ಕುಮಟಾ: ಗೋಕರ್ಣದ ಕುಡ್ಲೆ ಬೀಚ್‌ನ ಶಾಂತಿ ಕೃಷ್ಣ ರೆಸಿಡೆನ್ಸಿಯಲ್ಲಿ ಯೋಗ ಸಾಧಕರ ವಾರ್ಷಿಕ ಸಮಾವೇಶ ನಡೆಯಿತು.
ಯೋಗ ಸಾಧಕರ ವಾರ್ಷಿಕ ಸಮಾವೇಶದಲ್ಲಿ ಯೋಗದ ಬಗ್ಗೆ ಮಾಹಿತಿ ನೀಡಿದ ಸಂಜೀವನಿ ಯೋಗಕೇಂದ್ರ ರಾಜ್ಯಾಧ್ಯಕ್ಷ ಜಿವೋತ್ತಮ ನಾಯಕ, ಯೋಗ ಜೀವನದ ಅವಿಭಾಜ್ಯ ಅಂಗವಾಗಿದೆ. ನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಮುದ್ರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಹದಲ್ಲಿ ಶಕ್ತಿ ಸಂಚಲನ ಉಂಟಾಗಿ ರೋಗ ನಿರೋದಕ ಶಕ್ತಿ ಹೆಚ್ಚುವುದಲ್ಲದೇ ಗಂಭಿರ ಕಾಯಿಲೆಗಳು ದೂರವಾಗಿಸುವ ಶಕ್ತಿ ಇದೆ. ಯೋಗ ಭಾರತದಲ್ಲಿ ಹುಟ್ಟಿ ಪಾಶ್ಚಾತ್ಯ ದೇಶದಲ್ಲಿ ಆಕರ್ಷಿತವಾಗುತ್ತಿದ್ದು ಪ್ರದಾನಿ ಮೋದಿಯವರ ನಾಯಕತ್ವದಿಂದಾಗಿ ಇಂದು ವಿಶ್ವಕ್ಕೆ ಯೋಗ ಪರಿಚಿತವಾಗಿದೆ. ತನ್ಮೂಲಕ ಜೂನ್ 21 ರಂದು ವಿಶ್ವಾದ್ಯಂತ ಯೋಗ ದಿನಾಚರಣೆ ಆಚರಿಸುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮಯ ಸಂಗತಿ. ಆದರೆ ಕಳೆದ 15 ವರ್ಷಕ್ಕೂ ಮುಂಚಿತವಾಗಿ ನಾವು ಜಿಲ್ಲೆಯ ವಿವಿಧೆೆಡೆ ಯೋಗ ಶಿಬಿರ ನಡೆಸುತ್ತಾ ಬಂದಿರುವುದಾಗಿ ತಿಳಿಸಿದರು. ಯೋಗ ಸಾಧಕರಿಗೆ ಯೋಗದ ಮಜಲುಗಳನ್ನು ತಿಳಿಸಿದ ಅವರು ಪ್ರಯೋಜನ ಪಡೆಯಬೇಕೆಂದರು.
ಯೋಗಪಟು ಉಷಾ ರಮೇಶ ಪ್ರಸಾದ ಕೆಲವು ವಿಶೇಷ ಯೋಗಾಸನಗಳನ್ನು ಸಾದರ ಪಡಿಸಿ ತಾರುಣ್ಯ ಲವಲವಿಕೆ ಸದಾ ಚೈತನ್ಯವನ್ನು ಯೋಗದಿಂದ ಪಡೆಯಬಹುದಾಗಿದ್ದು, ಪ್ರತಿನಿತ್ಯ ಯೋಗಾಬ್ಯಾಸ ಮಾಡಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು.
ಮುಖ್ಯ ಅತಿಥಿ ಯೋಗ ಪಟು ನಾಗೇಂದ್ರ ಭಟ್ ವಯಸ್ಸಾದವರು ಬಲವಂತವಾಗಿ ದಂಡಿಸಬಾರದು. ಇದರಿಂದ ಪ್ರಯೋಜನಕಿಂತ ಅಪಾಯವೇ ಹೆಚ್ಚು ಎಂದ ಅವರು ದೇಹಕ್ಕೆ ಒಗ್ಗುವ ಸರಳ ಯೋಗದಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬಹುದೆಂದರು.
ಯೋಗ ನಡೆಸಲು ಸ್ಥಳಾವಕಾಶ ನೀಡಿದ ವಿದ್ವಾನ ಮೇಯರ್ ಕೃಷ್ಣಮೂರ್ತಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜಯಶ್ರೀ ನಿರ್ವಾಣೇಶ್ವರ ಉಷಾ ರಮೇಶ ಪ್ರಸಾದ ವ್ಯವಸ್ಥೆಗೊಳಿಸಿದರು. ಸುಷ್ಮಾ ನಿರ್ವಾಣೇಶ್ವರ ಲಕ್ಷ್ಮಿ ಪ್ರಾರ್ಥಿಸಿದರು. ಡಾ. ಶೀಲಾ ಹೊಸ್ಮನೆ ನಿರೂಪಿಸಿದರು.