Slide
Slide
Slide
previous arrow
next arrow

‘ಕಾರವಾರದ ಗಾಂಧಿ’ ಶಿವಾನಂದ ಕಳಸ ವಿಧಿವಶ

300x250 AD

ಕಾರವಾರ: ‘ಕಾರವಾರದ ಗಾಂಧಿ’ ಎಂದೇ ಹೆಸರುವಾಸಿಯಾಗಿದ್ದ ನ್ಯಾಯಾಲಯದ ನಿವೃತ್ತ ನೌಕರ ಶಿವಾನಂದ ಕಳಸ (69) ಅವರು ನಿಧನ ಹೊಂದಿದ್ದಾರೆ.
ಗಾಂಧಿ ತತ್ವಗಳನ್ನ ಮೈಗೂಡಿಸಿಕೊಂಡಿದ್ದ ಕಳಸ ಅವರು ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳು, ಸರ್ಕಾರಿ- ಖಾಸಗಿ ಕಾರ್ಯಕ್ರಮಗಳಲ್ಲಿ ಗಾಂಧಿಯವರoತೆ ಕೋಲು ಹಿಡಿದು, ಕನ್ನಡಕ ಧರಿಸಿ, ಧೋತಿಯಲ್ಲಿ ಮೈಯ ತುಂಬಾ ಬಣ್ಣ ಬಳಿದುಕೊಂಡು ಗಾಂಧಿಯ ವೇಷಧಾರಿಯಾಗಿ ಹಾಜರಿರುತ್ತಿದ್ದರು. ನಯಾ ಪೈಸೆಯನ್ನೂ ಯಾರಿಂದಲೂ ಪಡೆಯದೆ ಸ್ವಯಂಪ್ರೇರಿತರಾಗಿ ಗಾಂಧಿ ವೇಷಧಾರಿಯಾಗಿ ಜನರಲ್ಲಿ ಗಾಂಧಿ ತತ್ವ, ಅಹಿಂಸೆ- ಸತ್ಯದ ಕುರಿತಾದ ಸಂದೇಶ ಸಾರಲು ಪ್ರಯತ್ನಿಸುತ್ತಿದ್ದರು.

ಥೇಟ್ ಗಾಂಧಿಯoತೆ ಕಾಣಿಸುತ್ತಿದ್ದ ಇವರೊಂದಿಗೆ ನ್ಯಾಯಾಧೀಶರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಚಿವ- ಶಾಸಕರುಗಳು ಸೇರಿದಂತೆ ಜನತೆ ಸೆಲ್ಫಿ/ ಫೊಟೊ ತೆಗೆದುಕೊಳ್ಳುತ್ತಿದ್ದರು. ಬಹಳ ಸೌಮ್ಯ ಸ್ವಭಾವದವರಾಗಿದ್ದರು. ಆದರೆ ಇತ್ತೀಚಿಗೆ ಜಾರಿ ಬಿದ್ದು ಅವರ ಕುತ್ತಿಗೆಯ ಬಳಿ ಭಾರೀ ಪೆಟ್ಟು ಬಿದ್ದಿತ್ತು. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ಬದುಕುಳಿಯುವುದು ಕಷ್ಟ ಎಂದಿದ್ದ ಕಾರಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ 6.30ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

300x250 AD

ಅವರ ಬಹಳಷ್ಟು ಆಪ್ತರು, ಅಭಿಮಾನಿಗಳು, ಸಂಬ0ಧಿಕರು, ನ್ಯಾಯಾಲಯದ ಸಿಬ್ಬಂದಿ ಮೃತರ ಅಂತಿಮ ದರ್ಶನ ಪಡೆದರು. ಸತೀಶ್ ಸೈಲ್ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅವರು ಓರ್ವ ಪುತ್ರ, ಈರ್ವರು ಪುತ್ರಿಯರು, ಪತ್ನಿ, ಅಳಿಯಂದಿರು, ಮೂವರು ಸಹೋದರ- ಸಹೋದರಿಯನ್ನ ಅಗಲಿದ್ದಾರೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಸೂರಜ್ ಕುರೂಮಕರ್, ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ, ಶ್ರೀಕಾಂತ ನಾಯ್ಕ, ದೀಪಕ್ ನಾಯ್ಕ, ಸಂತೋಷ್ ನಾಯ್ಕ, ಉದಯ ಕಲಸ್, ಮಹೇಶ್ ಕಳಸ, ಸೇರಿದಂತೆ ಅನೇಕರು ಮೃತರ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು. ಹರಿದೇವ ನಗರದ ರುದ್ರಭೂಮಿಯಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಿತು.

Share This
300x250 AD
300x250 AD
300x250 AD
Back to top