ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆಯು ಜರುಗಿತು. ಇಡಗುಂದಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಗಿರುವ ಚನ್ನವೀರ ಕೆ. ಸ್ನೇಹಸಾಗರ ವಸತಿ ಶಾಲೆಯಲ್ಲಿ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ವಿಶ್ವ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ಯೋಗ ದಿನಾಚರಣೆಯ ಸಮಯದಲ್ಲಿ ಯೋಗಾಭ್ಯಾಸವನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರು.
ಯೋಗದಿಂದ ದೈಹಿಕ ಸಾಮರ್ಥ್ಯ ಮತ್ತು ಪ್ರಾಣಾಯಾಮದಿಂದ ಮಾನಸಿಕ ಸ್ವಾಸ್ಥ್ಯವು ಉತ್ತಮಗೊಳ್ಳುವುದರಿಂದ ಎಲ್ಲರೂ ಪ್ರತಿನಿತ್ಯ ಯೋಗಾಭ್ಯಾಸವನ್ನು ಮುಂದುವರಿಸಿಕೊಂಡು ಶಾರೀರಿಕ ಚೈತನ್ಯವನ್ನು ಬೆಳೆಸಿಕೊಳ್ಳಿ ಎಂದು ದೈಹಿಕ ಶಿಕ್ಷಕರಾದ ಬಾಬು ಎಂ.ಟಿ. ಹೇಳಿದರು.
ಯೋಗಾ ಅಭ್ಯಾಸವು ಶಾಲೆಯ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಿತು. ಶಾಲಾ ಸಹಶಿಕ್ಷಕಿ ಎ.ಬಿ. ಹೀರೆಮಠ್ ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ವಿದ್ಯಾ ಭಟ್ ಸ್ವಾಗತಿಸಿದರು. ಮಂಜುಳಾ ಎಸ್. ವಂದನಾರ್ಪಣೆಯನ್ನು ಮಾಡಿದರು. ಶಾಲಾ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಲ್.ಭಟ್, ಶಾಲೆಯ ಆಡಳಿತಾಧಿಕಾರಿ ಆಗಿರುವ ಎನ್.ಎ. ಭಟ್ ಹಾಗೂ ಶಿಕ್ಷಕ, ಶಿಕ್ಷಕೇತರ ವರ್ಗದವರು ಹಾಗೂ ಮಕ್ಕಳು ಪ್ರಾಣಾಯಾಮ ಮತ್ತು ವಿವಿಧ ಯೋಗಾಸನಗಳ ಚಟುವಟಟಿಕೆಯಲ್ಲಿ ಪಾಲ್ಗೊಂಡಿದ್ದರು.