ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪಂಚಾಯತ ವ್ಯಾಪ್ತಿಯ ಪರಿಶಿಷ್ಟ ವರ್ಗದ ಬಡ ಮಹಿಳೆಯ ಓರ್ವಳ ವಾಸದ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋಲಶಿರ್ಸಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಣಜಿ ಗ್ರಾಮದ ಪರಿಶಿಷ್ಟ ವರ್ಗದ ಬಡ ಮಹಿಳೆ ಬಂಗಾರಿ ಮಾದೇವ ಚಲುವಾದಿ ರವರ ವಾಸದ ಮನೆಯ ಹಾಳಾಗಿತ್ತು. ಮನೆಯ ಮೇಲಚಾವಣಿ ಶಿಥಿಲಗೊಂಡಿತ್ತು. ಇದರಿಂದ ಮಳೆಗಾಲದಲ್ಲಿ ವಾಸಮಾಡುವುದು ದರ‍್ಥರವಾಗಿತ್ತು. ಈ ಕುರಿತು ಅದನ್ನು ದುರಸ್ಥಿ ಮಾಡಿಕೊಡುವಂತೆ ಗ್ರಾಮ ಪಂಚಾಯತಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ ಸ್ಥಳ ಪರಿಶಿಲನೆ ಮಾಡಿದರು.ಬಂದಿರುವುದು ಮಳೆಗಾಲ ತಕ್ಷನದಲ್ಲಿ ಏನನ್ನು ಮಾಡಲು ಸಾದ್ಯ ಎಂದು ಯೋಚನೆಯನ್ನು ಮಾಡಿದರು.ಇವರಿಗೆ ನೇರವಾಗಬೇಕು ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರೊ0ದಿಗೆ ಹಾಗೂ ಸಿಬ್ಬoದಿಗಳೊಂದಿಗೆ ಚರ್ಚೆಯನ್ನು ಮಾಡಿದರು.ಎಲ್ಲರ ಸಹಕಾರವನ್ನು ಪಡೆದು ಅವರ ಮನೆಯನ್ನು ದುರಸ್ಥಿ ಮಾಡಿಸಿ ಕೊಟ್ಟಿದ್ದಾರೆ.
ಬಂಗಾರಿ ಮಾದೇವ ಚಲುವಾದಿ ರವರ ಮನೆಯ ಮುಂಚಾವಣಿಯನ್ನು ಗ್ರಾಮ ಪಂಚಾಯತ ಸಿಬ್ಬಂದಿಗಳು ಶ್ರಮದಾನ ಮಾಡುವ ಮೂಲಕ ಅಚ್ಚುಕಟ್ಟಾಗಿ ದುರಸ್ಥಿಗೊಳಿಸಿ ಕೊಡಲಾಗಿದೆ. ಇದಕ್ಕೆ ಬೇಕಾಗಿರುವ ಹಂಚು ಹಾಗೂ ಅಲ್ಪ ಅನುಧಾನವನ್ನು ಕೊಟ್ಟು ಸಹಕರಿಸಿದ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಅಭಿನಂದನಾರ್ಹರಾಗಿದ್ದಾರೆ.