ಗೋಕರ್ಣ: ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಮೈಸೂರಿನಲ್ಲಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಯನ್ನು ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯಿತು. ಸಮಾಜದ ಅಭಿವೃದ್ಧಿಯ ಕಾರ್ಯ ಮುಂದೆ ತೆಗೆದುಕೊಳ್ಳಬೇಕಾದ ನಿರ್ಣಯ ಇವುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ಡಿ.ಎಚ್. ಮಂಚೇಗೌಡ, ರಾಜ್ಯಾಧ್ಯಕ್ಷ ಜಿ.ಎನ್.ಸಂತೋಷ, ರಾಜ್ಯ ಮಹಿಳಾ ಅಧ್ಯಕ್ಷೆ ಅಂಬಿಕಾ ನಾಯಕ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಸಿದ್ಧಾಪುರ, ವಸಂತಕುಮಾರ, ಕರಾವಳಿ ವಿಭಾಗದ 4 ಜಿಲ್ಲೆಯ ಮಹಿಳಾಧ್ಯಕ್ಷ ಗಾಯತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯ : 1) ಈಡಿಗ ರಾಷ್ಟ್ರೀಯ ಮಹಾ ಮಂಡಳಿ ಎಂಬ ಹೆಸರಿನ ಜೊತೆ ಪ್ರಾದೇಶಿಕ ಹೆಸರುಗಳಾದ ಬಿಲ್ಲವ, ದೀವರ, ನಮಧಾರಿ ಹೆಸರುಗಳನ್ನು ಸೇರಿಸಿ ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸಂಘಟನೆ ಮಾಡುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಯಿತು. 2) 2023 ಆಗಸ್ಟ್ 15ನೇ ತಾರೀಕಿನೊಳಗಡೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ 1 ದಿನದ ಚಿಂತನ ಶಿಬಿರಗಳನ್ನು ಮುಗಿಸಿಸೆಪ್ಟೆಂಬರ್ 30ನೇ ತಾರೀಕ್ನೊಳಗಡೆ ತಾಲೋಕು ಮಟ್ಟದ ಚಿಂತನ ಶಿಬಿರ ಮತ್ತು ನವೆಂಬರ್‌ನೊಳಗಡೆ ಗ್ರಾಮ ಮಟ್ಟದ ಚಿಂತನ ಶಿಬಿರ ನಡೆಸಲು ನಿರ್ಣಯ ತೆಗೆದುಕೊಳ್ಳಲಾಯಿತು. 3) ಜೂನ್ 26ನೇ ತಾರೀಕು ಏಕಕಾಲಕ್ಕೆ ಪತ್ರಿಕಾಗೋಷ್ಠಿ ಮೂಲಕ ಸಮಾಜದ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ ಒತ್ತಡ ತರಲು ನಿರ್ಣಯ ತೆಗೆದುಕೊಳ್ಳಲಾಯಿತು.