Slide
Slide
Slide
previous arrow
next arrow

ಜೂ.21ಕ್ಕೆ ‘ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ’ ಕಾರ್ಯಕ್ರಮ

300x250 AD

ಶಿರಸಿ: ಯುವ ಪರಿಷತ್ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್, ಎಂ.ಇ.ಎಸ್. ಶಿಕ್ಷಣ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ಶಿರಸಿ ಮತ್ತು ಪೊಲೀಸ್ ಇಲಾಖೆ ಇವರ ಸಹಕಾರದೊಂದಿಗೆ ‘ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ’ ಎಂಬ ಕಾರ್ಯಕ್ರಮವನ್ನು ಜೂ.21, ಬುಧವಾರದಂದು ಬೆಳಿಗ್ಗೆ 11ಗಂಟೆಗೆ,ನಗರದ ಎಂಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಲಿದ್ದಾರೆ. ಎಂ.ಇ.ಎಸ್. ಶಿಕ್ಷಣ ಸಂಸ್ಥೆ,ಅಧ್ಯಕ್ಷ ಜಿ. ಎಂ. ಹೆಗಡೆ, ಮುಳಖಂಡ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಆರಕ್ಷಕ ಉಪವೀಕ್ಷಕ ಸುಧೀರ ಎಂ. ಹೆಗಡೆ, ಡಿ.ವೈ.ಎಸ್.ಪಿ. ಗಣೇಶ ಕೆ. ಎಲ್., ಸ್ವಯಂ ಅಧ್ಯಕ್ಷ ಆರ್. ಎಸ್. ಹೆಗಡೆ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top