Slide
Slide
Slide
previous arrow
next arrow

ರೋಟರಿ ಕ್ಲಬ್ ಪಶ್ಚಿಮ ಪದಗ್ರಹಣ; ವಿದ್ಯಾರ್ಥಿಗಳಿಗೆ ಸನ್ಮಾನ

300x250 AD

ಕಾರವಾರ: ರೋಟರಿ ಕ್ಲಬ್ ಪಶ್ಚಿಮದ ಪದಗ್ರಹಣ ಸಮಾರಂಭವು ನಗರದ ಹೋಟೆಲ್ ಈಡನ್‌ನಲ್ಲಿ ಜರುಗಿತು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ.ಜೊರಸನ್ ಫರ್ನಾಂಡಿಸ್‌ರವರು ಪದಗ್ರಹಣ ಅಧಿಕಾರಿಯಾಗಿ ಅಧಿಕಾರ ಹಸ್ತಾಂತರ ಮಾಡಿ ಬೋಧನೆ ನೀಡಿದರು.
ಅಧ್ಯಕ್ಷರಾಗಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಅರವಿಂದ ನಾಯಕ, ಕಾರ್ಯದರ್ಶಿಯಾಗಿ ಹೋಟೆಲ್ ಈಡನ್ ಮಾಲಕ ಡೋಲರಿಚ್ ಫರ್ನಾಂಡಿಸ್ ಮತ್ತು ಖಜಾಂಚಿಯಾಗಿ ಸಿವಿಲ್ ಇಂಜಿನಿಯರ್ ಅಶ್ವತ್ ನಾಯ್ಕ ಮತ್ತು ಇತರ ಆಡಳಿತ ಮಂಡಳಿಯವರು ಅಧಿಕಾರ ವಹಿಸಿಕೊಂಡರು.

ದ್ವಿತೀಯ ಪಿಯುಸಿಯಲ್ಲಿ ಕಾರವಾರ ತಾಲೂಕಿಗೆ ಹೆಚ್ಚಿನ ಅಂಕಗಳನ್ನು ಗಳಿಸಿದ ಸರಕಾರಿ ಪದವಿಪೂರ್ವ ಕಾಲೇಜ್ ಕಾರವಾರದ ವಿದ್ಯಾರ್ಥಿಗಳಾದ ಮೋಕ್ಷದಾ ವೆರ್ಣೇಕರ ಮತ್ತು ಮನಸ್ವಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೋ. ಹೆಮಲಾ ಡಿಸೋಜಾರವರು ತಮ್ಮ ಸಹಾಯ ನೀಡಿದರು. ಈ ಸಮಾರಂಭದಲ್ಲಿ ರೋಟರಿ ಪಶ್ಚಿಮದ ಹಿರಿಯ ಸದಸ್ಯ ಅಜಯ ಶೆಟ್ಟಿ, ಎಆರ್‌ಬಿ ಡಿಸೋಜಾ, ಜೀತೆಂದ್ರ ತನ್ನಾ, ಜಾರ್ಜ ಫರ್ನಾಂಡಿಸ್, ಶಿವಾನಂದ ನಾಯ್ಕ, ಗಜಬಿ, ರಾಜೇಶ್ ಶೆಣೈ ಹಾಗೂ ಇತರ ಸದಸ್ಯರು, ಕಾರವಾರದ ಲಾಯನ್ಸ್ ಕ್ಲಬ್, ರೋಟರಿ ಸಿಸೈಡ್, ರೋಟರಿ ಕ್ಲಬ್ ಕಾರವಾರ, ನಗರದ ಗೌರವಾನ್ವಿತ ವ್ಯಕ್ತಿಗಳು, ವೈದ್ಯರು, ಇಂಜಿನೀಯರ್ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಾರ0ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ರೇವಣಕರ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪಲ್ಲವಿ ಡಿಸೋಜಾ ವರದಿ ವಾಚಿಸಿದರು. ಅಕ್ಷಯ ಪಾವಸ್ಕರ್,ಲಕ್ಷ್ಮಿಕಾಂತ್ ತೆಂಡೂಲ್ಕರ್, ಡೆಮಿ ಫರ್ನಾಂಡಿಸ್ ಮತ್ತು ದಿನೇಶ ನಾಯ್ಕರವರು ವೇದಿಕೆಯಲ್ಲಿದ್ದವರನ್ನು ಪರಿಚಯಿಸಿದರು. ಮೆಹಬೂಬ್ ಸೈಯದ್ ಹೊಸ ಸದಸ್ಯರನ್ನು ಪರಿಚಯಿಸಿದರು. ನೂತನ ಅಧ್ಯಕ್ಷ ಅರವಿಂದ ನಾಯಕ ಅಧಿಕಾರ ಸ್ವೀಕರಿಸಿ ಎಲ್ಲರ ಸಹಕಾರ ಕೋರಿದರು. ನೂತನ ಕಾರ್ಯದರ್ಶಿ ಡಾಲರಿಚ್ ಫರ್ನಾಂಡಿಸ್ ವಂದಿಸಿದರು. ನಿತಿನ್ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top