Slide
Slide
Slide
previous arrow
next arrow

ಚಂದಾವರ ಹನುಮಂತನಿಗೆ ದಂಡಾವಳಿ ಪೂಜೆ

300x250 AD

ಕುಮಟಾ: ಗ್ರಾಮ ದೇವತೆ ಶ್ರೀಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದಿವ್ಯ ಸಾನಿಧ್ಯ ವಹಿಸಿ ಭಕ್ತಾಧಿಗಳನ್ನು ಪೊರೆಯುತ್ತಿರುವ ಚಂದಾವರ ಸೀಮೆಯ ಪ್ರಸಿದ್ಧ ಶ್ರೀಹನುಮಂತ ದೇವರಿಗೆ ಮಂಗಳವಾರ ದಂಡಾವಳಿ ಪೂಜಾ ಸೇವೆ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮ ಸಂಪನ್ನಗೊoಡಿತು.

ಚoದಾವರ ಸೀಮೆಯ ಅಧಿದೇವ ಪ್ರಸಿದ್ಧ ಶ್ರೀ ಹನುಮಂತ ದೇವರು ಪಲ್ಲಕ್ಕಿಯಲ್ಲಿ ವಿವಿಧ ಗ್ರಾಮಗಳಿಗೆ ಸವಾರಿ ತೆರಳಿ, ಆ ಭಾಗದ ಭಕ್ತರ ಕಷ್ಟ ನೀಗಿಸುವ ಜೊತೆಗೆ ಭಕ್ತರಿಂದ ಹರಕೆ, ಪೂಜೆ ಸ್ವೀಕರಿಸುತ್ತದೆ. ಕುಮಟಾ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಚರಿಸಿ, ನಂತರ ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಸವಾರಿಗೆ ಬಂದಿದ್ದು, ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿರಾಜಮಾನನಾಗಿ ಭಕ್ತರಿಗೆ ದರ್ಶನ ಭಾಗ್ಯ ನೀಡಿದೆ. ಬುಧವಾರ ಕುಮಟಾದಿಂದ ದೇವರ ಮೂಲ ಸ್ಥಾನವಾದ ಚಂದಾವರಕ್ಕೆ ತೆರಳಲಿರುವ ಶ್ರೀ ಹನುಮಂತ ದೇವರನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಚಂದಾವರಕ್ಕೆ ಕಳುಹಿಸಿಕೊಡಲು ಭಕ್ತಗಣ ಸಕಲ ರೀತಿಯ ಸಿದ್ಧತೆ ನಡೆಸಿದೆ.
ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಶ್ರೀ ದೇವರಿಗೆ ಅತ್ಯಾಕರ್ಷಕ ಬಾಳೆ ಹಂಬೆ ಪೂಜೆ ಗಮನ ಸೆಳೆಯಿತು. ಕೊನೆಯ ದಿನವಾದ ಮಂಗಳವಾರ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಹಣ್ಣು-ಕಾಯಿ ಸೇವೆ, ಬಾಳೆಗೊನೆ ಸೇವೆ, ಮಂಗಳಾರತಿ ಇತ್ಯಾದಿ ಸೇವೆ ಸಲ್ಲಿಸಿ ಭಕ್ತಿ ಸಲ್ಲಿಸಿದರು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಪಾಕ್ಗೊಂಡು ಪ್ರಸಾದ ಭೋಜನ ನಡೆಸಿದರು.

300x250 AD

ಬುಧವಾರ ಸಹಸ್ರಾರು ಭಕ್ತವೃಂದ ಜಯಘೋಷದೊಂದಿಗೆ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಹೊರಡಲಿದೆ. ಚಂದಾವರಕ್ಕೆ ತೆರಳುವಾಗ ಮಾರ್ಗದೂದ್ದಕ್ಕೂ ಭಕ್ತ ಸಮೂಹ ಪಲ್ಲಕಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಶ್ರೀ ಹನುಮಂತ ದೇವ ಸಾಗುವ ಮಾರ್ಗವನ್ನು ಶುಚಿಗೊಳಿಸಿ, ರಂಗೋಲಿ ಹಾಕುವ ಮೂಲಕ ಶ್ರೀ ವೀರಾಂಜನೇಯನನ್ನು ಅದ್ದೂರಿಯಾಗಿ ಸ್ವಾಗತಿಸಲು ಚಂದಾವರದಲ್ಲಿಯೂ ಸಿದ್ಧತೆ ನಡೆಸಲಾಗುತ್ತಿದೆ. ಮೆರವಣಿಗೆಯೂದ್ದಕ್ಕೂ ರಾಮನಾಮ ಜಯಘೋಷ ಮೊಳಗಲಿದ್ದು, ಸಹಸ್ರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Share This
300x250 AD
300x250 AD
300x250 AD
Back to top