Slide
Slide
Slide
previous arrow
next arrow

ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯನವರ ಪುತ್ಥಳಿ ಅನಾವರಣ

300x250 AD

ಕಾರವಾರ: ರೋಟರಿ ಕ್ಲಬ್‌ನಿಂದ ಮಾಜಾಳಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಯನ್ನು ರೋಟರಿ ಜಿಲ್ಲಾ ಉಪಪ್ರಾಂತಪಾಲ ಪ್ರಕಾಶ ಶೆಟ್ಟಿಯವರಿಂದ ಅನಾವರಣಗೊಳಿಸಲಾಯಿತು.

ಇದರ ಸಂಪೂರ್ಣ ಖರ್ಚುವೆಚ್ಚವನ್ನು ರೋಟರಿ ಸದಸ್ಯ ಪಿ.ವಿ.ಪ್ರಜೀತ ವರವರು ವಹಿಸಿಕೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಲಾ ಬಿ. ರವರು ಎಲ್ಲರನ್ನು ಸ್ವಾಗತಿಸುತ್ತ ರೋಟರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ರೋಟರಿ ಅಧ್ಯಕ್ಷ ರಾಘವೇಂದ್ರ ಜಿ. ಪ್ರಭುವರು ಮಾತನಾಡುತ್ತ ಸರ್.ಎಂ.ವಿಶ್ವೇಶ್ವರಯ್ಯರವರ0ಥ ಮಹಾನ್ ವೈಕ್ತಿಯ ಪುಥ್ಥಳಿ ಸ್ಥಾಪಿಸುವ ಕಾರ್ಯ ನಮ್ಮ ರೋಟರಿ ಸಂಸ್ಥೆಗೆ ಲಭಿಸಿದ್ದು, ನಮ್ಮ ಭಾಗ್ಯ, ಅವರ ವ್ಯಕ್ತಿಕ್ತವನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುತ್ತ ಈ ಕಾರ್ಯಕ್ರಮಕ್ಕೆ ಸಹಕರಿಸಿ ಎಲ್ಲರನ್ನು ಸ್ಮರಿಸಿದರು.

300x250 AD

ರೋಟರಿ ಜಿಲ್ಲಾ ಉಪಪ್ರಾಂತಪಾಲ ಪ್ರಕಾಶ ಶೆಟ್ಟಿ ಮಾತನಾಡುತ್ತ, ಪ್ರಸ್ತುತ ವರ್ಷದ ಅಧ್ಯಕ್ಷ ರಾಘವೇಂದ್ರ ರವರ ಅವಧಿಯಲ್ಲಿ ಹಲವಾರು ಒಳ್ಳೆಯ ಕಾರ್ಯಗಳು ಆಗಿರುತ್ತವೆ. ಸಂಸ್ಥೆಯ ಎಲ್ಲಾ ಸದಸ್ಯರು ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ ಎನ್ನುತ್ತ ಎಲ್ಲರನ್ನು ಶುಭಹಾರೈಸಿದರು. ಈ ಸಂದರ್ಭದಲ್ಲಿ ಮೂರ್ತಿ ನಿರ್ಮಿಸಿದ ಶಿಲ್ಪಕಾರ ಗಜಾ ಆಚಾರಿ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಬ್ಲಿಕ್ ಇಮೇಜ್ ಚೇರ್‌ಮನ್ ಕೃಷ್ಣಾ ಕೆಳಸ್ಕರ, ಕ್ಲಬ್ ಸರ್ವಿಸ್ ನಿರ್ದೇಶಕ ನಾಗರಾಜ ಜೋಶಿ, ಸದಸ್ಯರಾದ ಕೃಷ್ಣಾನಂದ ಬಾಂದೇಕರ, ಪ್ರಸನ್ನ ತೆಂಡೂಲ್ಕರ, ಮಿನಿನ ಪುಡ್ತಾಡೊ, ಅಮರನಾಥ ಶೇಟ್ಟಿ, ಮೋಹನ ನಾಯ್ಕ, ಮುರಲಿ ಗೊವೇಕರ, ಆನಂದ ನಾಯ್ಕ, ಮಾರುತಿ ಕಾಮತ, ಪ್ರಶಾಂತ ಕೊಡಾರಕರ, ವಿನೋದ ಕೊಠಾರಕರ, ಲಿಯೋ ಲುವಿಸ್, ಸಾತಪ್ಪಾ ತಾಂಡೇಲ್, ಡಾ.ಸಮೀಕುಮಾರ ನಾಯಕ, ರಾಜೇಶ ವೆರ್ಣೇಕರ, ಗುರುರಾಜ ಭಟ್, ಗುರು ಹೆಗಡೆ, ಸುರೇಶ ನಾಯ್ಕ, ಪಾಂಡುರ0ಗ ಎಸ್.ನಾಯ್ಕ, ಅರ್ಜನಾ ಶೆಟ್ಟಿ, ರಾಜಶ್ರಿ ಪ್ರಭು, ಸೀಮಾ ಗೊವೇಕರ ಹಾಗೂ ಕಾಲೆಜಿನ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಗುರುದತ್ತ ಬಂಟ ವಂದಿಸಿದರು. ಶೈಲೇಶ ಹಳದಿಪೂರ ಕಾರ್ಯಕ್ರಮವನ್ನು ನೀರೂಪಸಿದರು.

Share This
300x250 AD
300x250 AD
300x250 AD
Back to top