• Slide
    Slide
    Slide
    previous arrow
    next arrow
  • ನೀರಿನ ಹಾಹಾಕಾರ: ಸರಕಾರಿ ತೆರೆದ ಬಾವಿಗಳ ಆಳಪಡಿಸಲು ಮನವಿ

    300x250 AD

    ಸಿದ್ದಾಪುರ: ಪಟ್ಟಣಕ್ಕೆ ಕುಡಿಯವ ನೀರಿನ ಹಾಹಾಕಾರ ಎದ್ದಿರುತ್ತದೆ. ಆದರಿಂದ ಸರಕಾರಿ ತೆರೆದ ಬಾವಿಗಳನ್ನು ಆಳಪಡಿಸಬೇಕು. ಕುಡಿಯುವ ನೀರಿನ ಬವಣೆ ಬರದಿರಲು ಬಾವಿಯ ಆಳ ತಗೆಸುವ ಕಾರ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ತುರ್ತು ವ್ಯವಸ್ಥೆ ಮಾಡಬೇಕು ಎಂದು ನವಜಾಗೃತ ವೇದಿಕೆ ಆಗ್ರಹಿಸಿದೆ.

    ಈ ಕುರಿತು ವೇದಿಕೆಯ ಪ್ರಮುಖರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅರೆಂದೂರು ಹೊಳೆಯಿಂದ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅತಿಯಾದ ಬರಗಾಲ ಬದ್ದಿರುವುದರಿಂದ ಹೊಳೆಯಲ್ಲಿ ಮಾರ್ಚ್ ಅಂತ್ಯಕ್ಕೆ ನೀರು ಬತ್ತಿ ಹೋಗಿದೆ. ಈ ಕಾರಣದಿಮದ ಸಿದ್ದಾಪುರ ಪಟ್ಟಣಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಪಟ್ಟಣದ ವಾರ್ಡ ನಂಬರ್ 15 ಹಾಳದಕಟ್ಟಾದಲ್ಲಿ ಸರ್ವೆ ನಂಬರ್153/33ರಲ್ಲಿ ಈಗಾಗಲೆ ತೆರೆದ ಸರಕಾರಿ ಬಾವಿ ಇರುತ್ತದೆ. ಇಲ್ಲಿ ಅತ್ಯಲ್ಪ ನೀರು ಇರುತ್ತದೆ. ನಮ್ಮ ಮೌಖಿಖ ಮನವಿಗೆ ಮುತುವರ್ಜಿಯಿಂದ ಬಾವಿಯ ಹೂಳನ್ನು ತೆಗೆಸಿದ್ದಿರಿ. ಬಾವಿಯ ಕೆಲಸಗಾರರು ಹಾಲಿ ಬಾವಿಗೆ ಇನ್ನೂ 5 ಅಡಿಯಷ್ಟು ಆಳ ತಗೆದರೆ ಇಲ್ಲಿ ಶಾಶ್ವತ ಜಲ ಇರಲಿದೆಯೆಂದು ಹೇಳಿರುತ್ತಾರೆ. ಆದ್ದರಿಂದ ಜನಪರ ಕಾಳಜಿ ಇರುವ ತಾವೂ ಮುಂದಿನ ದಿನಗಳಲ್ಲಿ ಹಾಳದಕಟ್ಟಾದಲ್ಲಿ ನಾಗರಿಕರಿಗೆ ಕುಡಿಯುವ ನೀರಿನ ಬವಣೆ ಬರದಿರಲು ಬಾವಿಯ ಆಳ ತಗೆಸುವ ಕಾರ್ಯ ಮಾಡುವ ಮುಖೇನ ಆಸರೆಯಾಗಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
    ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕೊನ್ನೂರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಅಮರನಾತ ವಿ.ಭಟ್ಟಿ, ಕಾರ್ಯದರ್ಶಿ ವಾಸುದೇವ ಬಿಳಗಿ, ಪ್ರಮುಖರಾದ ಉದಯ ಆಚಾರಿ, ರಾಮಚಂದ್ರ ಹೆಗಡೆ, ಸಂತೋಷ ಆಚಾರಿ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top