Slide
Slide
Slide
previous arrow
next arrow

ಜೋ ಬಿಡೆನ್‌ಗೆ ಭಾರತ ಸಂಸ್ಕೃತಿ ಪ್ರತಿನಿಧಿಸುವ ಅಮೂಲ್ಯ ಉಡುಗೊರೆ ನೀಡಿದ ಮೋದಿ

300x250 AD

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾದರು. ಮೋದಿ ಶ್ವೇತಭವನಕ್ಕೆ ಆಗಮಿಸುತ್ತಿದ್ದಂತೆ ಬಿಡೆನ್ ಮತ್ತಯ ಯುಎಸ್ ಪ್ರಥಮ ಮಹಿಳೆ ಡಾ ಜಿಲ್ ಬಿಡೆನ್ ಅವರನ್ನು ಬರಮಾಡಿಕೊಂಡರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿರುವ ನ್ಯಾಷನಲ್ ಸೈನ್ಸ್ ಫೌಂಡೇಶನ್ ಎನ್‌ಎಸ್‌ಎಫ್‌ಗೆ ಭೇಟಿ ನೀಡಿದ್ದರು. ಉಭಯ ದೇಶಗಳ ಆರ್ಥಿಕತೆಗೆ ಪ್ರಮುಖವಾದ ಕೈಗಾರಿಕೆಗಳಲ್ಲಿ ಯಶಸ್ವಿಯಾಗಲು ಕೌಶಲ್ಯಗಳನ್ನು ಕಲಿಯುತ್ತಿರುವ US ಮತ್ತು ಭಾರತದ ವಿದ್ಯಾರ್ಥಿಗಳನ್ನು ಅವರು ಭೇಟಿಯಾದರು.

ವೈಟ್‌ಹೌಸ್‌ನಲ್ಲಿ ಮೋದಿ ನೀಡಿದ ಉಡುಗೊರೆ ಎಲ್ಲರ ಗಮನ ಸೆಳೆದಿದೆ. ಮೋದಿ ಭಾರತದ ವಿವಿಧ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಮೂಲ್ಯವಾದ ಹಲವು ಉಡುಗೊರೆಗಳನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ದಶದಾನದ ರೂಪದಲ್ಲಿ ಕರುನಾಡಿನ ಶ್ರೀಗಂಧವನ್ನೂ ಗಿಫ್ಟ್‌ ನೀಡಿದ್ದಾರೆ.

ಗೋದಾನದ ರೂಪದಲ್ಲಿ ಬೆಳ್ಳಿ ತೆಂಗಿನಕಾಯಿ, ಭೂದಾನವಾಗಿ ಕರ್ನಾಟಕದ ಶ್ರೀಗಂಧದ ಕೊರಡು , ತಿಲದಾನವಾಗಿ ತಮಿಳುನಾಡಿನ ಬಿಳಿ ಎಳ್ಳು, ಹಿರಣ್ಯದಾನವಾಗಿ ರಾಜಸ್ಥಾನದ 24 ಕ್ಯಾರೆಟ್ ಬಂಗಾರದ ನಾಣ್ಯ, ರೌಪ್ಯದಾನವಾಗಿ ರಾಜಸ್ಥಾನದ ಕೆತ್ತನೆಯ ಬೆಳ್ಳಿ ನಾಣ್ಯ, ಲವಣದಾನವಾಗಿ ಗುಜರಾತಿನ ಉಪ್ಪನ್ನು ದಾನವಾಗಿ ಪ್ರಧಾನಿ ನೀಡಿದ್ದಾರೆ. ಆಜ್ಯದಾನವಾಗಿ ತುಪ್ಪ, ಧಾನ್ಯ , ವಸ್ತ್ರ ಗುಡದಾನವನ್ನು (ಬೆಲ್ಲ)ವನ್ನು ನೀಡಿದ್ದು, ಇದರ ಜೊತೆ ಹಿಂದೂಗಳ ಅರಾಧ್ಯ ದೈವ ಗಣೇಶನ ವಿಗ್ರಹವೂ ವೈಟ್‌ಹೌಸ್ ಸೇರಿದೆ. ಶ್ರೀಗಂಧದ ಪೆಟ್ಟಿಗೆಯಲ್ಲಿದ್ದ ಬೆಳ್ಳಿ ಗಣೇಶನನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ದೀಪವನ್ನೂ ನೀಡಿದ್ದಾರೆ. ಇದು ಕೋಲ್ಕತ್ತಾದ ಕುಶಲಕರ್ಮಿಗಳಿಂದ ನಿರ್ಮಾಣವಾದ ದೀಪವಾಗಿದೆ. ಮೈಸೂರಿನ ಶ್ರೀಗಂಧದಿಂದ ಮಾಡಿದ ಜೈಪುರದ ಕುಶಲಕರ್ಮಿಗಳ ಕೆತ್ತನೆ ಇರುವ ಬಾಕ್ಸ್‌ನಲ್ಲಿ ಈ ಉಡುಗೊರೆ ನೀಡಲಾಗಿದೆ.

300x250 AD

Share This
300x250 AD
300x250 AD
300x250 AD
Back to top