• Slide
    Slide
    Slide
    previous arrow
    next arrow
  • ಇಡೀ ದೇಶವನ್ನು ಹಲಾಲ್‌ಮುಕ್ತ ಮಾಡುವುದೇ ಮುಖ್ಯ ಧ್ಯೆಯ: ಮೋಹನ ಗೌಡ

    300x250 AD

    ಗೋವಾ:- ಹಲಾಲ್ ಅರ್ಥವ್ಯವಸ್ಥೆ ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಲಾಲ್ ಇದು ಮಾಂಸಕ್ಕೆ ಸೀಮಿತವಾಗಿರದೇ ಪ್ರತಿಯೊಂದು ಉತ್ಪನ್ನ ಅಂದರೆ, ಸಸ್ಯಹಾರ ಉತ್ಪನ್ನಗಳು, ಇಲೆಕ್ಟ್ರಾನಿಕ್  ವಸ್ತುಗಳು, ಔಷಧಿಗಳು, ಆಸ್ಪತ್ರೆಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶಿಸಿದೆ. ಇವತ್ತು  ಹಲಾಲ್ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಇಸ್ಲಾಮಿಕ್ ಸಂಘಟನೆಗಳು ಸಂಗ್ರಹಿಸುತ್ತಿವೆ. ನಮ್ಮ ದೇಶದಲ್ಲಿ ಎಫ್‌ಎಸ್‌ಎಸ್‌ಎಐ  ಮತ್ತು ಎಫ್‌ಡಿಐದಂತಹ ಕೇಂದ್ರ ಸರಕಾರದ ಪ್ರಮಾಣಿಕೃತ ಸಂಸ್ಥೆಗಳಿರುವಾಗಲೂ ಭಾರತದಲ್ಲಿ ಕಾನೂನುಬಾಹಿರವಾಗಿ ಹಲಾಲ್ ಪ್ರಮಾಣಪತ್ರವನ್ನು ಮುಸಲ್ಮಾನ ಸಂಘಟನೆಗಳು ನೀಡುತ್ತಿವೆ. ಇದರಿಂದ ದೊರೆತ ಹಣವನ್ನು ಭಯೋತ್ಪಾದಕರಿಗೆ ಕಾನೂನು ಸಹಾಯಕ್ಕೆ ಬಳಕೆಯಾಗುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ. ಸಮಸ್ತ ಹಿಂದೂ ಸಂಘಟನೆಗಳು ಹಲಾಲ್ ಅರ್ಥವ್ಯಸಸ್ಥೆ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕಳೆದ ವರ್ಷ ಹಲಾಲ್ ಸಕ್ತಿವಿರೋಧಿ ಸಮಿತಿಯನ್ನು ರಚಿಸಿ ಅನೇಕ ಜನಜಾಗೃತಿ ಕಾರ್ಯಗಳಾದ ವ್ಯಾಖ್ಯಾನಗಳಾದಿ ಮಾಡಲಾಯಿತು. ಕರ್ನಾಟಕ ರಾಜ್ಯದಲ್ಲಿ ಹಲಾಲ್‌ಮುಕ್ತ ದೀಪಾವಳಿ, ಹಲಾಲ್‌ಮುಕ್ತ ಯುಗಾದಿಯ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದೆವು. ಇಷ್ಟಕ್ಕೇ ಸೀಮಿತವಾಗಿರದೇ ಇಡೀ ದೇಶವನ್ನು ಹಲಾಲ್‌ಮುಕ್ತ ಮಾಡುವುದು ನಮ್ಮ ಧ್ಯೆಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದರು. ಅವರು ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಮಾತನಾಡುತ್ತಿದ್ದರು.

    ನಾವೆಲ್ಲರೂ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಹಭಾಗಿಯಾಗುವೆವು !- ಪೂ. ಶ್ರೀ. ಷ. ಬ್ರ. ಪ್ರ.108 (ಡಾ.) ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮೀಜಿ: ನಮ್ಮ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸದಾ ಸಹಭಾಗಿಯಾಗುವೆವು ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಎಲ್ಲೇ ಹಿಂದೂ ಧರ್ಮದ ಮೇಲೆ ಆಘಾತವಾದರೆ ಆಗ ಅಲ್ಲಿ ಕೂಡ ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ, ಅಖಂಡ ಹಿಂದುಸ್ಥಾನವು ಹಿಂದೂ ರಾಷ್ಟ್ರವೇ ಆಗಿದೆ. ಆದರೆ ಅದನ್ನು ಸೆಕ್ಯುಲರ್ ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತದಲ್ಲಿ ವಿವಿಧ ಸಂಪ್ರದಾಯಗಳಿದ್ದರೂ ಎಲ್ಲರೂ ಹಿಂದೂ ಧರ್ಮದಂತೆ ಆಚರಣೆ ಮಾಡುತ್ತಾರೆ. ಆದ್ದರಿಂದ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಈ ದೇಶದಲ್ಲಿ ಲಿಂಗಾಯತ ಮತ್ತು ವೀರಶೈವರನ್ನು ಬೇರೆಬೇರೆ ಎಂದು ಹೇಳುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ ಅದನ್ನು ಒಡೆಯಿರಿ ಮತ್ತು ರಾಜ್ಯವಾಳಿರಿ ಈ ನೀತಿ ಅವಲಂಬಿಸಿ ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಲಿಂಗಾಯತರು ಹಿಂದುಗಳೀಂದ ಬೇರೆಯಾಗಿರದೇ ಅಭಿನ್ನರಾಗಿದ್ದಾರೆ. ವೀರಶೈವ ಲಿಂಗಾಯತರು ಹಿಂದೂಗಳ ಒಂದು ಭಾಗವಾಗಿದ್ದಾರೆ, ಎಂದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top