ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ವ್ಯಾಪ್ತಿಯ ಬಾಂದೇ ಹಳ್ಳದಲ್ಲಿ ಹೊಳು ತೆಗೆಯುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೆ, ಅರೆಬರೆ ಕಾಮಗಾರಿ ಮಾಡಿ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ.
ಬಾಂದೇ ಹಳ್ಳದಲ್ಲಿ ತುಂಬಿದ ಹೊಳು ತೆಗೆದು ಅದನ್ನು ಬೇರೆಡೆಗೆ ಸಾಗಿಸಬೇಕಾಗಿತ್ತು. ಆದರೆ ಹತ್ತಾರು ಲೋಡ್ ಹೊಳನ್ನು ಹಳ್ಳದಲೇ ಅಲ್ಲಲ್ಲಿ ಗುಪ್ಪೆ ಹಾಕಲಾಗಿದೆ. ಅದು ಮತ್ತೆ ಮಳೆಗೆ ಕರಗಿ ಹಳ್ಳ ಸೇರುವಂತಾಗಿದೆ. ಕಾಟಾಚಾರಕ್ಕೆ ಕಾಮಗಾರಿ ಮಾಡಿ ಮುಗಿಸಿದ್ದು, ಸರ್ಕಾರದ ಹಣ ಸುಮ್ಮನೆ ವಿನಿಯೋಗಿಸಿದಂತಾಗಿದೆ.
ಈ ಕುರಿತು ಸಂಬoಧಪಟ್ಟ ಪ.ಪಂ. ತಾಲೂಕಾಡಳಿತ ಹೂಳು ತೆಗೆಯಲು ಸೂಕ್ತ ಕ್ರಮಕೈಗೊಳ್ಳುವ ಜೊತೆಗೆ ಈ ಹಿಂದೆ ಮಾಡಿರುವ ಅಸಮರ್ಪಕ ಕಾಮಗಾರಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಸಮರ್ಪಕ ಕಾಮಗಾರಿಯಿಂದ ಹಣದ ಪೋಲು:ಸಾರ್ವಜನಿಕರ ಆಕ್ರೋಶ
