ಶಿರಸಿ: ತಾಲೂಕಿನ ಮಂಜುಗುಣಿ ಹಾಲು ಉತ್ಪಾದಕ ಸಹಕಾರಿ ಸಂಘದಲ್ಲಿ ಜೂ.19 ರಂದು ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಸತ್ಯ ಗಣಪತಿ ಪೂಜೆ ನೆರವೇರಿತು. ನಂತರ ಡಾಕ್ಟರ್ ರಂಗನಾಥ ಜಿ.ಜೆ. ಇವರಿಂದ ಹೈನುಗಾರಿಕೆ ಬಗ್ಗೆ ಉಪನ್ಯಾಸ ನೆರವೇರಿತು.
ಸಂಜೆ 4:00 ಗಂಟೆಗೆ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ. ನಾಯ್ಕ್, ಎಸ್. ಕೆ. ಭಾಗವತ್, ಸುರೇಶ್ಚಂದ್ರ ಹೆಗಡೆ ಹಾಗೂ ಇತರ ಗಣ್ಯರು ಮಂಜುಗುಣಿ ಶ್ರೀ ದೇವರ ದರ್ಶನವನ್ನು ಪಡೆದು, ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು. ಸಭಾ ಕಾರ್ಯಕ್ರಮವನ್ನು ಶಾಸಕರಾದ ಭೀಮಣ್ಣ ನಾಯ್ಕ ಉದ್ಘಾಟಿಸಿ, ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘ ಸ್ಥಾಪನೆಗೊಂಡಿದ್ದು ತುಂಬಾ ಸಂತೋಷದಾಯಕ. ಕಳೆದ ಐದು ವರ್ಷಗಳಿಂದ ಈ ಭಾಗದ ಹೈನುಗಾರಿಕೆ ಜೊತೆಗೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಿದ್ದನ್ನು ನಾನು ಕೇಳಿದ್ದೇನೆ. ಸಂಘವು ಸಂಘದ ಲಾಭಾಂಶದ ಹಣದ ಶೇಕಡ 65 ರಷ್ಟನ್ನು ಹಾಲು ಉತ್ಪಾದಕರಿಗೆ ನೀಡುವುದು ಒಳ್ಳೆಯ ವಿಷಯ ಎಂದು ಶ್ಲಾಘಿಸಿದರು.ಅ ಹಾಲು ಉತ್ಪಾದನೆ ಜೊತೆಗೆ ಈ ಭಾಗದ ಜನರಿಗೆ ಸ್ವ ಉದ್ಯೋಗ ಮತ್ತು ಸ್ವಾವಲಂಬಿ ಜೀವನ ಜೊತೆಗೆ ಆರ್ಥಿಕ ಸದೃಢತೆಯನ್ನು ಈ ಸಂಘ ಒದಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಹಾಲು ಹಾಲು ಉತ್ಪಾದನಾ ಸಹಕಾರಿ ಸಂಘವಾಗಬೇಕು ಮತ್ತು ಹಾಲು ಉತ್ಪಾದಕರು ಸಂಘದ ಜೊತೆ ಉತ್ತಮ ಬಾಂಧವ್ಯದೊಂದಿಗೆ ಇರಬೇಕು. ಸ್ವಂತ ಕಟ್ಟಡ ನಿರ್ಮಾಣಕ್ಕೆ ನನ್ನ ಸಹಕಾರ ಇದೆ. ಶಾಸಕನಾಗಿ ಪ್ರಯತ್ನಿಸುತ್ತೇನೆ. ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯ. ಈ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ರಾಗಿಹೊಸಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದನ್ನು ನೋಡಿದ್ದೇವೆ. ಇಲ್ಲೂ ಸಹ ಉತ್ತಮ ಕೆಲಸ ಮಾಡುತ್ತಿದ್ದಾರೆ ಹೀಗೆ ಕೆಲಸ ಮಾಡುವಂತಹ ಯುವಕರಿಗೆ ಶಕ್ತಿ ಜನಸಾಮಾನ್ಯರು ಕೊಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತೇನೆ ಎಂದರು.
ಎಸ್. ಕೆ. ಭಾಗವತ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆಯ ಪ್ರಾರಂಭದಲ್ಲಿ ನನ್ನ ಅಭಿಪ್ರಾಯವನ್ನು ಕೇಳಿದ್ದರು. ಉತ್ತಮ ಕೆಲಸ ಮಾಡುವವರಿಗೆ ನಮ್ಮ ಪ್ರೋತ್ಸಾಹ ಯಾವಾಗಲೂ ಇದೆ. ಈ ಸಂಘದ ಕಾರ್ಯ ಚಟುವಟಿಕೆಗೆ ಸದಾ ತಮ್ಮ ಜೊತೆ ಇರುತ್ತೇನೆಂದು ಶುಭ ಕೋರಿದರು. ಹಾಗೆ ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮಾತನಾಡಿ, ಸಂಘದ ಸ್ವಂತ ಕಟ್ಟಡಕ್ಕೆ 5 ಲಕ್ಷ ರೂ. ಕೊಡುತ್ತೇನೆ. ನಿಮ್ಮ ಒಳ್ಳೆಯ ನಿರ್ಣಯಕ್ಕೆ ನಾನು ಜೊತೆಗಿರುತ್ತೇನೆ ಎಂದು ಶುಭಾಶಯ ಕೋರಿದರು. ಹಾಗೆ ವೇದಮೂರ್ತಿ ಶ್ರೀನಿವಾಸ್ ಭಟ್ ಮಾತನಾಡಿ ಗೋವಿಗೂ ಮತ್ತು ಈ ಕ್ಷೇತ್ರಕ್ಕೂ ಇರುವ ಐತಿಹಾಸಿಕ ಚಿತ್ರಣವನ್ನು ಉತ್ಪಾದಕರಿಗೆ ತಿಳಿಸಿ ಗೋ ರಕ್ಷಣೆ ಜೊತೆಗೆ ಹೈನುಗಾರಿಕೆ ಇವೆರಡನ್ನು ಜೊತೆ ಜೊತೆಯಾಗಿ ತೆಗೆದುಕೊಂಡು ಹೋಗಬೇಕು. ಅದರೊಟ್ಟಿಗೆ ಸಂಘವನ್ನು ಸದೃಢ ಮಾಡಬೇಕು. ನಾವು ನೀವೆಲ್ಲರೂ ಸಂಘದ ಜೊತೆ ಇರೋಣ ಎಂದು ಕರೆಕೊಟ್ಟರು. ನಂತರ ಸಂಘದ ಲಾಭಾಂಶದ ಚೆಕ್’ನ್ನು ಹಾಲು ಉತ್ಪಾದಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲ್ ಕೃಷ್ಣ ಹೆಗಡೆ ಕಲ್ಲಳ್ಳಿ ಮತ್ತು ಸಹಕಾರಿ ಸಂಘಗಳ ನಿಬಂಧಕ ಟಿ.ವಿ ಶ್ರೀನಿವಾಸ್ ಹಾಗೂ ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಪ್ರಮುಖರಾದ ಎಸ್. ಎಸ್. ಬಿಜೂರ ಮತ್ತು ಗ್ರಾಮ ಪಂಚಾಯತ್ ಪಿ ಡಿ ಓ ಸೌಮ್ಯ ಹೆಗಡೆ ಹಾಗೂ ಆಡಳಿತ ಕಮಿಟಿಯ ಉಪಾಧ್ಯಕ್ಷರು ಸದಸ್ಯರುಗಳು ಮತ್ತು ಹಾಲು ಉತ್ಪಾದಕ ಸೇರಿ ಸದಸ್ಯರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಅಧ್ಯಕ್ಷರಾದ ಪ್ರವೀಣ್ ಶಿವಲಿಂಗ ಪಾಟೀಲ್ ತೆಪ್ಪಾರ್ ಪ್ರಸ್ತಾವಿಕ ಹಾಗೂ ಸ್ವಾಗತ ಕೋರಿದರು ಕಾರ್ಯಕ್ರಮದ ನಿರೂಪಣೆಯನ್ನು ಕರುಣಾಕರ ಹೆಗಡೆ ಕಲ್ಲಳ್ಳಿ
ಅವರು ಹಾಗೂ ವಂದನಾರ್ಪಣೆಯನ್ನು ನಾರಾಯಣ ದಾಕು ಮರಾಠಿ ಮೇಲುಕುಪ್ಪನವರು ನೆರವೇರಿಸಿದರು.