ಸಿದ್ದಾಪುರ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ, ಇಸ್ಪೀಟ್ ಜುಗಾರ ಆಟ ಮುಂತಾದ ಅನಧಿಕೃ ಚಟುವಟಿಕೆಗಳ ನಿಲ್ಲಿಸಲು ಕ್ರಮ ತಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕ ಭೀಮಣ್ಣ ನಾಯ್ಕ, ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ತಹಶಿಲ್ದಾರ ಮಂಜುನಾಥ್ ಮನ್ನೋಳ್ಳಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೀರಭದ್ರ ನಾಯ್ಕ ಮಲವಳ್ಳಿ ಮಾತನಾಡಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಇಂದು ಅಕ್ರಮವಾಗಿ ಸರಾಯಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೌಟುಂಬಿಕವಾದ ಸಮಸ್ಯೆ ಎದುರಾಗುತ್ತಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಅನೇಕರು ನಮ್ಮಲ್ಲಿ ದೂರಿಕೊಂಡಿದ್ದಾರೆ. ಅಲ್ಲದೆ ಇಸ್ಪೀಟ್ ಜುಗಾರಿಗಳು ಎಲ್ಲಡೆ ನಡೆಯುತ್ತಿದೆ. ಇದರಿಂದ ಸಮಾಜದ ಸ್ವಾಸ್ತಯ್ಯ ಹಾಳಾಗುತ್ತಿದೆ.ಈ ಅಕ್ರಮ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇವುಗಳ ವಿರುದ್ಧ ಪ್ರತಿಭಟಿಸಿ ಹೋರಾಟ ನಡೆಸಬೇಕುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ರಮುಖರಾದ ಇಲಿಯಾಸ್ ಸಾಬ್ ಹಾಳದಕಟ್ಟಾ, ಲಕ್ಷ್ಮಣ ನಾಯ್ಕ ಬೇಡ್ಕಣಿ ಮೊದಲಾದವರು ಮಾತನಾಡಿದರು.
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಹಳ್ಳಿಗಳಲ್ಲಿ ಅಲ್ಲಲ್ಲಿ ಅವ್ಯಾಹತವಾಗಿ ಅಕ್ರಮ ಸರಾಯಿ ಮಾರಾಟ ವ್ಯವಹಾರ ಹಾಗೂ ಇಸ್ಪೀಟ್ ಜುಗಾರ ದಂದೆಗಳು ನಿರ್ಬಿಡೆಯಿಂದ ನಡೆಯುತ್ತಿರುವುದಾಗಿ ಜನಸಾಮಾನ್ಯರು ದೂರುತ್ತಿದ್ದಾರೆ. ಶಾಲಾ ಕಾಲೇಜುಗಳ ಹತ್ತಿರದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದಲ್ಲದೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳು ಕುಡಿತದ ಚಟಕ್ಕೆ ಬಲಿಯಾಗಿ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕುಡಿದು ಜುಗಾರನಂತ ದುಶ್ಚಟಕ್ಕೆ ತಮ್ಮನ್ನು ತೊಡಗಿಸಿಕೊಂಡು ಸಂಸಾರದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ತಯ್ಯ ಹಾಳಾಗುತ್ತದೆ. ಅಲ್ಲದೆ ಸಾಮಾನ್ಯರಿಗೂ ಕೂಡಾ ತೊಂದರೆಯಾಗುತ್ತದೆ. ಕೌಟಂಬಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಕಾರಣ ಶಿರ್ಸಿ- ಸಿದ್ದಾಪುರ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸರಾಯಿ ಮಾರಾಟ ವ್ಯವಹಾರವನ್ನು ಹಾಗೂ ಇಸ್ಪೀಟ್ ಜುಗಾರನಂತ ಚಟುವಟಿಕೆಗಳನ್ನು ಕೂಟಲೆ ನಿಲ್ಲಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ನಾಯ್ಕ ಕಂವಚೂರು, ವಿನಾಯಕ ನಾಯ್ಕ ಕೊಂಡ್ಲಿ, ರೇವಣ್ಣಪ್ಪ ನಾಯ್ಕ, ತಿಮ್ಮಣ್ಣ ಕಡಕೇರಿ, ಎಂ.ಸಿ.ನಾಯ್ಕ ಅವರಗುಪ್ಪ, ವಾಸು ನಾಯ್ಕ ಕೋಲಶಿರ್ಸಿ, ಅನೀಲ ಕೋಠಾರಿ, ಎಂ.ಸಿ.ನಾಯ್ಕ ಹುಲಿಮನೆ ಮೊದಲಾದವರಿದ್ದರು.