Slide
Slide
Slide
previous arrow
next arrow

ಹೆಗಡೆಯಲ್ಲಿ ‘ಸ್ಮರಣ-ಮಿಲನ-ಮಥನ’ ಹವ್ಯಕ ಸ್ನೇಹಕೂಟ

300x250 AD

ಕುಮಟಾ : ತಾಲೂಕಿನ ಹೆಗಡೆಯಲ್ಲಿ ಹವ್ಯಕ ಬಳಗದ ವತಿಯಿಂದ ಸ್ಮರಣ-ಮಿಲನ-ಮಥನ ಎಂಬ ಸ್ನೇಹಕೂಟ ಕಾರ್ಯಕ್ರಮ ಜರುಗಿತು.ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹವ್ಯಕ ಸಮಾಜದ ಪ್ರಮುಖರಾದ ಶಿವಾನಂದ ಹೆಗಡೆ ಕಡತೋಕ ಹಾಗೂ ಎಮ್. ಜಿ.ಭಟ್ಟ ಜಂಟಿಯಾಗಿ ಉದ್ಘಾಟಿಸಿದರು.

ನಂತರ ಹೆಗಡೆಯ ಹವ್ಯಕ ಸಮಾಜದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆ ಅಲಂಕರಿಸಿರುವ ಕೆನರಾ ಬ್ಯಾಂಕ್ ಮಣಿಪಾಲದ ಸರ್ಕಲ್ ಆಫೀಸ್ ಪ್ರಧಾನ ವ್ಯವಸ್ಥಾಪಕರಾದ ಎಮ್.ಜಿ. ಪಂಡಿತ ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್ ರೀಜನಲ್ ಆಫೀಸ್ ಧಾರವಾಡದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಭಟ್ಟ ಇವರನ್ನು ಹವ್ಯಕ ಬಳಗದ ಸದಸ್ಯರು ಸನ್ಮಾನಿಸಿ ಗೌರವಿಸಲಾಯಿತು..

ಇದೇ ಸಂದರ್ಭದಲ್ಲಿ ವಿಪ್ರ ಒಕ್ಕೂಟದ ವತಿಯಿಂದ ಡಾ. ಗೋಪಾಲಕೃಷ್ಣ ಹೆಗಡೆ ಹಾಗೂ ಸದಸ್ಯರು ಒಕ್ಕೂಟದ ವತಿಯಿಂದ ಹಾಗೂ ಕೆ.ಎಸ್. ಭಟ್ಟ ದಂಪತಿಗಳು ಕೂಡ ಸನ್ಮಾನಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಾನಂದ ಹೆಗಡೆ ಇಂದಿನ ಈ ಸ್ನೇಹಕೂಟ ಉತ್ತಮವಾಗಿ ಸಂಘಟಿಸಲಾಗಿದೆ. ಈ ಸ್ನೇಹಕೂಟದಲ್ಲಿ ನಮ್ಮ ಸಮಾಜದ ಈರ್ವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಸಾಧನೆಗೆ ಗೌರವ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿದೆ. ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾದ ಎಮ್. ಜಿ. ಪಂಡಿತ ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ಎಸ್. ಭಟ್ಟ ಇವರಿಬ್ಬರಿಗೂ ನಾನು ಶುಭ ಕೋರುತ್ತೇನೆ. ಈ ಈರ್ವರೂ ಕೂಡ ಅತ್ಯಂತ ಸರಳ ಸಜ್ಜನರು. ಇವತ್ತಿನ ದಿನದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿರುವವ ಅಧಿಕಾರಿಗಳು ಜನರಿಗೆ ಹತ್ತಿರದಿಂದ ಸ್ಪಂದಿಸುವುದಾಗಲಿ, ಉಪಕರಿಸುವುದಾಗಲಿ ಅಥವಾ ತಮ್ಮ ವ್ಯಾಪ್ತಿಯಲ್ಲಿ ಜನರಿಗೆ ಏನೆಲ್ಲ ಸಹಾಯ ಮಾಡೋಕೆ ಸಾಧ್ಯವೊ ಅದನ್ನು ಮಾಡೋಕೆ ಬಯಸೋದಿಲ್ಲ. ಆದರೆ ಇವರಿಬ್ಬರೂ ಕೂಡ ಜನರಿಗೆ ಸ್ನೇಹಮಯಿಯಾಗಿ ತಮ್ಮಿಂದ ಜನರಿಗೆ ಏನೇನು ಸಹಾಯ ಸಹಕಾರ ಮಾಡೋಕೆ ಸಾಧ್ಯವೋ ಎಲ್ಲವನ್ನೂ ಮಾಡುತ್ತ ಜನರಿಗೆ ಅತ್ಯಂತ ಪ್ರಿಯರಾದವರಾಗಿದ್ದಾರೆ ಎಂದರು.

ಎಮ್.ಜಿ. ಭಟ್ಟ ಮಾತನಾಡಿ ನಮ್ಮ ಸಮಾಜದ ಇಬ್ಬರು ಸಾಧಕರಿಗೆ ಸನ್ಮಾನಿಸಿ ಗೌರವಿಸಿರುವುದು ತುಂಬಾ ಸಂತೋಷ. ಸಾಧನೆಗೆ ಗೌರವ ಸಮರ್ಪಿಸುವುದು ನಮ್ಮ ಆದ್ಯ ಕರ್ತವ್ಯ.ಇದು ಸಂತೋಷ ಪಡುವ ವಿಷಯ ಜೊತೆಗೆ ಇಲ್ಲಿದ್ದ ಸಾಧಕರಿರಬಹುದು, ವಿದ್ಯಾರ್ಥಿಗಳು ಇರಬಹುದು ನಾವೂ ಕೂಡ ಸನ್ಮಾನಕ್ಕೆ ಒಳಪಡಬೇಕು ಸಾಧನೆ ಮಾಡಬೇಕು ಎಂಬುದು ಮನಸಿಗೆ ಬಂದರೆ ನಮ್ಮ ಈ ಸನ್ಮಾನ ಕಾರ್ಯಕ್ರಮ ಸಾರ್ಥಕ ಹಾಗಾಗಿ ಇಬ್ಬರು ಹಿರಿಯ ಸಾಧಕರನ್ನು ಅಭಿನಂದಿಸುತ್ತೇನೆ ಎಂದರು.
ಡಾ. ಜಿ.ಜಿ. ಮಾತನಾಡಿ ಉತ್ತಮ ಗಮನಾರ್ಹ ಸಾಧನೆ ಮಾಡಿದ ನನ್ನ ಇಬ್ಬರು ಆತ್ಮೀಯರನ್ನು ಸನ್ಮಾನಿಸಿದ್ದು ತುಂಬಾ ಸಂತಸ ತಂದಿದೆ. ಇಬ್ಬರೂ ಕೂಡ ತಮ್ಮ ತಮ್ಮ ಬ್ಯಾಂಕ್ ನ ಗ್ರಾಹಕರಿಗೆ ಹಾಗೂ ಸಮಾಜಕ್ಕೆ ನೆರವಾದವರಾಗಿದ್ದಾರೆ.ಬಹಳ ಸರಳ ಸಜ್ಜನರೂ ಕೂಡ. ಇಬ್ಬರಿಗೂ ಶುಭ ಕೊಡುತ್ತೇನೆ.
ನಾವು ಏನಾದರೂ ಸಾಧನೆ ಮಾಡಲು ಹೊರಟಾಗ ನಮ್ಮವರು ನಮಗೆ ಬೆನ್ನು ತಟ್ಟಿ ಪ್ರೊತ್ಸಾಹಿಸಬೇಕೆ ವಿನಃ ಕಾಲೆಳೆಯಲು ಪ್ರಯತ್ನ ಪಡಬಾರದು. ಇಂದಿನ ದಿನಗಳಲ್ಲಿ ಬೆಳೆಯುವವರನ್ನು ಕಾಲೆಳೆದು ಅವರನ್ನು ತುಳಿಯಲು ಪ್ರಯತ್ನ ಪಡುವವರ ಸಂಖ್ಯೆ ಜಾಸ್ತಿಯಾಗಿದೆ. ನನ್ನ ಜೀವನದಲ್ಲಿಯೂ ಕೂಡ ನಾನು ಈ ಅನುಭನ ಕಂಡಿದ್ದೇನೆ ಆದರೆ ಯಾವುದಕ್ಕೂ ಜಗ್ಗದೇ ಸಮಾಜಕ್ಕೆ ನೆರವಾಗುವ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಒತ್ತನ್ನು ಕೊಟ್ಟು ದೇವರ ಆಶೀರ್ವಾದ ಜನರ ಆಶೀರ್ವಾದ ದಿಂದ ಮುನ್ನೆಡೆಯುತ್ತಿದ್ದೇನೆ ಎಂದರು.

300x250 AD

ಸನ್ಮಾನ ಸ್ವೀಕರಿಸಿದ ಎಮ್. ಜಿ. ಪಂಡಿತ ಹಾಗೂ ಕೆ. ಎಸ್. ಭಟ್ಟ ಮಾತನಾಡಿ ನಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕೆ ಮನಸ್ಸು ತುಂಬಿ ಬಂದಿದೆ ಸಂಘಟಕರಿಗೂ ನಮ್ಮ ಸಮಾಜಕ್ಕೂ ಕೃತಜ್ಞತೆ ಸಲ್ಲಿಸುತ್ತೇವೆ. ಗ್ರಾಮದೇವಿ ತಾಯಿ ಶ್ರೀ ಶಾಂತಿಕಾಂಬಾ ಪರಮೇಶ್ವರಿ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ಆಶೀರ್ವಾದವೇ ನಮ್ಮ ಈ ಸಾಧನೆಗೆ ಕಾರಣ ಎಂದರು.

ಅತಿಥಿಗಳಾಗಿದ್ದ ಎಮ್. ಎನ್. ಹೆಗಡೆ ಸನ್ಮಾನಿತರಿಗೆ ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಹೆಗ್ಗಡೆಯವರಾದ ಹರಿಹರ ಹೆಗ್ಗಡೆಯವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಸಂಘಟಕರಾದ ಕುಟುಂಬ ಯೋಜನೆಯ ಜಿ.ಕೆ.ಭಟ್ಟ ಸೂರಿ, ಈ ಸ್ನೇಹಕೂಟವನ್ನು ಮುಖ್ಯವಾಗಿ ನಮ್ಮ ಸಮಾಜದ ಜನ ಒಂದು ದಿನ ಒಗ್ಗೂಡಿ ನಮ್ಮ ಸಮಾಜದ ಉನ್ನತ ಹುದ್ದೆಯಲ್ಲಿರುವ ಇವರೀರ್ವರಿಗೂ ಗೌರವ ನೀಡಿ ದೇವರಿಗೆ ಸೇವೆ ಸಲ್ಲಿಸಿ ಭೋಜನ ಸ್ವೀಕರಿಸುವ ಸ್ನೇಹಕೂಟ ವರ್ಷಕ್ಕೊಮ್ಮೆ ಮಾಡಬೇಕು ಎಂದು ತೀರ್ಮಾನಿಸಿ ಆಯೋಜಿಸಿಲಾಗಿತ್ತು. ಕಾರ್ಯಕ್ರಮ ಯಶಸ್ಸಿಗೆ ಹವ್ಯಕ ಬಳಗದ ಮಿತ್ರರು ಕಾರಣ ಎಂದರು. ವೇದಿಕೆಯಲ್ಲಿ ಚಿದಂಬರ ಹೆಗಡೆ, ಪ್ರಭಾವತಿ ಹೆಗಡೆ ನೇತ್ರಾವತಿ ಹೆಗಡೆ ಉಪಸ್ಥಿತರಿದ್ದರು.
ಖ್ಯಾತ ನಿರೂಪಕ ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು. ಪ್ರೊ. ಶ್ರೀಧರ ಭಟ್ಟ ವಂದನೆ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಪ್ರಭಾಕರ ಹೆಗಡೆ, ಪ್ರಮೋದ ಹೆಗಡೆ, ಗೋಪಾಲಕೃಷ್ಣ ಹೆಗಡೆ, ಅರುಣ ಕಾಶಿ ಭಟ್ಟ, ಉದಯ ಕಾಶಿ ಭಟ್ಟ, ಅಮರನಾಥ ಭಟ್ಟ, ವಕೀಲ ಎನ್ಎಸ್ ಹೆಗಡೆ, ಗಜಾನನ ಹೆಗಡೆ ಹಾಗೂ ಇತರ ಹಿರಿಯರು ಮಹಿಳೆಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top