Slide
Slide
Slide
previous arrow
next arrow

ಜು.3ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

300x250 AD

ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ, ಸನಾತನ ಭಾರತೀಯ ಸಂಸ್ಕೃತಿಯ ಸಂವರ್ಧನೆ ಸಂಕಲ್ಪದಿಂದ ಸಂಸ್ಥಾಪಿಸಲ್ಪಟ್ಟ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸುಂದರ ಪರಿಸರದಲ್ಲಿ ಜುಲೈ 3ರಂದು ವ್ಯಾಸಪೂಜೆಯೊಂದಿಗೆ ಆರಂಭಗೊಂಡು ಸೆಪ್ಟೆಂಬರ್ 29ಕ್ಕೆ ಸೀಮೋಲ್ಲಂಘನೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಮತ್ತು ಅಧ್ಯಕ್ಷ ಯು.ಎಸ್.ಗಣಪತಿ ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಧಿಕ ಶ್ರಾವಣ ಮಾಸ ಇರುವ ಹಿನ್ನೆಲೆಯಲ್ಲಿ ಆಷಾಢ ಹುಣ್ಣಿಮೆಯಿಂದ ಆರಂಭವಾಗುವ ವ್ರತ ಭಾದ್ರಪದ ಹುಣ್ಣಿಮೆಯವರೆಗೆ ಮೂರು ತಿಂಗಳ ಕಾಲ ನಡೆಯಲಿದೆ. ಶಿಷ್ಯಕೋಟಿಯ ಸಂಘಟನೆಯ ಮಹದೋದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯಕ್ಕೆ ಸಂಘಟನಾ ಚಾತುರ್ಮಾಸ್ಯವೆಂದು ಅಭಿದಾನ ನೀಡಲಾಗಿದೆ ಎಂದರು.
ಜುಲೈ 6ರಂದು ಶ್ರೀವರ್ಧಂತಿ, ಸೆಪ್ಟೆಂಬರ್ 6ರಂದು ಶ್ರೀಕೃಷ್ಣ ಜನ್ಮಾಷ್ಠಮಿ, ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶ, ಯುವ ಸಮಾವೇಶ, ಮಾತೃಸಮಾವೇಶ, ಕಾರ್ಯಕರ್ತರ ಸಮಾವೇಶ ಈ ಅವಧಿಯಲ್ಲಿ ಆಯೋಜಿತವಾಗಿವೆ.

300x250 AD

ವೈಯಕ್ತಿಕ ಹಾಗೂ ಕೌಟುಂಬಿಕ ಶ್ರೇಯೋಭಿವೃದ್ಧಿಗಾಗಿ ಯಾಗಮಾಲಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಸನ್ಮಾನ ನೆರವೇರಲಿದೆ ಎಂದು ತಿಳಿಸಿದರು.
ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮಾಧ್ಯಮ ವಿಭಾಗದ ಶ್ರೀಸಂಯೋಜಕ ಉದಯಶಂಕರ ಭಟ್ ಮಿತ್ತೂರು, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top