Slide
Slide
Slide
previous arrow
next arrow

2025ರಲ್ಲಿ ನಾರಾಯಣಗುರು ಶಕ್ತಿಪೀಠದ ನೇತೃತ್ವದಲ್ಲಿ ವಿಶ್ವಶಾಂತಿ ಸಮ್ಮೇಳನ: ಪ್ರಣವಾನಂದ ಶ್ರೀ

300x250 AD

ಗೋಕರ್ಣ: ಅರಬ್ ದೇಶವಾಗಿರುವ ಕತರ್, ಕುವೈತ್, ಬಹರಿನ್‌ನಲ್ಲಿರುವ ಶ್ರೀ ನಾರಾಯಣಗುರು ದೇವಸ್ಥಾನದ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಭೇಟಿ ನೀಡಿ ದರ್ಶನ ಪಡೆದರು. ಅಲ್ಲಿ ನೆಲೆಸಿರುವ ಈಡಿಗ ಸಮುದಾಯದ ಮುಖಂಡರ ಜತೆ ಚರ್ಚೆ ನಡೆಸಿದರು.

ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ವಿಶ್ವಾದ್ಯಂತ ಪ್ರಚಾರ ಮಾಡುವ ಹಿನ್ನೆಲೆಯಲ್ಲಿ 2025 ರಲ್ಲಿ ಅರಬ್ ದೇಶಗಳು ಮತ್ತು ಯುರೋಪಿಯನ್ ದೇಶಗಳು ಸೇರಿ ಮಲೆಶಿಯಾದಲ್ಲಿ ವಿಶ್ವ ಶಾಂತಿ ಸಮ್ಮೇಳನವನ್ನು ನಾರಾಯಣಗುರು ಶಕ್ತಿಪೀಠದ ನೇತೃತ್ವದಲ್ಲಿ ನಡೆಸುವ ಬಗ್ಗೆ ಚರ್ಚಿಸಿದರು. ಈ ಮೂರು ದೇಶಗಳಲ್ಲಿ ಈಡಿಗ ಸಮುದಾಯದವರು ಮಾಡುವ ಉದ್ಯಮಗಳ ಬಗ್ಗೆ ಕೂಡ ಚರ್ಚೆ ನಡೆಸಿದರು. ಅಲ್ಲಿ ನಡೆಸಿರುವ ಸಮಾಜದ ಪ್ರಮುಖರ ಮನೆಗಳಿಗೆ ಶ್ರೀಗಳು ಬೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

300x250 AD

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಈಡಿಗ ಮಹಾಮಂಡಳಿ ಬಹರಿನ್ ಅಧ್ಯಕ್ಷ ಪ್ರಸಾದ್, ಕತ್ತರ್ ಅಧ್ಯಕ್ಷ ಪುಷ್ಪಜನ್, ಕುವೈತ್ ಅಧ್ಯಕ್ಷ ಸುಧೀರ್ ಜಿ.ಸಿ, ಪ್ರಮುಖರಾದ ಅಜೇಶ್, ರಣೇಶ್ ಇತರರಿದ್ದರು.

Share This
300x250 AD
300x250 AD
300x250 AD
Back to top