• Slide
    Slide
    Slide
    previous arrow
    next arrow
  • ಲಯನ್ಸ ಶಾಲೆಯಲ್ಲಿ ಸ್ವಾಮಿ ನಿರ್ಭಯಾನಂದಜಿ ಸತ್ಸಂಗ ಹಾಗೂ ಭಜನೆ

    300x250 AD

    ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿರಸಿ ಲಯನ್ಸ್ ಕ್ಲಬ್ ಅಡಿಯಲ್ಲಿ ಜು. ಶನಿವಾರದಂದು ರಾಮಕೃಷ್ಣಾಶ್ರಮದ ಶ್ರೀಗಳಾದ ಶ್ರೀ ನಿರ್ಭಯಾನಂದ ಜಿ ಮತ್ತು ¸ಸ್ವಾಮಿ ಸುಭೇದಾನಂದ ಜಿ. ಇವರಿಂದ ವಿದ್ಯಾರ್ಥಿಗಳಿಗಾಗಿ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಿಸುವುದು ಹೇಗೆ? ಎನ್ನುವ ಕುರಿತಾಗಿ ವಿಶಿಷ್ಟ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಶ್ರೀ ಸುಭೇದಾನಂದ ಜಿ ಮೊದಲಿಗೆ ಭಜನೆಗಳೊಂದಿಗೆ ಮಕ್ಕಳ ಚಿತ್ತವನ್ನು ಸೆಳೆದರು. ನಂತರ ಸ್ವಾಮಿಗಳಾದ ಶ್ರೀ ನಿರ್ಭಯಾನಂದ ಜಿ.ಮಾತನಾಡುತ್ತಾ, ಸನಾತನ ಪರಂಪರೆಯ ಚಿಂತನೆಗಳನ್ನು ಗೌರವಿಸಿದಾಗ ವಿದ್ಯಾರ್ಥಿಗಳಲ್ಲಿ ಮೆದುಳಿನ ಶಕ್ತಿ ಹೆಚ್ಚಾಗಿ ಜ್ಞಾನ ಗ್ರಹಿಕೆ ಆಗುತ್ತದೆ. ಗುರು ಹಿರಿಯರಲ್ಲಿ ಗೌರವ ಭಾವನೆಯಿಂದ ನಡೆದುಕೊಳ್ಳಬೇಕು, ಭಾರತೀಯ ಚಿಂತನೆಗಳನ್ನು ಗೌರವಿಸಬೇಕು. ನಮ್ಮ ಸನಾತನ ಪರಂಪರೆ ಯಾವುದನ್ನು ಮಾಡಬಾರದು ಯಾವುದನ್ನು ಮಾಡಬೇಕು ಎಂಬುದನ್ನು ಮಾರ್ಗದರ್ಶಿಸುತ್ತದೆ. ಎಲ್ಲಿ ವೇದಾಧ್ಯಯನ ಚೆನ್ನಾಗಿರುವುದೋ ಅಲ್ಲಿ ಏಕಾಗ್ರತೆ ಸತ್ ಚಿಂತನೆ ತಾನೇ ತಾನಾಗಿ ಒಳಗೊಂಡಿರುವುದೆಂಬುದನ್ನು ತಿಳಿಸಿದರು. ಸ್ವಾಮೀಜಿ ವಿವೇಕಾನಂದರಂತೆ ಕಟ್ಟುನಿಟ್ಟಾದ ಬ್ರಹ್ಮಚರ್ಯ ಪರಿಪಾಲನೆ, ಒಳ್ಳೆಯ ಪುಸ್ತಕಗಳನ್ನು ಓದುವಿಕೆ ನೃತ್ಯ ಸಂಗೀತ ಚಿತ್ರಕಲೆ ಡಿಬೇಟ್… ಇದೇ ಮೊದಲಾದ ಸದಭಿರುಚಿ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದ ಚಿತ್ತ ಶುದ್ದಿಯಲ್ಲಿದ್ದು ಸಹಜವಾಗಿಯೇ ಅಂತರಂಗದ ಚೈತನ್ಯ, ಸಾಮರ್ಥ್ಯ ಹೆಚ್ಚುವುದು ಎಂಬುದನ್ನು ಮನದಟ್ಟಾಗುವಂತೆ ತಿಳಿಸಿಕೊಟ್ಟರು. ವಿವೇಕಾನಂದರ ವ್ಯಕ್ತಿತ್ವ ಅಧ್ಯಯನ ಪೀಠವನ್ನು ಸ್ಥಾಪಿಸಿ, ೮, ೯ ೧೦ನೇ ವರ್ಗದ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಅವಧಿಯನ್ನಾದರೂ ಅಧ್ಯಯನ ಅವಧಿಯನ್ನಾಗಿಸಿ ವಿವೇಕಾನಂದರ ವ್ಯಕ್ತಿತ್ವ ದರ್ಶನ ಒದಗಿಸಿಕೊಡುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.

    300x250 AD

    ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಅಶೋಕ್ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಲಯನ್ ಎಂ.ಜೆ.ಎಫ್. ರಮಾ ಪಟವರ್ದನ್ ಅತಿಥಿಗಳನ್ನು ಪರಿಚಯಿಸಿದರು. ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಲಯನ್ ಎನ್.ವಿ ಜಿ ಭಟ್ ಉಪಸ್ಥಿತರಿದ್ದರು. ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಅಶ್ವತ್ಥ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಲಯನ್ಸ್ ಕ್ಲಬ್ ನ ಸದಸ್ಯರುಗಳಾದ ಅಶ್ವತ್ಥ ಹೆಗಡೆ, ವಿನಾಯಕ್ ಭಾಗ್ವತ್ , ವಿನಾಯಕ ಹೆಗಡೆ, ಕೋಶಾಧ್ಯಕ್ಷರಾದ ಶರಾವತಿ ಹೆಗಡೆ, ಲಯನ್ಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಶಶಾಂಕ್ ಹೆಗಡೆಯವರು, ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ‍್ಯಕ್ರಮದ ಆರಂಭದಲ್ಲಿ ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಪ್ರಾರ್ಥನಾ ಗೀತೆಯನ್ನು ಹಾಡಿದರು .

    Share This
    300x250 AD
    300x250 AD
    300x250 AD
    Leaderboard Ad
    Back to top