• Slide
    Slide
    Slide
    previous arrow
    next arrow
  • ಮಾದಕ ವಸ್ತುಗಳಿಂದ ಯುವಜನತೆಯ ವೈಯಕ್ತಿಕ, ಸಾಮಾಜಿಕ ಬದುಕಿಗೆ ಪೆಟ್ಟು: ಶಿವಾನಂದ ಕಟಗಿ

    300x250 AD

    ದಾಂಡೇಲಿ: ಜಗತ್ತಿನಲ್ಲಿ ಶೇ 17ರಷ್ಟು ಯುವಕ- ಯುವತಿಯರು ಮಾದಕ ದ್ರವ್ಯ ಸೇವನೆಗೆ ಬಲಿಯಾಗುತ್ತಿದ್ದು, ಇದರಿಂದಾಗಿ ಅವರ ವೈಯಕ್ತಿಕ, ಸಾಮಾಜಿಕ ಬದುಕಿಗೆ ಧಕ್ಕೆಯಾಗುತ್ತಿದೆ ಎಂದು ಡಿವೈಎಸ್‌ಪಿ ಶಿವಾನಂದ ಕಟಗಿ ಅಭಿಪ್ರಾಯಪಟ್ಟರು.

    ಅವರು ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಗೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು.
    ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿ ಯುವಜನಾಂಗ ತಮ್ಮ ಬದುಕನ್ನು ಕಟ್ಟಿಕೊಳ್ಳದೇ ಕಳ್ಳತನ, ಸುಲಿಗೆ, ದರೋಡೆಗಳಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ. ಮಾದಕ ದ್ರವ್ಯ ಸೇವನೆಯಿಂದ ಯುವ ಜನಾಂಗದಲ್ಲಿ ಅಪರಾಧ ಹೆಚ್ಚುತ್ತಿದ್ದು, ಯುವಕರು ದೇಶದ ಭವಿಷ್ಯದ ದೃಷ್ಟಿಯಿಂದ ವ್ಯಸನ ಮುಕ್ತರಾಗಬೇಕಿದೆ. ಕ್ಷಣಿಕ ಸುಖಕ್ಕಾಗಿ ಶಾಶ್ವತವಾದ ಸುಖದಿಂದ ವಂಚಿತರಾಗಬಾರದೆoದು ಕರೆ ನೀಡಿದರು.

    300x250 AD

    ಸಿಪಿಐ ಬಿ.ಎಸ್.ಲೋಕಾಪುರ, ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳ ಸಾಗಾಣಿಕೆಯಂತಹ ಅಪರಾಧಕ್ಕಿರುವ ಕಾನೂನಾತ್ಮಕ ಶಿಕ್ಷೆಗಳು ಹಾಗೂ ಮೋಟಾರು ವಾಹನ ಕಾಯ್ದೆ, ಪೋಕ್ಸೋ ಕಾಯ್ದೆಗಳನ್ನು ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಡಿ.ಒಕ್ಕುoದ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳ ಸಾಗಣೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಪ್ರಮಾಣ ವಚನವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಪ್ರಾಧ್ಯಾಪಕರಾದ ಎಸ್.ವಿ.ಚಿಂಚಣಿ, ಪಿಎಸ್‌ಐಗಳಾದ ಐ.ಆರ್.ಗಡ್ಡೇಕರ, ಯಲ್ಲಪ್ಪಾ ಎಸ್., ಕೃಷ್ಣಗೌಡ ಅರಕೇರಿ, ಎಎಸ್‌ಐಗಳಾದ ಮಹಾವೀರ ಕಾಂಬಳೆ, ವೆಂಕಟೇಶ ತೆಗ್ಗನ್ ಹಾಗೂ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾವ್ಯಾ ಭಟ್ ಪ್ರಾರ್ಥಿಸಿದರು. ಡಾ.ಮಂಜುನಾಥ ಚಲವಾದಿ ಸ್ವಾಗತಿಸಿದರು. ತಸ್ಲೀಮಾ ಜೊರುಂ ವಂದಿಸಿದರು. ಬಸವರಾಜ ಹೂಲಿಕಟ್ಟಿ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top