ಅಂಕೋಲಾ: ಇಂದು ತಮ್ಮ ಸಾರ್ಥಕ ಬದುಕನ ಎಂಬತ್ತನೆ ವಸಂತಕ್ಕೆ ಕಾಲಿರಿಸಿದ ಅಂಕೋಲೆಯ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕರನ್ನು ಅವರ ಪರಮಳದಂಗಳದಲ್ಲಿ ಕಸಾಪ ಪರವಾಗಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡುತ್ತ, 80ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ವಿಷ್ಣು ನಾಯ್ಕ ಅವರು ನಾಡಿನಾದ್ಯಂತ ಸುಪರಿಚಿತರು. ಅವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆ ಅಭಿನಂದನೀಯವೆoದರು.
ನಿವೃತ್ತ ಪ್ರಾಚಾರ್ಯ ಡಾ.ರಾಮಕೃಷ್ಣ ಗುಂದಿ ಮಾತನಾಡುತ್ತ, ಅತ್ಯುತ್ತಮ ಸಂಘಟಕರಾದ ವಿಷ್ಣು ನಾಯ್ಕ ಅವರು ನಾಡಿನ ಹೆಸರಾಂತ ಸಾಹಿತಿಗಳನ್ನು ಅಂಕೋಲೆಗೆ ಕರೆತಂದು ಪರಿಚಯಿಸಿದರೆಂದರು. ನಿವೃತ್ತ ಉಪನ್ಯಾಸಕ ವಸಂತ ನಾಯ್ಕ ವಿಷ್ಣು ನಾಯ್ಕರು ಪ್ರಕಟಿಸಿದ ನೂರಾರು ಗ್ರಂಥಗಳೇ ಅವರ ಸಾಹಿತ್ಯ ಬದುಕಿಗೆ ನಿರಂತರ ಸಾಕ್ಷಿಯಾಗಿವೆ ಎಂದರು. ಅಂಕೋಲೆಯ ಹೆಸರನ್ನು ಸಾಹಿತ್ಯ ವಲಯದಲ್ಲಿ ವಿಸ್ತರಿಸಿದ ಶ್ರೇಯಸ್ಸು ವಿಷ್ಣು ನಾಯ್ಕರದು ಎಂದು ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಅಭಿಪ್ರಾಯಪಟ್ಟರು. ಅನೇಕ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ಬೆಳೆಸಿದ ಅವರ ಸಾಹಿತ್ಯ ಪ್ರೇಮ ಅಪಾರವಾದದ್ದೆಂದರು.
ಅ0ಕೋಲೆಯ ಸಾಹಿತ್ಯ ಕ್ಷೇತ್ರದಲ್ಲಿ ವಿಷ್ಣು ನಾಯ್ಕರ ಕೊಡುಗೆ ಹೆಚ್ಚಿನದು. ಶಿಕ್ಷಣ, ಸಾಹಿತ್ಯ, ಕಲೆ, ಸಂಘಟನೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ವಿಷ್ಣು ನಾಯ್ಕರ ಸೇವೆ ಅಭಿನಂದನೀಯವೆAದು ಕಸಾಪ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಅಭಿಪ್ರಾಯಪಟ್ಟರು. 250ಕ್ಕೂ ಹೆಚ್ಚು ಪುಸ್ತಕಗಳನ್ನು ತಮ್ಮ ರಾಘವೇಂದ್ರ ಪ್ರಕಾಶನದ ಮೂಲಕ ಪ್ರಕಟಿಸುವ ಮೂಲಕ ಅನೇಕ ಬರಹಗಾರರನ್ನು ಬೆಳಕಿಗೆ ತಂದ ಶ್ರೇಯಸ್ಸು ವಿಷ್ಣು ನಾಯ್ಕರಿಗೆ ಸಲ್ಲುತ್ತದೆ ಎಂದು ಜೆ. ಪ್ರೇಮಾನಂದ ಹೇಳಿದರು.
ಶ್ಯಾಮಸುಂದರ ಗೌಡ ಮಾತನಾಡಿ, ನನಗೆ ಬದುಕು ಕಟ್ಟಿಕೊಳ್ಳಲು ವಿಷ್ಣು ನಾಯ್ಕರು ನೀಡಿದ ಸಹಾಯವನ್ನು ನಾನೆಂದೂ ಮರೆಯಲಾರೆ ಎಂದರು. ನನಗೆ ಸಾಹಿತ್ಯ ರಚಿಸಲು ಪ್ರೇರಣೆ ವಿಷ್ಣು ನಾಯ್ಕರೇ ಎಂದು ಮಕ್ಕಳ ಕವಿ ನಾಗೇಂದ್ರ ತೊರ್ಕೆ ಹೇಳಿದರು.
ಸಮಾರಂಭದಲ್ಲಿ ರಫೀಕ್ ಶೇಖ್, ಜಿ.ಆರ್. ತಾಂಡೇಲ, ಪ್ರಕಾಶ ಕುಂಜಿ, ರವೀಂದ್ರ ಶೆಟ್ಟಿ, ಎಂ.ಬಿ. ಆಗೇರ, ಅನಂತ ನಾಯ್ಕ ಇತರರು ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಿದರು. ಕಸಾಪದ ಕಾರ್ಯದರ್ಶಿ ಜಗದೀಶ ನಾಯಕರು ಸ್ವಾಗತಿಸಿದರೆ, ಇನ್ನೋರ್ವ ಕಾರ್ಯದರ್ಶಿ ಜಿ.ಆರ್. ತಾಂಡೇಲ ವಂದಿಸಿದರು.