• Slide
    Slide
    Slide
    previous arrow
    next arrow
  • ನಮಾಮಿ ಗಂಗೆ ಈಗ ಹಮಾಮಿ ಗಂಗೆಯಾಗಿದೆ: ಶಾಸಕ ಸೈಲ್

    300x250 AD

    ಕಾರವಾರ: ಕೋಣೆನಾಲಾ ಸ್ವಚ್ಛಗೊಳಿಸುತ್ತೇವೆಂದು ಈ ಹಿಂದಿನ ಶಾಸಕಿ ಘೋಷಿಸಿದ್ದ ನಮಾಮಿ ಗಂಗೆ ಈಗ ಹಮಾಮಿ ಗಂಗೆಯಾಗಿದೆ ಎಂದು ಶಾಸಕ ಸತೀಶ್ ಸೈಲ್ ವ್ಯಂಗ್ಯವಾಡಿದರು.

    ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಶಾಸಕಿ ಕಾಲದ ಕಳಪೆ ಕಾಮಗಾರಿಗಳ ಬಗ್ಗೆ ಹೇಳುವುದೇ ಬೇಡ, ಅದು ಈಗ ಜನರಿಗೆ ಕಾಣತೊಡಗಿದೆ. ಅಂಕೋಲಾದ ರಸ್ತೆಗಳನ್ನ ಚುನಾವಣೆಯ ಕಾರಣಕ್ಕೆ ತರಾತುರಿಯಲ್ಲಿ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಮಳೆಗಾಲದಲ್ಲಿ ಐಆರ್‌ಬಿ ಮಾಡಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡಿದ್ದೇನೆ. ಅಲಗೇರಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಗುರುವಾರ ಸಾರ್ವಜನಿಕರ ಸಭೆ ಕರೆಯುತ್ತೇನೆ. ಜನರ ಪರವಾಗಿ ಕೆಲಸ ಮಾಡುವೆ ಎಂದು ಹೇಳಿದರು. ಕೇಂದ್ರ ಸರ್ಕಾರ ಅಕ್ಕಿ ಕೊಡಬೇಕು. ನಾವು ಪುಕ್ಕಟೆ ಅಕ್ಕಿ ಕೇಳುತ್ತಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಸಮರ್ಥರಿದ್ದು, ಐದೂ ಗ್ಯಾರಂಟಿಗಳನ್ನು ಈಡೇರಿಸುವೆವು. ಉಚಿತ ಸಾರಿಗೆ ಯಶಸ್ವಿಯಾಗಿದೆ. ಈ ಯಶಸ್ಸು ನೋಡಿ ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದರು.

    300x250 AD

    ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಅಕ್ಕಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರಕ್ಕೆ ನಾವು ಅಕ್ಕಿ ಕೊಡಿ, ಹಣ ನೀಡುತ್ತೇವೆ ಎಂದು ಕೇಳಿಕೊಂಡರು ಅಕ್ಕಿ ನೀಡುತ್ತಿಲ್ಲ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸಿದಂತಾಗುತ್ತದೆ. ಒಂದು ಜನಪಯೋಗಿ ಕೆಲಸಕ್ಕೆ ಅಡ್ಡಗಾಲು ಹಾಕುವ ಬಿಜೆಪಿ ಮಾನವೀಯವಾಗಿ ನಡೆದುಕೊಳ್ಳುತ್ತಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ ಅಕ್ಕಿಕೊಡುವ ವಿಷಯದಲ್ಲಿ ಸಣ್ಣತನ ತೋರುತ್ತಿದೆ ಎಂದು ಕಿಡಿಕಾರಿದರು.
    ನಾವು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಈಗಲೂ ಅಕ್ಕಿ ಕೊಡಿ, ಅದಕ್ಕೆ ಪ್ರತಿಯಾಗಿ ಹಣ ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತೇವೆ. ಅಕ್ಕಿ ಕೊಡದಿದ್ದರೆ ನಾವೇನೂ ಯೋಜನೆ ನಿಲ್ಲಿಸುವುದಿಲ್ಲ. ಅಕ್ಕಿಯನ್ನು ಪರ್ಯಾಯ ಮೂಲಗಳಿಂದ ತಂದು ಜನರಿಗೆ ಅಕ್ಕಿ ಕೊಡುತ್ತೇವೆ. ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದು, ನಾವು ಜನರಿಗೆ ಕೊಟ್ಟ ಭಾಷೆಯಿಂದ ವಾಪಾಸ್ ಹೋಗುವುದಿಲ್ಲ ಎಂದರು.
    ಶಾಸಕನಾಗಿ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ಅರಣ್ಯ ಅತಿಕ್ರಮಣ, ನೀರಿನ ಸಮಸ್ಯೆ ಅಗಾಧವಾಗಿವೆ. ಇವೆಲ್ಲ ಪರಿವಾರಕ್ಕೆ ಸಮಯ ಬೇಕು. ಶಿರಸಿಯ ಬೃಹತ್ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಶಂಭು ಶೆಟ್ಟಿ, ಕಾಂಗ್ರೆಸ್‌ನ ಪ್ರಮುಖರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top