• Slide
    Slide
    Slide
    previous arrow
    next arrow
  • ಜು.3ರಿಂದ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ

    300x250 AD

    ಭಟ್ಕಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ಜುಲೈ 3ರಿಂದ ಆಗಸ್ಟ್ 31ರವರೆಗೆ ಧರ್ಮಸ್ಥಳ ಉಜಿರೆಯ ದೇವರಗುಡ್ಡದಲ್ಲಿ ನಡೆಯಲಿದೆ ಎಂದು ಇಲ್ಲಿನ ಆಸರಕೇರಿಯ ಶ್ರೀನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು.

    ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ಸಮಾಜದವರಿಗೆ ಚಾತುರ್ಮಾಸ್ಯ ವೃತದ ಅರಿವು ಇರಲಿಲ್ಲವಾಗಿತ್ತು. ಕಳೆದ ಮೂರು ವರ್ಷಗಳಿಂದ ಸಮಾಜದಲ್ಲಿ ಧರ್ಮ ಸಂಸ್ಕçತಿಯ ಅರಿವು ಮೂಡಿಸುವಲ್ಲಿ ಸ್ವಾಮೀಜಿಗಳು ಉಜಿರೆಯ ದೇವರಗುಡ್ಡದಲ್ಲಿ ಚಾತುರ್ಮಾಸ್ಯ ವೃತವನ್ನು ಆರಂಭಿಸಿದ್ದು, ಈ ಬಾರಿ ನಾಲ್ಕನೇ ವರ್ಷದ ಚಾತುರ್ಮಾಸ್ಯ ವೃತಾಚಣೆಯ ಸಂಭ್ರಮದಲ್ಲಿ ನಾವಿದ್ದೇವೆ ಎಂದರು.
    ಈ ಬಾರಿ ವಿಶೇಷವಾಗಿ ಸ್ವಾಮೀಜಿಗಳು ಮೌನ ವೃತವನ್ನು ಆಚರಿಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮೌನಾಚರಣೆಯ ಪ್ರಯುಕ್ತ ಸ್ವಾಮೀಜಿಗಳು ಭಕ್ತರ ದರ್ಶನಕ್ಕೆ ಲಭ್ಯವಿರುವುದಿಲ್ಲ. ಸಂಜೆ 6 ಗಂಟೆಯ ನಂತರ ಹಾಗೂ ಪ್ರತಿ ಭಾನುವಾರದಂದು ದಿನವಿಡೀ ಸ್ವಾಮೀಜಿಗಳು ಭಕ್ತರ ದರ್ಶನಕ್ಕೆ ಲಭ್ಯರಿರುತ್ತಾರೆ. ತಾಲೂಕಿನ ಸಮಾಜದ ಬಂಧುಗಳು ಈ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

    300x250 AD

    ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ನಮ್ಮ ಸ್ವಾಮೀಜಿಗಳ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಜುಲೈ 3ರ ಗುರುಪೂರ್ಣಿಮೆಯಂದು ಮೂಲ ಮಠ ಶ್ರೀರಾಮ ಕ್ಷೇತ್ರದ ಶ್ರೀಗುರುದೇವ ಮಠದಲ್ಲಿ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿವಿಧಾನಗಳೊಂದಿಗೆ ಚಾಲನೆ ಸಿಗಲಿದೆ. ಪೂರ್ವಾಹ್ನ 10ಕ್ಕೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಸ್ವಾಮೀಜಿಯವರಿಂದ ಶ್ರೀರಾಮ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. 10-30ಕ್ಕೆ ವೈಭವದ ಪುರಪ್ರವೇಶ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯುವುದು. ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಟಿಯಲ್ಲಿ ಶ್ರೀಗುರುಮಠದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕೆ.ಆರ್.ನಾಯ್ಕ, ಗಿರೀಶ ನಾಯ್ಕ, ವಿಠ್ಠಲ್ ನಾಯ್ಕ, ಮಂಜುನಾಥ ನಾಯ್ಕ, ಕೃಷ್ಣ ನಾಯ್ಕ, ವೆಂಕಟೇಶ ನಾಯ್ಕ, ವೆಂಕಟ್ರಮಣ ನಾಯ್ಕ, ಸುರೇಶ ನಾಯ್ಕ, ದೇವಾ ನಾಯ್ಕ, ಮೋಹನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top