• Slide
    Slide
    Slide
    previous arrow
    next arrow
  • ಜಾನಪದ ತಜ್ಞೆ ಶಾಂತಿ ನಾಯಕರ ಪುಸ್ತಕ ವಿತರಣೆ

    300x250 AD

    ಹೊನ್ನಾವರ: ಖರ್ವಾ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿ ಹಿರಿಯ ಜಾನಪದ ತಜ್ಞೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಿ ನಾಯಕ ಅವರ ಸಾಹಿತ್ಯಿಕ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

    ಜಾನಪದ ತಜ್ಞೆ ಶಾಂತಿ ನಾಯಕ ಪುಸ್ತಕ ಶಾಲೆಗೆ ವಿತರಿಸಿದ ಬಳಿಕ ಮಾತನಾಡಿ, ವಿದ್ಯಾರ್ಥಿಗಳಿಂದಲೇ ಅನೇಕ ಬಗೆಯ ಆಟಗಳು, ಒಗಟುಗಳ ಸಂಗ್ರಹವನ್ನು ಮಾಡಿದ್ದೇನೆ. ನಿಮ್ಮಂಥ ವಿದ್ಯಾರ್ಥಿಗಳಲ್ಲಿ ಅಪಾರವಾದಂತಹ ಜಾನಪದ ಸಂಪತ್ತಿದೆ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ವೃದ್ದಿಸಿಕೊಳ್ಳುವಂತೆ ಸಲಹರ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಅಧ್ಯಕ್ಷ ಎಸ್ ಎಚ್ ಗೌಡ ಮಾತನಾಡಿ ಸಾಹಿತ್ಯ ಪರಿಷತ್ತಿನ ಉದ್ದೇಶವನ್ನು ತಿಳಿಸಿ ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಮಕ್ಕಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    300x250 AD

    ಸಾಹಿತಿ ಸುಧಾ ಭಂಡಾರಿಯವರು ಶಾಂತಿ ನಾಯಕ ಅವರ ಕೃತಿಗಳನ್ನು ,ಜಾನಪದ ಕ್ಷೇತ್ರ ಅಧ್ಯಯನ ಕಾರ್ಯ ಹಾಗೂ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಮಾಹಿತಿ ನೀಡಿದರು. ಮೋಹನ್ ನಾಯ್ಕ, ಜಿ.ಆರ್.ಗೌಡ, ಮುಖ್ಯ ಶಿಕ್ಷಕ ಷಣ್ಮುಖ ನಾಯ್ಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ರಚಿಸಿದ ಚುಟುಕುಗಳನ್ನು, ಕವನಗಳನ್ನು ವಾಚಿಸಿದರು. ಶಾಂತಿನಾಯಕ ಅವರು ಶಾಲೆಗೆ ತಾವು ಬರೆದ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು. ವೇದಿಕೆಯಲ್ಲಿ ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಟಿ.ಹೆಚ್.ಗೌಡ, ಗ್ರಂಥಪಾಲಕ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ.ಗೌಡ, ಶಾಲೆಯ ಶಿಕ್ಷಕರು, ಪೂರ್ವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top