ಇನ್ನು ಅನಾಟಮಿ ಮೂಲಕ ನೋಡಿದರೆ, ಯಾವ ಶರೀರ ಹೆಣ್ಣು ಜನನಾಂಗ ಹೊಂದಿರುತ್ತದೋ ಅದು ಸ್ತ್ರೀ ಮತ್ತು ಗಂಡು ಪ್ರಜನನಾಂಗ ಹೊಂದಿದ್ದರೆ ಪುರುಷ. ಪುರುಷನಾದರೆ ಟೆಸ್ಟೋಸ್ಟಿರಾನ್ ಹಾರ್ಮೋನ್ ಉತ್ಪಾದನೆಯಾಗುತ್ತದೆ. ಮಹಿಳೆಯಾದರೆ ಈಸ್ಟರೋಜೆನ್ ಮತ್ತು ಪ್ರೊಜೆಸ್ಟಿರಾನ್ ಹಾರ್ಮೋನ್ ಉತ್ತತ್ತಿ ಸಾಮರ್ಥ್ಯ ಇರುತ್ತದೆ. ಬೇರೆ ಬೇರೆ ಹಾರ್ಮೋನ್ ಗಳಿದ್ದರೂ ಲಿಂಗ ನಿರ್ಧರಿಸುವುದು ಈ ಹಾರ್ಮೋನುಗಳು.

ಸಲಿಂಗ ವಿವಾಹ ಕುರಿತು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಬಂದಾಗ, ಜಡ್ಜ್ ಆದವರು ” ಲಿಂಗ ಎನ್ನುವುದು ತಲೆಯಲ್ಲಿ ಇರುತ್ತದೆ. ಸಂಪೂರ್ಣ ಪುರುಷ ಅಥವಾ ಮಹಿಳೆ ಎನ್ನುವ ಯಾವುದೇ ಸಿದ್ಧಾಂತವಿಲ್ಲ ಆದಾಗ್ಯೂ ಒಬ್ಬರ ಜನನಾಂಗ ನೋಡಿ ಅದನ್ನು ನಿರ್ಧರಿಸಲು ಬರುವುದಿಲ್ಲ” ಎಂದಿದ್ದಾರೆ.ಹೀಗೆ ಹೇಳಿದವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್.
ಇಂದು ಈ ಎಲಜಿಬಿಟಿಕ್ಯೂ ಸಮುದಾಯ ಜಾಗತಿಕ ಜನಸಂಖ್ಯೆಯ ಎರಡರಷ್ಟಿದೆ. ಅಮೇರಿಕದಲ್ಲಿ ಇವರ ಪ್ರಮಾಣ 13.6%. ಹಾಗೂ ಈ ಲಿಂಗ ಸ್ವಯಂನಿರ್ಧರಣ ಪ್ರಕ್ರಿಯೆಯಲ್ಲಿ ನಿಧಾನಕ್ಕೆ ಏರಿಕೆ ಕಂಡುಬರುತ್ತದೆ. 1997 ರಿಂದ 2023ರವರೆಗೆ ನೋಡಿದಾಗ , 2017ರಿಂದ 2021ನಡುವಿನ ಪ್ರೌಢರು ತಮ್ಮನ್ನು ಎಲ್ಜಿಬಿಟಿಕ್ಯೂ ಎಂದು ಗುರುತಿಸಿಕೊಳ್ಳುತ್ತಿದ್ಧಾರೆ.

300x250 AD

ಸಲಿಂಗಕಾಮಿ ಜೋಡಿಗಳು ಒಂದಾದರೂ ಅವರು ಮಗುವನ್ನು ಹೆರಲಾಗದು. ಅವರು ದತ್ತು ಸ್ವೀಕರಿಸಬೇಕಾಗುತ್ತದೆ. ತಾಯ್ತನ ಗೊತ್ತಿರದೆ ಮಗುವಿನ ಪಾಲನೆ ಹೇಗೆ ಮಾಡಬಹುದು ನೀವೇ ಊಹಿಸಿ. ಮಕ್ಕಳನ್ನು ಬೆಳೆಸುವಾಗ ಬಾಲ್ಯದಿಂದಲೇ ಅವರನ್ನು ‘ಗೇ’ ಆಗಿ ಬೆಳೆಸುತ್ತಾರೆ. ಲಿಂಗ ಧೃಢೀಕರಣಕ್ಕೆ ಚಿಕಿತ್ಸೆ ಸಹ ಮಾಡುತ್ತಾರೆ. ಪ್ಯುಬರ್ಟಿ ಬ್ಲಾಕರ್ ಗುಳಿಗೆ ನೀಡುತ್ತಾರೆ. ಪ್ರೌಢರಾಗುವ ಹಾರ್ಮೋನನ್ನು ಈ ಟ್ಯಾಬ್ಲೆಟ್ ತಡೆದುಬಿಡುತ್ತದೆ. ಹೆಣ್ಣುಮಗುವಿಗೆ ಈ ಮಾತ್ರೆ ಕೊಟ್ಟರೆ ಅವಳ ಋತುಚಕ್ರ ನಿಂತುಹೋಗುತ್ತದೆ. ಮೆನುಸ್ಟರೇಶನ್ ಸ್ತಬ್ಧವಾಗಿ ಮೆನೊಪಾಸ್ ಆಗುತ್ತದೆ. ಇದೊಂದು ಚೈಲ್ಡ್ ಅಬ್ಯೂಸ್ ಮಗುವಿನ ಮೇಲಿನ ದೌರ್ಜನ್ಯ ಅಲ್ಲವೇ ? ಎಷ್ಟೊಂದು ಭಯಾನಕ ಎಂದು ನೀವು ಊಹಿಸಿ. ಇವರು ಒಂದು ಪ್ರಾಣಿಗಳಂತೆ, ಇವಕ್ಕೆ ಮಕ್ಕಳಾಗುವುದಿಲ್ಲ, ಬೇರೆಯವರ ಮಕ್ಕಳನ್ನು ಹಾದಿ ತಪ್ಪಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಮಾನಸಿಕವಾಗಿ ಅಸ್ಥಿರಗೊಳಿಸುತ್ತಿದ್ದಾರೆ.

ಗಂಡು ಹೆಣ್ಣಿನ ಹೊರತಾಗಿ ಇತರ ಲಿಂಗಿಗಳನ್ನು ನಿರಾಕರಿಸಬೇಕಿಲ್ಲ. ಸಮಾಜ ಅವರನ್ನು ಸ್ವೀಕರಿಸಬೇಕು. ಭಾರತದಲ್ಲಿ ಸ್ವೀಕರಿಸಲಾಗಿದೆ. ಭಾರತದ ದರ್ಶನ ಮತ್ತು ಪಾಶ್ಚಾತ್ಯ ದರ್ಶನದ ನಡುವೆ ಅಂತರವಿದೆ. ಪಾಶ್ಚಾತ್ಯ ದರ್ಶನ ಮಾನವ ಜನ್ಮ ಒಂದೇ ಸಲ ಸಿಗುತ್ತದೆ ಎಂದು ನಂಬುತ್ತದೆ. ಹುಟ್ಟಿದ್ದೆ ಸುಖ ಭೋಗ, ಅನುಭವಿಸಲು ಎಂದು ನಂಬುತ್ತದೆ. ಹಾಗಾಗಿ ಇದ್ದೊಂದು ಜನ್ಮ ಮಜಾ ಮೋಜು ಮಸ್ತಿ ಮಾಡಿ ಇಂದ್ರಿಯ ಸುಖ ಅನುಭವಿಸಿ ತಮ್ಮ ಆಯುಷ್ಯ ಕಳೆದುಕೊಳ್ಳುವ ಸ್ವಾರ್ಥ ಲಾಲಸಿ ಜೀವನ ಅವರದ್ದು. ಆದರೆ ಭಾರತದ ದರ್ಶನ ಕೇವಲ ಶರೀರವನ್ನು ಅಂತಿಮ ಎಂದು ನಂಬದೆ ಅದಕ್ಕೂ ಮಿಗಿಲಾಗಿ ಆತ್ಮವಿದೆ ಎನ್ನುತ್ತದೆ. ಆತ್ಮಕ್ಕೆ ಸಾವಿಲ್ಲ. ಅದು ಶರೀರ ಬದಲಿಸಿ ಅಸಂಖ್ಯ ಜನ್ಮ ತಾಳುತ್ತದೆ. ಹಾಗೂ ಮೋಕ್ಷ ಜೀವನದ ಗುರಿ ಎಂದು ನಂಬುತ್ತದೆ.ಇಲ್ಲಿ ಇಂದ್ರಿಯ ಸುಖ ಗೌಣವಾಗುತ್ತದೆ.

ಪಾಶ್ಚಾತ್ಯ ರ ಗುರಿ ಮೋಜು ಉಡಾಯಿಸುವುದು. ಇಂದ್ರಿಯ ಸುಖದಲ್ಲಿ ಜೀವನಯಾಪನೆ. ಇದಕ್ಕಾಗಿ ಅವರು ಅಪ್ರಕೃತಿಕ ಮಾರ್ಗದಲ್ಲಿ ಕೂಡ ಸಾಗುತ್ತಿದ್ದಾರೆ. ಇದರ ಪರಿಣಾಮ ನೆಟ್ಟಗಿರುವುದಿಲ್ಲ. ಇಂದು 78% ಸಲಿಂಗಕಾಮಿಗಳು ಎಸ್ಟಿಡಿ ಅಂದರೆ ಸೆಕ್ಷುವಲ್ ಟ್ರಾನ್ಸಮಿಟೆಡ್ ಡಿಸೀಸ್ ಲಿಂಗ ಪರಿವರ್ತಿತ ಖಾಯಿಲೆಯಿಂದ ಪೀಡಿತರಾಗಿದ್ದಾರೆ.

ಹೌದು ಭಾರತೀಯರ ಗುರಿ ಮೋಕ್ಷ. ಅಂದ ಮೇಲೆ ಈ ಚರ್ಚೆ ಆದರೂ ಏಕೆ ?
ಒಬ್ಬಳು ಜೈವಿಕವಾಗಿ ಮಹಿಳೆ. ಗರ್ಭಧಾರಣೆ ಸಮಯದ ನಂತರ ಟೆಸ್ಟೋಸ್ಟಿರಾನ್ ಹಾರ್ಮೋನ್ ತೆಗೆದುಕೊಂಡು ಮಗುವಿಗೆ ಎದೆಹಾಲು ಉಣಿಸಬಾರದೆಂದು ಸ್ತರಗಳನ್ನು ತೆಗೆಸುತ್ತಾಳೆ. ಈ ಮನುಷ್ಯದ ಪ್ರಕಾರ ತಾನು ಗಂಡಾಗಿದ್ದು ತಪ್ಪಾಗಿ ಮಹಿಳೆ ದೇಹ ದೊಳಕ್ಜೆ ಸೇರಿದ್ದೆ ಎಂದು. ಇದರ ಬಳಿ ಯುಟೆರಸ್ ಕೂಡಿದೆ ಮತ್ತು ಮಗುವನ್ನು ಧರಿಸಲು ಗರ್ಭ ಚೀಲವು ಇದೆ.ಆದರೆ ಪತ್ರಿಕೆಯಲ್ಲಿ ಮಾನವ ಪುರುಷ ಕೂಡಾ ಮಗುವನ್ನು ಹೆರಬಹುದೆಂದು ಸುದ್ದಿ ಬಿತ್ತರವಾಗುತ್ತದೆ. ಅಲ್ಲ, ಈ ಮನುಷ್ಯ ಗಂಡಾಗಿದ್ದು, ತಪ್ಪು ಶರೀರದಲ್ಲಿ ಹೊಕ್ಕದ್ದರೆ ಮತ್ತೆ ಗರ್ಭಧರಿಸುವುದಾದರೂ ಏಕೆ ? ಇದು ಮಮತ್ವ, ಮಾತೃತ್ವ ಮತ್ತು ತಾಯ್ತನ ಅಪಹಾಸ್ಯವಲ್ಲದೆ ಮತ್ತೇನು? ತಾಯ್ತನ ಎನ್ನುವುದು ದೈವಿಕವಾದದ್ದು ಇದು ಎಲ್ಲರಿಗೂ ಅರ್ಥವಾಗಬೇಕಲ್ಲ..! ಇದು ಮಹಿಳಾವಿರೋಧಿ ಆಗುವುದಿಲ್ಲವೇ? ಹೀಗಾಗಿ ಮಾನಸಿಕತೆ ಮತ್ತಷ್ಟು ವಿಚಿತ್ರ ಆಗುತ್ತ ಹೋಗುತ್ತಿದೆ. ಲಿಂಗ ಕುರಿತ ಗೊಂದಲವಷ್ಟೇ ಅಲ್ಲ, ಇಂದು ಟ್ರಾನ್ಸೇಬಲ್ಡ್ ( ಪರಿವರ್ತಿಸಬಹುದಾದ) ಹೊಸ ತಳಿಗಳು ಹುಟ್ಟಿಕೊಳ್ಳುತ್ತಿವೆ.
ಒಬ್ಬ ಸ್ವಸ್ಥ ಆರೋಗ್ಯ ವ್ಯಕ್ತಿಗೆ ತಾನು ಅಂಧ ಎನಿಸುತ್ತದೆ. ಆಗ ಆತ ತನ್ನ ಕಣ್ಣನ್ನೇ ತೆಗೆಸಿಬಿಡುತ್ತಾನೆ. ಇದು ಟ್ರಾನ್ಸೇಬಲ್ಡ್ ಪ್ರತಾಪ. ಇಂದು ಯುಎಸ್ನಲ್ಲಿ ಬೋಪಿಸಂ ವ್ಯಾಪಿಸಿದೆ. ಮತ್ತು ಇವೆಲ್ಲ ಸತ್ಯ ಘಟನೆಗಳು. ಸಾವಿರಾರು ಸಂಖ್ಯೆ ಇಂಥ ಪ್ರಕರಣಗಳಿವೆ. ಇವುಗಳಿಗೆಲ್ಲ ದೊಡದಡ ಮೀಡಿಯಾ ಗಳ ಕುಮ್ಮಕ್ಕೂ ಇದೆ. ಇದರ ಹಿಂದೆ ಜಾಗತಿಕವಾಗಿ ರಾಜಕೀಯ ಉದ್ದೇಶ ಇದೆಯೇ?
ಭಾರತ ಇಂದು ಪ್ರಪಂಚದ ದೊಡ್ಡ ಮಾರುಕಟ್ಟೆ. ಹಾಗಾಗಿ ಇಂಥ ವಿಚಾರಗಳತ್ತ ಗಮನಹರಿಸಬೇಕಲ್ಲವೇ?

LINK:https://youtu.be/bfYJp3AVTLs

ಕೃಪೆ: https://www.youtube.com/@vedscienceandmaths

Share This
300x250 AD
300x250 AD
300x250 AD
Back to top