Slide
Slide
Slide
previous arrow
next arrow

ಲಯನ್ಸ್ ಕ್ಲಬ್ ಕರಾವಳಿ ನೂತನ ಪದಾಧಿಕಾರಿಗಳ ಆಯ್ಕೆ

300x250 AD

ಅಂಕೋಲಾ: ತನ್ನ ಸಾಮಾಜಿಕ ಸೇವೆಯ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ, ಕರಾವಳಿಯ ಲಯನ್ಸ್ ಕ್ಲಬ್‌ಗಳಲ್ಲೊಂದಾದ ಲಯನ್ಸ್ ಕ್ಲಬ್ ಕರಾವಳಿಯ ಪ್ರಸ್ತುತ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿದೆ. ಅಧ್ಯಕ್ಷರಾಗಿ ಜೀವವಿಮೆ ನಿಗಮದ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹರಿಕಂತ್ರ, ಕಾರ್ಯದರ್ಶಿಯಾಗಿ ನಿವೃತ್ತ ಗ್ರಂಥಪಾಲಕ ಎಸ್.ಆರ್.ಉಡುಪಿ, ಖಜಾಂಚಿಯಾಗಿ ಹಿರಿಯ ವ್ಯಾಪಾರಸ್ಥ ಚೈನ್‌ಸಿಂಗ ಎಲ್. ರಜಪೂತ ಆಯ್ಕೆಯಾಗಿದ್ದಾರೆ.

ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಗಳಿಗೆ ತನ್ನನ್ನು ಗುರುತಿಸಿಕೊಂಡಿರುವ ಅಂಕೋಲಾ ಲಯನ್ಸ್ ಕ್ಲಬ್ ಕರಾವಳಿಯ ಈ ವರ್ಷದ ಪ್ರಥಮ ಉಪಾಧ್ಯಕ್ಷರಾಗಿ ದೇವಾನಂದ ಗಾಂವಕರ, ದ್ವಿತೀಯ ಉಪಾಧ್ಯಕ್ಷರಾಗಿ ಡಾ.ಕರುಣಾಕರ ಎಂ.ನಾಯ್ಕ, ಎಲ್‌ಸಿಐಎಫ್ ಸಂಯೋಜಕರಾಗಿ ಗಣೇಶ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ಮಹಾಂತೇಶ ರೇವಡಿ, ಸೇವಾ ಚಟುವಟಿಕೆಗಳ ಪ್ರಮುಖರಾಗಿ ಸಂಜಯ ಅರುಂಧೇಕರ, ವ್ಯವಹಾರಿಕ ಸಂವಹನ ಅಧಿಕಾರಿಯಾಗಿ ಸಂತೋಷ ಸಾಮಂತ, ಕ್ಲಬ್‌ನ ಆಡಳಿತಾಧಿಕಾರಿಯಾಗಿ ಕೆ.ವಿ.ಶೆಟ್ಟಿ, ಲಾಯನ್ ಟ್ವಿಸ್ಟರ್ ಆಗಿ ಶಂಕರ ಹುಲಸ್ವಾರ, ಕ್ಲಬ್ ಟೇಮರ್ ಆಗಿ ಓಂಪ್ರಕಾಶ ಪಟೇಲ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸಾಲಿನ ಕ್ಲಬ್‌ನ ನಿರ್ದೇಶಕರಾಗಿ ಗಿರಿಧರ ಆಚಾರ್ಯ, ರಮೇಶ ಪರಮಾರ, ಗಣಪತಿ ನಾಯಕ, ಕೇಶವಾನಂದ ನಾಯಕ, ದುರ್ಗಾನಂದ ದೇಸಾಯಿ, ಹಸನ್ ಶೇಖ್, ಸತೀಶ ನಾಯ್ಕ, ಸದಾನಂದ ಶೆಟ್ಟಿ, ವಿವೇಕ ಸಾಮಂತ, ಜಿ.ಆರ್.ತಾಂಡೇಲ್, ಶ್ರೀನಿವಾಸ ನಾಯಕ, ಡಾ.ನರೇಂದ್ರ ನಾಯಕ, ಮಂಜುನಾಥ ನಾಯ್ಕ, ಸುಧೀರ ನಾಯ್ಕ, ಚಂದನ್ ಸಿಂಗ್, ಮಹೇಶ ನಾಯ್ಕ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಇವರು ತಮ್ಮ ಅಧಿಕಾರ ಸ್ವೀಕರಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top