• Slide
    Slide
    Slide
    previous arrow
    next arrow
  • ಟಿಎಸ್ಎಸ್ ನಮ್ಮ ರಾಜ್ಯದ ಸತ್ವಯುತ ಸಂಸ್ಥೆಗಳಲ್ಲೊಂದು; ಸ್ವರ್ಣವಲ್ಲೀ ಶ್ರೀ

    300x250 AD

    ಶಿರಸಿ: ಬೆಳೆಗಾರರಿಗೆ ಕೊರೋನಾದಂಥ ಕಾಲದಲ್ಲೂ ಸಮಸ್ಯೆ ಆಗದೇ ಇರಲು ಸಹಕಾರಿ ಸಂಘಗಳು ಕಾರಣ ಎಂದು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬಣ್ಣಿಸಿದರು.

    ನಗರದ ಟಿಎಸ್ಎಸ್ ಸಂಸ್ಥೆಯಲ್ಲಿ‌ ಶತಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಶನಿವಾರ‌ ಪಾದಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿದ ಬಳಿಕ ಆಶೀರ್ವಚನ ನುಡಿದರು.
    ಉತ್ತರ ಕನ್ನಡದಲ್ಲಿ ರೈತರ ಆತ್ಮಹತ್ಯೆ‌ ಕಡಿಮೆ ಇರಲು ಇಲ್ಲಿನ ಸಹಕಾರ ಸಂಘಗಳು, ಮುಖ್ಯವಾಗಿ ಟಿಎಸ್ಎಸ್ ಕೂಡ ಪ್ರಮುಖ ಕಾರಣ. ಜನರ, ರೈತರ ಸಾಲ ಬಾಧೆ ಕಡಿಮೆ ಆಗಿದೆ. ಇನ್ನು ಹೆಚ್ಚು ಕೃಷಿ, ಉಪ ಬೆಳೆಯ ಬಗ್ಗೆ ರೈತರು ಲಕ್ಷ್ಯ ಹಾಕಬೇಕು. ಅಡಿಕೆ ದೇವರ ಅನುಗ್ರಹದಿಂದ ಸಂತೃಪ್ತಿ ಜೀವನ ಅನುಭವಿಸುತ್ತಿದ್ದರೂ ಸಮಸ್ಯೆ ಇದೆ. ವೈವಾಹಿಕ ಸಮಸ್ಯೆ ಸಮಾಜದಲ್ಲಿ ಕೂಡ ಕಾಡುತ್ತಿದೆ. ವಿವಾಹ ಆದರೂ ಕೂಡುಕೊಂಡು ಹೋಗುವದು ಸಮಸ್ಯೆಯಾಗಿ ಕಾಡುತ್ತಿದೆ. ಶಿಕ್ಷಣದ ಹೆಸರಿನಲ್ಲಿ ವಿವಾಹ‌ ಮುಂದೂಡುತ್ತಿರುವದು ಸಮಸ್ಯೆ ಆಗುತ್ತಿದೆ. ಪಾಲಕರಿಂದ ಹೆಣ್ಣು‌ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಲಾಗುತ್ತಿಲ್ಲ ಎಂದರು.

    300x250 AD

    ನೂರು ವರ್ಷ ಆಗಿದೆ ಎಂದರೆ ಸಂಸ್ಥೆಗೆ ಗಟ್ಟಿತನ. ಸಾಮಾನ್ಯ‌ ಮನುಷ್ಯನಿಗೆ ಆದರೆ ವೃದ್ದಾಪ್ಯತೆ. ಸಂಸ್ಥೆಗೆ ವರ್ಷ ಕಳೆದಷ್ಟೂ ಸತ್ವ ಹೆಚ್ಚುತ್ತದೆ. ನಮ್ಮ ರಾಜ್ಯದ ಸತ್ವಯುತ ಸಂಸ್ಥೆ‌ ಟಿಎಸ್ ಎಸ್ ಎಂದರು.
    ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಫಲ ಸಮರ್ಪಣೆ ಮಾಡಿದರು. ಈ ವೇಳೆ ನಿರ್ದೇಶಕರಾದ ಗಣಪತಿ ರಾಯ್ಸದ್, ನೀರ್ನಳ್ಳಿ ಸೀತಾರಾಮ ಹೆಗಡೆ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top