• Slide
    Slide
    Slide
    previous arrow
    next arrow
  • ರೋಟರಿ ಸಂಸ್ಥೆಯಿಂದ ಬೈಸಿಕಲ್ ವಿತರಣೆ

    300x250 AD

    ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಇವರ ವತಿಯಿಂದ ಫ್ರಾನ್ಸಿಸ್ ಕೆಮಿಲೊರವರಿಗೆ ಬೈಸಿಕಲ್ ವಿತರಿಸಲಾಯಿತು. ಫ್ರಾನ್ಸಿಸ್ ಕೆಮಿಲೊ ಸುಂಕೇರಿಯಿಂದ ಕಡವಾಡದವರೆಗೆ ಪ್ರತೀ ದಿನ ಬ್ರೆಡ್ ಮತ್ತು ಪಾವ್ ವಿತರಿಸುತ್ತಿದ್ದರು. ಇವರು ಉಪಯೋಗಿಸುತ್ತಿರುವ ಸೈಕಲ್ ತುಂಬಾ ಹಳೇಯದಾಗಿದ್ದು, ಅದರಿಂದ ಅವರಿಗೆ ತುಂಬಾ ತೊಂದರೆ ಹಾಗೂ ವ್ಯವಹಾರ ಮಾಡಲು ಕಷ್ಟವಾಗುತ್ತಿತ್ತು.

    ಇದನ್ನು ಪ್ರಸ್ತುತ ವರ್ಷದ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ. ಪ್ರಭುರವರು ಗಮನಿಸಿ ಇವರಿಗೆ ಬೈಸಿಕಲ್ ಕೊಡುವ ವಿಚಾರವನ್ನು ಮಾಡಿದರು. ರೋಟರಿ ಸಂಸ್ಥೆಯಲ್ಲಿ ಪ್ರತೀವಾರ ಸದಸ್ಯರ ಹಾಗೂ ಅವರ ಕುಟುಂಬದವರ ಹುಟ್ಟುಹಬ್ಬದ ಹಾಗೂ ಮುದುವೆಯ ದಿನವನ್ನು ನೆನಪಿಸಲಾಗುತ್ತದೆ. ಆಗ ಸಭೆಯಲ್ಲಿದ್ದ ಸದಸ್ಯರು ಸನ್‌ಶೈನ್ ಬಾಕ್ಸ (ಹಣ ಕೂಡಿಸುವ ಪೆಟ್ಟಿಗೆ) ನಲ್ಲಿ ತಮಗೆ ಅನಿಸಿದ ಹಣವನ್ನು ಹಾಕುತ್ತಿದ್ದರು. ಹೀಗೆ ಒಂದು ವರ್ಷದಲ್ಲಿ ಕೂಡಿದ ಹಣವನ್ನು ಯಾವುದಾದರೂ ಒಂದು ಒಳ್ಳೆಯ ಕಾರ್ಯವನ್ನು ಮಾಡಲಾಗುತ್ತದೆ. ಈ ವರ್ಷ ಅದರಲ್ಲಿರುವ ಒಟ್ಟು ಹಣದಿಂದ ಸುಮಾರು ರೂ. 7400/- ಬೆಲೆಯ ಬೈಸಿಕಲ್ ಖರೀದಿಸಿ ಫ್ರಾನ್ಸಿಸ್ ಕೆಮಿಲೊ ರವರಿಗೆ ಎಲ್ಲಾ ಸದಸ್ಯರ ಪರವಾಗಿ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top