• Slide
    Slide
    Slide
    previous arrow
    next arrow
  • ಇಂಟಕ್ ತಾಲೂಕ ಅಧ್ಯಕ್ಷರಾಗಿ ಲಂಬೋಧರ ಹೆಗಡೆ

    300x250 AD

    ಸಿದ್ದಾಪುರ; ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ( ಇಂಟಕ್) ತಾಲೂಕ ಅಧ್ಯಕ್ಷರಾಗಿ ಬಾಳಗೋಡಿನ ಲಂಬೋಧರ ಸುಬ್ರಾಯ ಹೆಗಡೆ ಇವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಇಂಟಕ್ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತ ನೇಮಕಾತಿಗೊಳಿಸಿ ಆದೇಶ ನೀಡಿರುತ್ತಾರೆ.ಲಂಬೋಧರ ಹೆಗಡೆ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ಸಕ್ರಿಯರಾಗಿದ್ದು, ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಲಂಬೋಧರ ಸುಬ್ರಾಯ ಹೆಗಡೆಯವರು ಮಾಡಿರುವ ಪಕ್ಷದ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ನೇಮಕ ಮಾಡಲಾಗಿದೆ.ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ಕರ್ನಾಟಕ ರಾಜ್ಯ ಇಂಟಕ್ ಅಧ್ಯಕ್ಷರ ನಿರ್ದೇಶನ ಮತ್ತು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಸಂತ ನಾಯ್ಕರವರ ಸೂಚನೆಯ ಮೇರೆಗೆ ಸಿದ್ದಾಪುರ ತಾಲೂಕ ಬ್ಲಾಕ್ ಇಂಟಕ್ ಘಟಕದ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಲಾಗಿದೆ.

    ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ( ಇಂಟಕ್) ರಾಜ್ಯಾಧ್ಯಕ್ಷ ನೇತ್ರತ್ವದಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ರಾಜ್ಯದ ಆಡಳಿತದ ಮುಖ್ಯವಾಹಿನಿಗೆ ತರಬೇಕು. ಅಸಂಘಟಿತ ಕಾರ್ಮಿಕರ ಸಂಘಟನೆ ಮತ್ತು ಬಲವರ್ದನೆಗಾಗಿ ತಾವು ದುಡಿಯುತ್ತಿರೆಂದು ನಂಬಿ ತಮಗೆ ಈ ಜವಾಬ್ದಾರಿಯನ್ನು ವಹಿಸುತ್ತಿದ್ದೇನೆ ಎಂದು ಇಂಟಕ್ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತ ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top