ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.22,ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 5 ಘಂಟೆ ವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನೀಲೇಕಣಿ ಮಾರ್ಗದ ರಾಘವೇಂದ್ರ ಸರ್ಕಲ್, ಕೋರ್ಟರಸ್ತೆ, ಪಡ್ತಿಗಲ್ಲಿ, ಜೂ ಸರ್ಕಲ್, ಎಸ್.ಬಿ.ಐ.ಸರ್ಕಲ್, ಸಿ.ಪಿ. ಬಜಾರ, ನಟರಾಜ ರೋಡ, ದೇವಿಕೆರೆ, ಐದು ರಸ್ತೆ, ಕುಮಟಾ ರೋಡ್, ಗಾಂಧಿನಗರ, ವಿಜಯನಗರ, ಭೀಮನಗುಡ್ಡ, ಮಾರ್ಕೆಟ್, ಮುಸ್ಲಿಂಗಲ್ಲಿ, ವೀರಭದ್ರಗಲ್ಲಿ, ಖಾಜಿಗಲ್ಲಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.