ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ 24 ವರ್ಷ ಸೇರಿದಂತೆ ಒಟ್ಟು 36 ವರ್ಷ 9 ತಿಂಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಶುಶ್ರೂಷಾಧಿಕಾರಿ ಲತಾ ಎಸ್.ಗಡಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಕ್ರಿಮ್ಸ್ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕರವರು ಸುದೀರ್ಘ ಸೇವೆ ಸಲ್ಲಿಸಿದ ಲತಾ ಎಸ್.ಗಡಕರ್ ಅವರನ್ನು ಸನ್ಮಾನಿಸಿ, ಕರ್ತವ್ಯ ನಿಷ್ಠತೆಯ ಹಾಗೂ ಸಕಾರಾತ್ಮಕ ನಡತೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ವೈದ್ಯಕೀಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್, ಲತಾ ಎಸ್.ಗಡಕರ್ ಅವರ ಸೇವೆಯನ್ನು ಶ್ಲಾಘಿಸಿ ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಂಜುನಾಥ ಭಟ್, ಎಲುಬು ಮತ್ತು ಕೀಲು ವಿಭಾಗದ ಸಹ ಪ್ರಾಧ್ಯಾಪಕ ಡಾ.ವೀರಭದ್ರ ಜೆ., ಶುಶ್ರೂಷಾಧೀಕ್ಷಕಿ ಲಕ್ಷ್ಮಿ ಕೋಣೆಸರ ಉಪಸ್ಥಿತರಿದ್ದರು.
ಶುಶ್ರೂಷಕ ಸಿಬ್ಬಂದಿ ಸಿಸ್ಟರ್ ಎಮಿಲಿಯಾ, ಪದ್ಮಾ ಕಳಸ್ ತಮ್ಮ ಅನಿಸಿಕೆಗಳನ್ನು ಹಂಚಿಕೊoಡರು. ಈ ಸಂದರ್ಭದಲ್ಲಿ ಎಲ್ಲ ಶುಶ್ರೂಷಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿ ಗಿರಿಜಾ ಮುಕ್ರಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶುಶ್ರೂಷಾಧಿಕಾರಿ ಭಾರತಿ ಭಂಡಾರಿ ಸ್ವಾಗತ ಭಾಷಣ ಮಾಡಿದರು. ನೇತ್ರ ಚಿಕಿತ್ಸಾ ವಿಭಾಗದ ವೈದ್ಯ ಡಾ.ರಮೇಶ್ ವೆಂಕಿಮನಿ ಕಾರ್ಯಕ್ರಮವನ್ನು ನಿರೂಪಿಸಿದರು. ಶುಶ್ರೂಷಾಧಿಕಾರಿ ಶ್ರೀಷಾ ವಂದನಾರ್ಪಣೆಯೊ0ದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.